ಕೈರೋ, ಫೆಬ್ರವರಿ 3,ಇಸ್ರೇಲ್‌ನಿಂದ ಈಜಿಪ್ಟ್‌ಗೆ ಅನಿಲ ಸಾಗಿಸುವ ಪೈಪ್‌ಲೈನನ್ನು ಸಶಸ್ತ್ರ ಗುಂಪು ಭಾನುವಾರ ಸ್ಫೋಟಕ್ಕೆ ಯತ್ನಿಸಿದೆ ಎಂದು ಮಾಧ್ಯಮ ವರದಿ ಮಾಡಿವೆ.ಅಲ್ ಜಜೀರಾ ಮೊದಲು ಈ ಸುದ್ದಿ ಬಿತ್ತರಿಸಿದೆ. ಈ ಘಟನೆಯನ್ನು ಉತ್ತರ ಸಿನಾಯ್ ಗವರ್ನರೇಟ್‌ನ ಬಿರ್ ಅಲ್-ಅಬ್ದು ಪ್ರದೇಶದಲ್ಲಿ ನಡೆಸಲಾಗಿದೆ ಆದರೆ ಈಜಿಪ್ಟ್‌ಗೆ ಅನಿಲ ಹರಿವನ್ನು ಅಡ್ಡಿಪಡಿಸುವಲ್ಲಿ ಬಂಡುಕೋರರ ಉದ್ದೇಶ ವಿಫಲವಾಗಿದೆ ಎಂದೂ ವರದಿಯಾಗಿದೆ.ಈ ಸಮಯದಲ್ಲಿ, ನೈಸರ್ಗಿಕ ಅನಿಲವು ಇಸ್ರೇಲ್ ನಿಂದ ಈಜಿಪ್ಟಗೆ ಹರಿಯುತ್ತಿತ್ತು . ಸ್ಫೋಟದ ವಿಷಯವನ್ನು ಸಚಿವಾಲಯವು ಎಲ್ಲಾ ಸಂಬಂಧಿತ ಪಕ್ಷಗಳ ಸಮನ್ವಯದಿಂದ ಪರಿಶೀಲಿಸಿದೆ ಎಂದೂ ಇಸ್ರೇಲ್ ಇಂಧನ ಸಚಿವ ಯುವಲ್ ಸ್ಟೈನಿಟ್ಜ್ ಹೇಳಿದ್ದಾರೆ. ಅರಬ್ ಪ್ರಕ್ಷುಬ್ಧ ಸಮಯದಲ್ಲಿ ಈಜಿಪ್ಟ್ ಗೆ ಇಸ್ರೇಲ್ ಅನಿಲ ಪೂರೈಕೆ ಸ್ಥಗಿತಗೊಂಡ ನಂತರ 2019 ರಲ್ಲಿ ಇದು ಪುನರಾರಂಭವಾಗಿತ್ತು . ಸಿನಾಯ್ ಪರ್ಯಾಯ ದ್ವೀಪವು ಭಯೋತ್ಪಾದಕ ಚಟುವಟಿಕೆಯ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಜಮಾವಣೆಗೊಂಡಿರುವ ಕಟ್ಟಾ ಉಗ್ರರನ್ನು ಹೊರಹಾಕಲು ಈಜಿಪ್ಟ್ ನಿಯಮಿತವಾಗಿ ಭಯೋತ್ಪಾದನಾ-ವಿರೋಧಿ ದಾಳಿಗಳನ್ನು ನಡೆಸುತ್ತಿದೆ .