ಫೈಲ್ಖಣದಾಳ: ಮಹಾಲಕ್ಷ್ಮಿ ಕೊರವಂಜಿ ದೇವಿ ಜಾತ್ರಾ ಮಹೋತ್ಸವ

ಫೈಲ್ಖಣದಾಳ: ಮಹಾಲಕ್ಷ್ಮಿ ಕೊರವಂಜಿ ದೇವಿ ಜಾತ್ರಾ ಮಹೋತ್ಸವ Filekhandal: Mahalakshmi Koravanji Devi Jatra Festival

ಪಾಲಬಾವಿ  29: ರಾಯಬಾಗ ತಾಲೂಕು ಸುಕ್ಷೇತ್ರ ಖಣದಾಳ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಚಿಗರಿ ತೋಟದಲ್ಲಿರುವ ಶ್ರೀ ಮಹಾಲಕ್ಷ್ಮಿ ಕೊರವಂಜಿದೇವಿ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಎಪ್ರಿಲ್ 4 ಹಾಗೂ 5ರಂದು ಎರಡು ದಿನಗಳ ವರೆಗೆ ಸಡಗರ ಸಂಭ್ರಮದಿಂದ ಜರಗುವುದು.ಕಕಮರಿ, ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠದ ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿಜಿಯವರ ಪಾವನ ಸಾಧ್ಯದಲ್ಲಿ ಕಾರ್ಯಕ್ರಮವು ಜರುಗುವುದು. ಖಣದಾಳ ಮಹಾಲಕ್ಷ್ಮಿ ಕೊರವಂಜಿ ದೇವಿ ದೇವಸ್ಥಾನದ ಮುಖ್ಯಸ್ಥರು ರಾಮಣ್ಣ ಮಹಾರಾಜರ ನೇತೃತ್ವವಹಿಸುವವರು.

ವಡೆರಟ್ಟಿ ಶ್ರೀಮಠದ ಗುರುಪ್ರಸಾದ ಮಹಾಸ್ವಾಮೀಜಿ, ಜಕನೂರು ಕುಂಚನೂರು ಮಠ ಶ್ರೀ ಮದನ ಮಾದಗೊಂಡೇಶ್ವರ ಸಿದ್ಧಾಶ್ರಮದ  ಪಿತಾಧಿಪತಿ ಡಾ. ಮಾಧುಲಿಂಗ ಮಹಾರಾಜರು ದಿವ್ಯ ಸಾನಿಧ್ಯವಹಿಸುವರು. ಖಣದಾಳ ಹುಲಕಾಂತೇಶ್ವರ ದೇವಸ್ಥಾನದ ಪೂಜ್ಯರಾದ ಈರಯ್ಯ ಸ್ವಾಮಿಗಳು, ತೆಲಸಂಗದ ಜಗದ್ಗುರು ಮೌನೇಶ್ವರ ಯೋಗಾಶ್ರಮದ ಮಹಾನ್ ತಪಸ್ವಿಗಳು ಸಂಗಮೇಶ್ವರ ಮಹಾಸ್ವಾಮಿಗಳು ಸನ್ನಿಧಾನವಹಿಸುವರು. ಜನಪದ ಕಲಾವಿದ, ಮುಖ್ಯ ಶಿಕ್ಷಕ ಭೀಮರಾವ್ ಘಂಟಿ ಕಾರ್ಯಕ್ರಮ ನಿರ್ವಹಣೆ ಮಾಡುವರು.ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ರಾಯಬಾಗ ಪಿ.ಎಲ್‌.ಡಿ ಬ್ಯಾಂಕ್ ಅಧ್ಯಕ್ಷರು, ಸಹಕಾರಿ ಧೂರಿನ ಪ್ರತಾಪರಾವ್ ಪಾಟೀಲ, ಶ್ರೀಮತಿ ಎ.ಎ.ಪಾಟೀಲ ಶಿಕ್ಷಣ ಸಂಸ್ಥೆಯ ಚೇರ್ಮನ್ ರವರು "ಯುವ ಕೇಸರಿ"  ಶಿವರಾಜ್ ಪಾಟೀಲ, ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ,

ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್, ಮಾಜಿ ಶಾಸಕ ಡಾಕ್ಟರ್ ಬಿ.ಸಿ.ಸರಿಕರ, ಸಿಐಬಿ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಡಾ.ಅರವಿಂದ್ ಲಮಾಣಿ, ಮಾದಿಗರ ದಂಡೋರ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಮೈಶಾಳೆ, ಹಾರೋಗೇರಿ ಠಾಣಾ ಪಿಎಸ್‌ಐ ಮಾಳಪ್ಪ ಪೂಜಾರಿ, ಮಾದರ ಚೆನ್ನಯ್ಯ ಸಂಘಟನೆಯ ರಾಜ್ಯ ವಕ್ತಾರ ಸುರೇಶ ಐಹೊಳೆ, ಹುಲಿಕಾಂತೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ರಾಮಕೃಷ್ಣ ದಳವಾಯಿ, ರಾಜಕೀಯ ಧುರೀಣ ಮಹಾದೇವ ವಡಗಾವಿ, ಎಂಆರ್ ಎಚ್‌ಎಸ್ ರಾಜ್ಯ ಕಾರ್ಯದರ್ಶಿ ಮಹಾವೀರ ಐಹೊಳೆ, ಬಸವರಾಜ ತೆಲಗರ, ರಾಜು ಮೈಶಾಳೆ, ಬಿಜೆಪಿ ಯುವ ನಾಯಕ ರಾಮನಗೌಡ ಪಾಟೀಲ, ಲಕ್ಷ್ಮಣ  ಹುಣಶಾಳೆ, ಸಂಜು  ಮೈಶಾಲೆ, ವೆಂಕಟಪತಿ ನಾಯಕ ಇತರರು ಆಗಮಿಸುವರು.

ಏಪ್ರಿಲ್ 4ರಂದು ಶನಿವಾರ ಮುಂಜಾನೆ 7 ಗಂಟೆಗೆ ಶ್ರೀ ಮಹಾಲಕ್ಷ್ಮಿ ಕೊರವಂಜಿ ದೇವಿಯ ಕರ್ತೃ ಗದ್ದಿಗೆ ಪಂಚಾಮೃತ ಅಭಿಷೇಕ, ವಸ್ತ್ರಧಾರಣೆ, ಕುಂಕುಮ ಬಂಡಾರ ಲೇಪನ, ನೈವೇದ್ಯ ಸಮರೆ​‍್ಣ ವಿಶೇಷವಾಗಿ ಹೋಮ ಹವನ ಜರುಗುವುದು. ರಾತ್ರಿ 8ಗಂಟೆಗೆ ಸುಪ್ರಸಿದ್ಧ ಕಲಾವಿದರಿಂದ ತುರುಸಾ -ತುರುಸಿನ ಚೌಡಕಿ ಪದಗಳ ಹಾಡುಗಾರಿಕೆ ಜರಗುವುದು. ಏಪ್ರಿಲ್ 5ರಂದು ರವಿವಾರ ಮುಂಜಾನೆ 8ಗಂಟೆಗೆ ಶ್ರೀ ಹುಲಿಕಾಂತೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಹಾಗೂ ಆರತಿಯೊಂದಿಗೆ 11 ಗ್ರಾಮಗಳ ಶ್ರೀ ಯಲ್ಲಮ್ಮದೇವಿಯ ಜಗದೊಂದಿಗೆ ಶ್ರೀ ಮಹಾಲಕ್ಷ್ಮಿ ಕೊರವಂಜಿ ದೇವಸ್ಥಾನದ ವರೆಗೆ ಸುಮಂಗಲೆಯರಿಂದ  ಪೂರ್ಣಕುಂಭ ಆರತಿಯೊಂದಿಗೆ ಡೊಳ್ಳು ಕುಣಿತ, ಹಲಗೆವಾದನ, ಶಹನಾಯಿವಾನ ಕಾಳಿಶಿಂಗೆ ವಿವಿಧ ಕಲಾಬಳಗದೊಂದಿಗೆ ಭವ್ಯ ಮೆರವಣಿಗೆ ಜರುಗುವುದು.  

 12 ಗಂಟೆಗೆ ದೇವಸ್ಥಾನದಲ್ಲಿ ಹಾಕಲಾದ ಭವ್ಯವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸನ್ಮಾನ ಜರುಗುವುದು. ಮಧ್ಯಾಹ್ನ 2ಗಂಟೆಗೆ ಮಹಾತ್ಮರಿಂದ ಪ್ರವಚನ ಹಾಗೂ ತತ್ಸಂಗ ಕಾರ್ಯಕ್ರಮ ಜರುಗುವುದು. ಸಂಜೆ 5ಗಂಟೆಗೆ ಕೊರವಂಜಿ ದೇವಸ್ಥಾನದ ಪ್ರಭ ಮಂಡಳಿ ಭಕ್ತರಿಂದ ಭಂಡಾರಹರಿಸುವ ವೈಭವ ಕಾರ್ಯಕ್ರಮ ನೆರವೇರುವುದು. ರಾತ್ರಿ 8ಗಂಟೆಗೆ ಸ್ವರಸಂಗಮ ಮೆಲೋಡಿಸ್ ಆರ್ಕೆಸ್ಟ್ರಾ ಕಲಾ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು. ಎಂದು ದೇವಸ್ಥಾನದ ಆಡಳಿತಾಧಿಕಾರಿ ಸಿದ್ದಣ್ಣ ಚಿಗರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9108811330 ಇವರನ್ನು ಸಂಪರ್ಕಿಸಲು ಕೋರಲಾಗಿದೆ.