ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಶಾಸಕ ದುರ್ಯೋಧನ ಐಹೊಳೆಯವರ ಹುಟ್ಟುಹಬ್ಬದ ಪ್ರಯುಕ್ತ ಫಿನಾಲೆ ಕಾರ್ಯಕ್ರಮ
ರಾಯಬಾಗ 23 : ಶಾಸಕ ಐಹೊಳೆಯವರು ಆಯೋಜಿಸಿರುವ ಗಾಯನ ಪ್ರತಿಭಾ ಪ್ರಶಸ್ತಿ ಸ್ಪರ್ಧೆಯ ಉತ್ತರ ಕರ್ನಾಟಕದ ಈ ವೇದಿಕೆಯಿಂದ ಗ್ರಾಮೀಣ ಭಾಗದ ಯುವ ಪ್ರತಿಭಾವಂತ ಗಾಯಕರು ಬೆಳಗಾವಿಯಿಂದ ಬೆಂಗಳೂರುವರೆಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಬುಧವಾರ ಸಾಯಂಕಾಲ ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಶಾಸಕ ದುರ್ಯೋಧನ ಐಹೊಳೆಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸಿಜನ್-8 ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕೆಂದರು.ಸಾನ್ನಿಧ್ಯವನ್ನು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ವಹಿಸಿದ್ದರು. ಶಾಸಕ ಡಿ.ಎಮ್.ಐಹೊಳೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮಲ್ಲಿ ಚಿತ್ರ ನಟಿ ಮಾಲಾಶ್ರೀ, ಆರಾಧನಾ, ಹಿನ್ನೆಲೆ ಗಾಯಕಿ ಡಾ.ಶಮೀತಾ ಮಲ್ನಾಡ, ನಟ, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ತಹಶೀಲ್ದಾರ ಸುರೇಶ ಮುಂಜೆ, ಬಸವಪ್ರಸಾದ ಜೋಲ್ಲೆ, ರೀಯಾಜ ಚೌಗಲಾ, ಮಹೇಶ ಭಾತೆ, ಭರತೇಶ ಬನವಣೆ, ಮಲ್ಲಪ್ಪ ಮೈಶಾಳೆ, ತಾತ್ಯಾಸಾಬ ಕಾಟೆ, ಪೃಥ್ವಿರಾಜ ಜಾಧವ, ಅಮೀತ ಜಾಧವ, ವಿಜಯ ಕೋಟಿವಾಲೆ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಮಹಾದೇವ ಬೊರಗಾಂವೆ, ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ ಸೇರಿ ಅನೇಕರು ಇದ್ದರು.ಫೋಟೊ: 23 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಶಾಸಕ ದುರ್ಯೋಧನ ಐಹೊಳೆಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸಿಜನ್-8 ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಮತ್ತು ಶಾಸಕ ದುರ್ಯೋಧನ ಐಹೊಳೆಯವರೂ ಚಾಲನೆ ನೀಡಿದರು.