ಕ್ಷೇತ್ರ ಸಮನ್ವಯಾಧಿಕಾರಿ ದಮ್ಮೂರಮಠಗೆ ಸನ್ಮಾನ
Field Coordinator Dammoor Math honored
ತಾಳಿಕೋಟೆ 07: ತಾಲೂಕಿನ ಪೀರಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಆರಿ್ಬ. ದಮ್ಮೂರಮಠ ಅವರು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ತಾಳಿಕೋಟೆಯಲ್ಲಿ ಆರ್ಯಭಟ ಅಕಾಡೆಮಿ ವತಿಯಿಂದ ಅವರನ್ನು ದಂಪತಿ ಸಹಿತ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಶಿಕ್ಷಣಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ದಮ್ಮೂರಮಠ ಅವರು ಪರಿಶ್ರಮಿ, ಸ್ನೇಹಜೀವಿ, ಬದುಕಿನ ಹಲವು ಮಜಲುಗಳಲ್ಲಿ ಸಿಹಿಕಹಿಯನ್ನುಂಡರೂ ಎಲ್ಲವನ್ನೂ ಸಮವಾಗಿ ಸ್ವೀಕರಿಸಿದವರು.ಕರುಣೆ, ಪರೋಪಕಾರ, ತಾಳ್ಮೆ, ನಗು ಅವರ ಬಲವಾಗಿದ್ದು ಶಿಕ್ಷಣ ಇಲಾಖೆ, ಶಾಲೆ ಹಾಗೂ ಶಿಕ್ಷಕರುಗಳ ಮಧ್ಯೆ ಸಂವಹನ ಸಾಧಿಸಿ ಉತ್ತಮ ಆಡಳಿತ ನೀಡುವ ಸಮರ್ಥರು ಅವರಾಗಿದ್ದಾರೆ. ಅವರಿಗೆ ಈಗಾಗಲೆ ಆಡಳಿತದ ಅನುಭವವಿದೆ. ಕುಗ್ರಾಮ ಪೀರಾಪುರ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯನ್ನು ಒಂದು ಅತ್ಯುತ್ತಮ ಪ್ರೌಢಶಾಲೆನ್ನಾಗಿಸಿ ಸಾವಿರಾರು ಮಕ್ಕಳ ಬಾಳಲ್ಲಿ ದೀಪ ಬೆಳಗಿಸಿದವರು ಈಗ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಬಂದಿರುವುದು ಭಾಗ್ಯವೇ ಸರಿ ಎಂದರು.ಸನ್ಮಾನಿತರಾದ ಕ್ಷೇತ್ರ ಸಮನ್ವಯಾಧಿಕಾರಿ ಆರಿ್ಬ.ದಮ್ಮೂರಮಠ ಗೌರವ ಸನ್ಮಾನ ನೀಡಿದುದಕ್ಕೆ ಕೃತಜ್ಞತೆ ಅರ್ಿಸಿದರು.
ಶಿಕ್ಷಕ ಗುಂಡುರಾವ್ ಧನಪಾಲ, ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ, ಉಪಪ್ರಾಂಶುಪಾಲ ಜಗದೀಶ ಕಟ್ಟಿಮನಿ, ನಿವೃತ್ತ ಉಪಪ್ರಾಂಶುಪಾಲ ಎಸ್.ಡಿ.ಕರ್ಜಗಿ ಮಾತನಾಡಿದರು.ವೇದಿಕೆಯಲ್ಲಿ ಅಕಾಡೆಮಿ ಅಧ್ಯಕ್ಷ ಅಲ್ಲಾಭಕ್ಷ ಇನಾಮದಾರ, ವಿಕಾಸ ಪಬ್ಲಿಕದ ಸ್ಕೂಲ್ ನ ಅಧ್ಯಕ್ಷ ರಾಮನಗೌಡ ಬಾಗೇವಾಡಿ, ಸರ್ವಜ್ಞ ವಿದ್ಯಾಪೀಠ ಪ್ರಾಥಮಿ ಪ್ರೌಢ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷಸಿದ್ಧನಗೌಡ ಮಂಗಳೂರ, ಬ್ರಿಲಿಯಂಟ ಶಿಕ್ಷಣಸಂಸ್ಥೆ ಮೈಲೇಶ್ವರ ಎಂ.ಬಿ.ಮಡಿವಾಳರ ಉಪಸ್ಥಿತರಿದ್ದರು. ಎಸ್.ಎಂ.ಪಾಟೀಲ ನಿರ್ವಹಿಸಿದರು. ಆರ್.ಎಸ್.ಬೂದಿಹಾಳ ಸ್ವಾಗತಿಸಿದರು. ಎಂ.ಎ.ಬಾಗೇವಾಡಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 