ಆರ್ಥಿಕ ಸಾಕ್ಷರತಾ ಸಪ್ತಾಹ-2026 ಕಾರ್ಯಕ್ರಮ

ಆರ್ಥಿಕ ಸಾಕ್ಷರತಾ ಸಪ್ತಾಹ-2026 ಕಾರ್ಯಕ್ರಮ Financial Literacy Week-2026 Program

ಲೋಕದರ್ಶನ ವರದಿ 

ನೇಸರಗಿ 12: ಭಾರತೀಯ ರಿಜರ್ವ್‌ ಬ್ಯಾಂಕ್, ಕೆನರಾ ಲೀಡ್ ಬ್ಯಾಂಕ್, ಬೆಳಗಾವಿ ಹಾಗೂ ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಹಣಕಾಸು ಸಾಕ್ಷರತಾ ಸಪ್ತಾಹ-2026 ಕಾರ್ಯಕ್ರಮವನ್ನು  ಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು."KYC  ಸುರಕ್ಷಿತ ಬ್ಯಾಂಕಿಂಗ್ ನಿಮ್ಮ ಮೊದಲ ಹೆಜ್ಜೆ" ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.  

ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ  

ಡಾ. ಮಂಜುನಾಥ ಚೌರಡ್ಡ್ಡಿಯವರು  ಕೆವೈಸಿ ಪೋಸ್ಟರ್ ಬಿಡುಗಡೆ ಮಾಡಿ ಬ್ಯಾಂಕ್ ಗ್ರಾಹಕರಿಗಾಗಿ ಕೆವೈಸಿ ಮಾಹಿತಿ ಕುರಿತು ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಮತ್ತು ರೈತರಿಗೆ ಸ್ವ-ಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ, ಕೆನರಾ ಬ್ಯಾಂಕ್ ಉತ್ತಮ ಸೇವೆ ಹೊಂದಿದೆ,  ಹೆಣ್ಣು ಮಕ್ಕಳಿಗೆ ಏಂಜಲ್ ಖಾತೆ ತೆರೆಯುವ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ಹಣ ನೀಡುತ್ತಿದೆ ಹೀಗೆ ಸಾಕಷ್ಟು ಸೌಲಭ್ಯಗಳನ್ನು ಪಡೆಯಲು ಮೊದಲು ಕೆನರಾ ಬ್ಯಾಂಕಿಗೆ ಸಂಪರ್ಕಿಸಿ ಎಂದು ಕರೆ ನೀಡಿದರು.  

ಪ್ರಾಸ್ತಾವಿಕ ಮಾತನಾಡಿದ ಬೆಳಗಾವಿ ಕೆನರಾ ಲೀಡ್ ಬ್ಯಾಂಕ್ ಡಿಸ್ಟ್ರಿಕ್ಟ್‌ ಮ್ಯಾನೇಜರ್ ಪ್ರಶಾಂತ ಘೋಡಕೆ ಅವರು ಭಾರತೀಯ ರಿಜರ್ವ್‌ ಬ್ಯಾಂಕ್ ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ಗ್ರಾಹಕರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಅದೇ ರೀತಿ ಈ ವರ್ಷ ಕೆವೈಸಿ ಕುರಿತು ಕಾರ್ಯಕ್ರಮವನ್ನು ಜಾರಿಗೆ ತಂದಿದೆ, ಹಾಗಾಗಿ ಪ್ರತಿ ಗ್ರಾಮದಲ್ಲಿ ಗ್ರಾಹಕರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತಿದೆ. ಏಙಅ, ಖಜಏಙಅ ಮತ್ತು ಅಏಙಅ ಮಾಡಿಸಿಕೊಳ್ಳುವ ಮೂಲಕ ಸುಲಭ ವ್ಯವಹಾರ ಸಾದ್ಯ ಎಂದು ತಿಳಿಸಿದರು.  

ಅತಿಥಿಗಳಾಗಿ ಭಾಗವಹಿಸಿದ ಕಿರಣ ಶಿಂಧೆ, ಡಿಸ್ಟ್ರಿಕ್ಟ್‌ ಮ್ಯಾನೇಜರ್, ಎನ್‌ಆರ್‌ಎಲ್‌ಎಮ್, ಬೆಳಗಾವಿ ಇವರು ಈ ಕಾರ್ಯಕ್ರಮ ಪ್ರತಿ ಗ್ರಾಮ ಮಟ್ಟದಲ್ಲಿ ತಲುಪಲು ಕೃಷಿ ಸಖಿ ಹಾಗೂ ಪಶು ಸಖಿ ಪ್ರಮುಖ ಪಾತ್ರವಹಿಸುತ್ತಾರೆ. ಆದ್ದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜನರಿಗೆ ತಲುಪಿಸಿ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಸ್ವಾಗತಿಸಿ ಮಾತನಾಡಿದ ಆರ್ಥಿಕ ಸಾಕ್ಷರತಾ ಕೇಂದ್ರ ಆರ್ಥಿಕ ಸಮಾಲೋಚಕಿ ಗೀತಾ ಖಾನಪೇಠ ಅವರು ಗ್ರಾಹಕರು ಮೊದಲನೆಯದಾಗಿ ಬ್ಯಾಂಕ್ ಖಾತೆಯನ್ನು ತೆರೆದು ಕೆವೈಸಿ ಮಾಡಿಸುವುದು ಅವಶ್ಯಕ ಕೆವೈಸಿಯನ್ನು ಆಧಾರ್ ಓಟಿಪಿ ಮೂಲಕ ಮತ್ತು ವಿಡಿಯೋ ಮೂಲಕ ತ್ವರಿತವಾಗಿ ಕೆವೈಸಿ ಮಾಡಿಸಬಹುದು ಎಂದರು ಮತ್ತು ಖಾತೆ ದುರ್ಬಳಕೆ ಬಗ್ಗೆ ವಿವರಿಸಿದರು. ಅನಿಲ್ ಚಿನಗುಡಿ, ಕೌನ್ಸಿಲರ್, ಬೆಳಗಾವಿ ಇವರು ಸೈಬರ್ ಕ್ರೈಂ ಹಾಗೂ ಸೈಬರ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. 

ಕೇಂದ್ರದ ಮಣ್ಣು ವಿಜ್ಞಾನಿ ಹಾಗೂ ಕಾರ್ಯಕ್ರಮದ ಸಂಯೋಜಕ ಎಸ್‌. ಎಮ್‌. ವಾರದ ಹಾಗೂ ಬೆಳಗಾವಿಯ ಕೆನರಾ ಬ್ಯಾಂಕ್ ವಲಯ ಕಚೇರಿ ಮ್ಯಾನೇಜರ್ ರಾಜಶೇಖರ ದಂಡಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ 85   ರೈತ, ರೈತ ಮಹಿಳೆಯರು ಹಾಗೂ ಕೃಷಿ ಸಖಿಯರು ಭಾಗವಹಿಸಿದ್ದರು.