ಮಂಗಳೂರು, ಅ 17: ನಗರದ ಬುಂದೆರ್ ಪ್ರದೇಶದ ಹಿದಾಯತ್ ಸೆಂಟರ್ ಸಮೀಪದ ಟಯರ್ ಮಳಿಗೆಯೊಂದರಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ ಬೆಂಕಿ ಕಂಡಕೂಡಲೇ ಸ್ಥಳೀಯರು ಅದನ್ನು ನಂದಿಸಲು ಮುಂದಾಗಿದ್ದರಿಂದ ಕೆನ್ನಾಲಿಗೆ ಹೆಚ್ಚು ವ್ಯಾಪಿಸದೆ ಭಾರಿ ದುರಂತ ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲದೆ, ಸುತ್ತಮುತ್ತಲಿನ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಮ್ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಅಂಗಡಿ ಇರುವ ಈ ಸಂಕೀರ್ಣದಲ್ಲಿ 12 ಕ್ಕೂ ಹೆಚ್ಚು ಅಪಾಟರ್್ಮೆಂಟ್ಗಳಿವೆ ಮತ್ತು ಬೆಂಕಿಯಿಂದ ಅಪಾರ ಪ್ರಮಾಣದ ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟವಾಗಬಹುದು. ಯುವಕರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗದೆ ಇದ್ದಿದ್ದರೆ ಈ ಘಟನೆಯು ದೊಡ್ಡ ದುರಂತದಲ್ಲಿ ಅಂತ್ಯವಾಗಬೇಕಿತ್ತು ಎನ್ನಲಾಗಿದೆ ಶಾಟರ್್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿರುವ ಶಂಕೆಯಿದ್ದು, ಅಂಗಡಿ ಮಾಲೀಕರಿಗೆ ಆರು ಲಕ್ಷ ರೂ. ನಷ್ಟವಾಗಿದೆ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.