ಈದ್ಗಾ ಮೈದಾನದಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ

ಈದ್ಗಾ ಮೈದಾನದಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ Festive Ramadan celebrations at Eidgah Ground

ಲೋಕದರ್ಶನ ವರದಿ  

ಇಂಡಿ 21: ಪಟ್ಟಣದ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬಕ್ಕೆ ತೆರೆ ಎಳೆದರು. ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರ ದಾನ ಮಾಡಿದರು. ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ, ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  

ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು. ಸ್ನೇಹಿತರ, ಸಂಬಂಧಿಕರ ಮನೆಗೆ ತೆರಳಿ ಶುಭಾಶಯ ಕೋರಿದರು.ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮ ಗುರು ಮೌಲಾನಾ ಶಕೀರ್ ಹುಸೇನ್ ಕಾಸ್ಮಿ ಮುಫ್ತಿ, ಅಬ್ದುಲ್ ರೆಹಮಾನ್ ಅರಬ್, ಹಫೀಜ್ ಫಿರೋಜ್ ಬಾಗವಾನ, ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ,

ಮಾಜಿ ಟಿಎಂಸಿ ಸದಸ್ಯ ಜಾವೀದ ಮೋಮಿನ್, ಜೈನುದ್ಧಿನ್ ಬಾಗವಾನ, ಪ್ರಶಾಂತ ಕಾಳೆ, ಜಟ್ಟಪ್ಪ ರಾವಳಿ, ಭರಮಣ್ಣ ಕಾವಳ್ಳಿ, ಮಹಿಬೂಬ್ ಅರಬ, ರಫೀಕ್ ಇಂಡೀಕರ, ರೇಸಾ ಅಸ್ತಕೇರ, ಅಸ್ಲಾಂ ಪಟೇಲ್, ಅಯೂಬ್ ಬಾಗವಾನ, ಅಬ್ದುಲ್ ರಹಿದ್ ಅರಬ, ಬಶೀರ್ ಇನಾಮದಾರ, ಷರೀಫ್ ಪಟೇಲ್, ಅಬ್ದುಲ್ ರಶೀದ್ ಮುಗಳಿ, ಶಬ್ಬೀರ ಖಾಜಿ, ನಜರ್ ಪಠಾಣ, ಯುನುಸ್ ರಾವಕರ್, ಹಸನ ಮುಜಾವರ, ಅಸ್ಲಾಂ ಕಡಣಿ, ಹುಮಾಯೂನ್ ಬಿಳವಾರ, ರಿಯಾಜ್ ಗೌಂಡಿ, ಮಹಿಬೂಬ್ ಮಕಾನದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.