ಮಾರಿಕಾಂಬಾ ದೇವಿ ದರ್ಶನ ಪಡೆದ ಚಿತ್ರನಟ ಧೃವ ಸರ್ಜಾ- ರಚಿತಾರಾಮ್

ಮಾರಿಕಾಂಬಾ ದೇವಿ ದರ್ಶನ ಪಡೆದ ಚಿತ್ರನಟ ಧೃವ ಸರ್ಜಾ- ರಚಿತಾರಾಮ್ Film actor Dhruva Sarja-Rachitharam, who had a darshan of Goddess Marikamba

ಲೋಕದರ್ಶನ ವರದಿ 

ಸಾಗರ 07: ಇಲ್ಲಿನ ಶ್ರೀ ಮಾರಿಕಾಂಬಾ ದೇವಿಯ ಗಂಡನ ಮನೆ ಪ್ರಾಂಗಣದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಪ್ರತಿಷ್ಟಾಪಿಸುವ ಮಾರಿಕಾಂಬಾ ದೇವಿಯನ್ನು ಶುಕ್ರವಾರ ಚಿತ್ರನಟ ಧೃವ ಸರ್ಜಾ ಮತ್ತು ರಚಿತಾರಾಮ್ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದಿಂದ ಸನ್ಮಾನಿಸಲಾಯಿತು. 

ಸಮಿತಿ ಅಧ್ಯಕ್ಷ ಕೆ.ಎನ್‌.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರ ರಾವ್, ಉಪಾಧ್ಯಕ್ಷ ಸುಂದರ ಸಿಂಗ್, ಸಹ ಕಾರ್ಯದರ್ಶಿ ಎಸ್‌.ವಿ.ಕೃಷ್ಣಮೂತಿ, ಖಜಾಂಚಿ ನಾಗೇಂದ್ರ ಕುಮಟಾ, ಸಮಿತಿ ಸಂಚಾಲಕರಾದ ಚಂದ್ರು ಆರ್‌. ನವೀನ್ ಕೆ.ಸಿ., ಸಂತೋಷ್ ಶೇಟ್, ಪುರುಷೋತ್ತಮ ಇನ್ನಿತರರು ಹಾಜರಿದ್ದರು.  

ಇಲ್ಲಿನ ಮಾರಿಕಾಂಬಾ ದೇವಿ ದರ್ಶನಕ್ಕೆ ಶನಿವಾರ ಸಹ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತದ್ದು ಕಂಡು ಬಂದಿತು. ಸಾಗರ ಮಾತ್ರವಲ್ಲದೆ ರಾಜ್ಯ ಹೊರರಾಜ್ಯಗಳಿಂದ ಸಹ ಭಕ್ತಾದಿಗಳು ಅಮ್ಮನವರ ದರ್ಶನಕ್ಕೆ ಆಗಮಿಸಿದ್ದರು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ವಿವಿಧ ಸಂಘ ಸಂಸ್ಥೆಗಳು ಮಜ್ಜಿಗೆ ಕೋಸಂಬರಿ, ಪಾನಕ ವಿತರಣೆ ಮಾಡಿದರೇ, ಸ್ನೇಹಿತರ ಬಳಗದ ವತಿಯಿಂದ ನಗರಸಭೆ ಕಾಂಪ್ಲೆಕ್ಸ್‌ನಲ್ಲಿ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರಿ​‍್ಡಸಿರುವ ಉಚಿತ ಸಾಮೂಹಿಕ ಅನ್ನ ಸಂತರೆ​‍್ಣಯಲ್ಲಿ ಸಾವಿರಾರು ಜನರು ಭೋಜನ ಸೇವಿಸಿದರು.  

ಮನಸೂರೆಗೊಳ್ಳುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ : ಮಾರಿಜಾತ್ರೆ ಹಿನ್ನೆಲೆಯಲ್ಲಿ ನಗರಸಭೆ ಆವರಣದ ಗಾಂಧಿ ಮೈದಾನದ ಮಾರಿಕಾಂಬಾ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜನಮನ ಸೂರೆಗೊಳ್ಳುತ್ತಿದೆ. ಶುಕ್ರವಾರ ವಾರಿದಿ ನೃತ್ಯ ತಂಡದಿಂದ ನೃತ್ಯ, ದೈವಜ್ಞ ಸಾಂಸ್ಕೃತಿಕ ಬಳಗದಿಂದ ದೇವಿ ನೃತ್ಯ, ತ್ರಿಧಾತ್ ಸಾಗರ ಅವರಿಂದ ಸ್ಯಾಕ್ಸೋಫೋನ್ ವಾದನ, ಸಿಗ್ತಾಂವ್ ನಟರಾಜ ನಾಟ್ಯತಂಡದಿಂದ ಭರತನಾಟ್ಯ, ಶ್ರೀಶಪ್ರಭು ಅವರಿಂದ ನೃತ್ಯ ಪ್ರದರ್ಶನ ಹಾಗೂ ಗಾಯಕಿ ಸುರೇಖಾ ಹೆಗಡೆ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ನಿವೃತ್ತ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ನೆನಪಿನ ಕಾಣಿಕೆ ವಿತರಣೆ ಮಾಡಿದರು. ಸಮಿತಿ ಸಂಚಾಲಕ ರಾಮು, ಸಹ ಸಂಚಾಲಕ ಲೋಕೇಶಕುಮಾರ್, ಗಂಗಾಧರ ಜಂಬಿಗೆ ಇನ್ನಿತರರು ಹಾಜರಿದ್ದರು.  

ಭಾನುವಾರ ವಿಶೇಷ ಕಾರ್ಯಕ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಐದನೆ ದಿನ ಭಾನುವರ ಅಕ್ಷತಾ ಹೆಗಡೆ ಅವರಿಂದ ಭರತನಾಟ್ಯ, ಬೆಂಗೂರಿನ ಪುರಂದರ ಇಂಟರ್ ನ್ಯಾಷನಲ್ ಟ್ರಸ್ಟ್‌ ವತಿಯಿಂದ ಗಾಯನ, ಶಿವಂ ನೃತ್ಯ ಸಂಸ್ಥೆಯಿಂದ ಭರತನಾಟ್ಯ, ರಾಜು ಜನ್ನೆಹಕ್ಲು ಅವರಿಂದ ಜಾನಪದ ನೃತ್ಯ ಗಾಯನ, ನಂತರ ಬೆಂಗಳೂರಿನ ಶೈಲೂಷಂ ಆರ್ಟ್‌ ಕ್ರಿಯೇಷನ್‌ನ ಅನಂತ ವಿಕ್ರಮ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರಿ​‍್ಡಸಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಾಂಸ್ಕ್ರತಿಕ ಸಮಿತಿ ಪ್ರಕಟಣೆಯಲ್ಲಿ ಕೋರಿದೆ. (ಫೋಟೋ-ಸಾಂಸ್ಕೃತಿಕ ಸಮಿತಿ)