ಬೆಂಗಳೂರು/ಬಂಡೀಪುರ, ಜ 28 : ಡಿಸ್ಕವರಿ ಚಾನಲ್ ನ ಜನಪ್ರಿಯ '‘ಇನ್ ಟು ದಿ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬಳಿಕ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬೇರ್ ಗ್ರಿಲ್ಸ್ ಅವರೊಡನೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು
ಈ ವೇಳೆ ರಜನಿಯವರಿಗೆ ತೊಂದರೆಯಾಗಿದೆ ಎಂಬ ವದಂತಿ ಹರಡಿತ್ತು ಆದರೆ ಬಂಡೀಪುಟ ಹುಲಿ ಅಭಯಾರಣ್ಯದಲ್ಲಿ ಚಿತ್ರೀಕರಣದ ವೇಳೆ ರಜನಿಕಾಂತ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಚಿತ್ರೀಕರಣದ ವೇಳೆ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಯಾವುದೇ ಗಾಯಗಳಾಗಿಲ್ಲ ಇದೆಲ್ಲವೂ ಸುಳ್ಳು. ಚಿತ್ರಕಥೆಯ ಪ್ರಕಾರ, ರಜನಿಕಾಂತ್ ಬೀಳಬೇಕಾದ ಸನ್ನಿವೇಶವಿತ್ತು, ಆದ್ದರಿಂದ ಹಗ್ಗದಿಂದ ಕೆಳಗಿಳಿಯುವಾಗ ಅವರು ಕೆಳಗೆ ಬಿದ್ದು ಎಲ್ಲರೂ ಧಾವಿಸಿದರು. ಇದೆಲ್ಲವೂ ಚಿತ್ರಕಥೆಯಲ್ಲಿದೆ" ಎಂದು ಟಿ.ಬಾಲಚಂದ್ರ, ಮೀಸಲು ನಿರ್ದೇಶಕರು ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.
ರಜನಿಕಾಂತ್ ಗಾಯಗೊಂಡ ಸುದ್ದಿಯನ್ನು ಬಾಲಚಂದ್ರ ಅವರು ನಕಲಿ ಸುದ್ದಿ ಎಂದು ತಳ್ಳಿಹಾಕಿದರು.
"ನಾವು ಬಂಡೀಪುರ ಟೈಗರ್ ರಿಸರ್ವ್‌ನಲ್ಲಿ ಚಿತ್ರೀಕರಣ ನಡೆಸಲು ಡಿಸ್ಕವರಿ ಚಾನೆಲ್‌ಗೆ 6-8 ಗಂಟೆಗಳ ಕಾಲ ಅನುಮತಿ ನೀಡಿದ್ದೇವೆ" ಎಂದು ಬಾಲಚಂದ್ರ ಹೇಳಿದ್ದಾರೆ.
ಏಕದಿನ ಚಿತ್ರೀಕರಣ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಕೊನೆಗೊಂಡಿದೆ ಎಂದು ಅವರು ಹೇಳಿದರು.
"ಅವರು ಮಾನದಂಡಗಳ ಪ್ರಕಾರ ಶುಲ್ಕ ಪಾವತಿಸಿದ್ದಾರೆ. ಸಾಕ್ಷ್ಯಚಿತ್ರ ಶುಲ್ಕ, ವಾಹನ ಶುಲ್ಕ ಸೇರಿದಂತೆ ನಾಲ್ಕು ದಿನಗಳವರೆಗೆ ಅವರು 10 ಲಕ್ಷ ರೂ. ಪಾವತಿಸಿದ್ದಾರೆ" ಎಂದು ಬಾಲಚಂದ್ರ ಮಾಹಿತಿ ನೀಡಿದ್ದಾರೆ.