ಜಿಲ್ಲೆಯ ಹೆಮ್ಮೆಯ ಪಿಎಂಶ್ರೀ ಕೇಂದ್ರಿಯ ವಿದ್ಯಾಲಯಕ್ಕೆ ಕ್ಷೇತ್ರ ಭೇಟಿ

Field visit to PM Shri Kendriya Vidyalaya, the pride of the district

ಧಾರವಾಡ 04: ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರಥಮ ಹಂತದ ಪಿಎಂಶ್ರೀ ಶಾಲೆಯ ಸಹ ಶಿಕ್ಷಕರಿಗೆ 5 ದಿನದ ತರಬೇತಿಯಲ್ಲಿ ಒಂದು ದಿನ ಕ್ಷೇತ್ರ ಭೇಟಿಯ ನಿಮಿತ್ಯ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಸೋಮೇಶ್ವರ ಶಾಲೆಗೆ ಇತ್ತೀಚಿಗೆ ಭೇಟಿ ಕೊಡಲಾಯಿತು.  

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ರಾಜೇಶಕುಮಾರ ಗೋಯಲ್‌ರವರು ಪರಿಚಯಾತ್ಮಕವಾಗಿ ಪಿಎಂಶ್ರೀ ಯೋಜನೆಗೆ ಅಗತ್ಯವಿರುವ ಆರು ಪಿಲ್ಲರ‌್ಸಗಳನ್ನು ಪಿಪಿಟಿಗಳ ಮೂಲಕ ಪ್ರದರ್ಶಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ಅರ್ಜುನ ಕಂಬೋಗಿ ಉಪನ್ಯಾಸಕರಾದ ಛಾಯಾ ಸೂರ್ಯವಂಶಿ, ಶಿಕ್ಷಣ ತಜ್ಞರಾದ ಗೀರೀಶ ಮಠಪತಿ ಹಾಗೂ ಸಂಪನ್ಮೂಲ ವ್ಯಕ್ತಿಗಳು, ತರಬೇತಿದಾರರು ಭಾಗವಹಿಸಿದ್ದರು.  

ಸಂಸ್ಥೆಯ ಇಂಗ್ಲೀಷ ಅಧ್ಯಾಪಕಿಯರಾದ ಸ್ಮೀತಾ ಎಸ್ ಹುಲ್ಯಾಳಕರ್ ಅವರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.