ಕೆ.ಎಲ್.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಏರಿ್ಡಸಿದ ಅಗ್ನಿ ಸುರಕ್ಷತಾ ಸಪ್ತಾಹ
Fire Safety Week launched at KLE Dr. Prabhakar Kore Hospital
ಬೆಳಗಾವಿ 16: ಅಗ್ನಿ ಅವಘಡಗಳು ಕೆಲವು ಸಂದರ್ಭದಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತದೆ. ಆಸ್ಪತ್ರೆ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಅಗ್ನಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಆಸ್ಪತ್ರೆಯ ನಿರ್ದೇಶಕ ಡಾ. ಎಂ. (ಕರ್ನಲ್) ದಯಾನಂದ ಹೇಳಿದರು. ಕೆ.ಎಲ್.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಏರಿ್ಡಸಿದ ಅಗ್ನಿ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಅಗ್ನಿ ಅಪಘಾತಗಳನ್ನು ತಡೆಗಟ್ಟುವ ವಿಧಾನಗಳು ಪ್ರತಿಯೊಬ್ಬ ಸಿಬ್ಬಂದಿಗೂ ಗೊತ್ತಿರಬೇಕು. ಅದರಿಂದ ಮುಂದಾಗುವ ಅವಘಡಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ. ಆಸ್ಪತ್ರೆಯಲ್ಲಿ ಉದ್ಯೋಗಿಯು ತೊಂದರೆಗೊಳಗಾದರೆ ರೋಗಿಗೂ ಕೂಡ ತೊಂದರೆ. ಅಗ್ನಿಯ ವಿಕೋಪಗಳನ್ನು ತಡೆಯಲು ಸುರಕ್ಷತಾ ಸಾಧನಗಳ ಪರಿಚಯ ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಪಡಿಸಬೇಕು ಎಂದು ಸಲಹೆ ನೀಡಿದರು.
ಕ್ಲಿನಿಕಲ್ ಡೈರೆಕ್ಟರ ಡಾ. ಮಾಧವ ಪ್ರಭು ಮಾತಾನಾಡಿ, ಆಸ್ಪತ್ರೆಯಲ್ಲಿ ಸಂಭವಿಸಬಹುದಾದ ಅಗ್ನಿಯಿಂದ ಸಾಕಷ್ಟು ತೊಂದರೆಯಾಗುತ್ತದೆ. ಅಗ್ನಿ ಸುರಕ್ಷತ ಕುರಿತು ಸಿಬ್ಬಂದಿಗಳು ಜಾಗೃತೆವಹಿಸಬೇಕು ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ತಿಳಿದಿರಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರಂಗನಾಥ ರಾಠೋಡ ಅವರು ಮಾತನಾಡಿ ಯಾವುದೇ ತುರ್ತು ಸಂದರ್ಭದಲ್ಲಿ ನಮ್ಮ ವಿಭಾಗಗವು ಶೀಘ್ರವಾಗಿ ಕಾರ್ಯಾರಂಭ ಮಾಡುತ್ತದೆ. ಕೇವಲ ಅಗ್ನಿ ತಗುಲಿದಾಗ ಮಾತ್ರವಲ್ಲ, ಭೂಕಂಪ, ನೀರಿನಲ್ಲಿ ದೊಡ್ಡ ಅಪಘಾತ, ಬೆಂಕಿ ಅವಘಡ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಅತ್ಯಂತ ಶೀಘ್ರವಾಗಿ ಸ್ಪಂಧಿಸುವ ಇಲಾಖೆ ನಮ್ಮದು. ಜೀವ ರಕ್ಷಣೆಗಾಗಿ ನಾವು ಧುಮಕುತ್ತೇವೆ ಎಂದು ತಿಳಿಸಿದರು. ಆಸ್ಪತ್ರೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಲೋಕೇಶ ಮಾತನಾಡಿದರು. ಆಸ್ಪತ್ರೆಯ ಅಗ್ನಿ ಸುರಕ್ಷಾ ಅಧಿಕಾರಿ ಶಾನೂರ ಲಕ್ಕುಂಡಿ ನಿರೂಪಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 