ತಾಲೂಕಿನಲ್ಲಿ ಸಂಭ್ರಮದ ರಾಮ ನವಮಿ ಆಚರಣೆ
Festive Ram Navami celebrations in the taluk
ಲೋಕದರ್ಶನ ವರದಿ
ಕಂಪ್ಲಿ 27: ತಾಲೂಕಿನ ನೆಲ್ಲುಡಿ ಗ್ರಾಪಂಯ ಶಂಕರ್‌ಸಿಂಗ್ ಕ್ಯಾಂಪ್‌ನಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಅಂಗವಾಗಿ ವಿವಿಧ ಧಾರ್ಮಿಕ ಕೈಂಕಾರ್ಯಗಳು ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿದವು. ಇಲ್ಲಿನ ದೇವಾಲಯದಲ್ಲಿ ಸೀತಾ ರಾಮ ಕಲ್ಯಾಣೋತ್ಸವ ಸಂಭ್ರಮದಿಂದ ನಡೆಯಿತು. ನವಮಿ ಅಂಗವಾಗಿ ಬೆಳಿಗ್ಗೆ ಶುದ್ಧಿ ಪೂಜೆಯೊಂದಿಗೆ ಆರಂಭಗೊಂಡು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ದೇವರಿಗೆ ವಿವಿಧ ಹೂವಿನ ಅಲಂಕಾರ ನಡೆಯಿತು. ನಂತರ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕದ ಬಳಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಶೇಷಯ್ಯ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ನಂತರ ವಿಶೇಷ ಮಂಗಳಾರತಿ, ಮಹಾ ಆರತಿ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಭಕ್ತರಿಗೆ ಸಮಿತಿ ವತಿಯಿಂದ ಅನ್ನಸಂತರೆ್ಣ ಏರಿ್ಡಸಲಾಗಿತ್ತು. ಶಂಕರ್‌ಸಿಂಗ್ ಕ್ಯಾಂಪ್ ಸೇರಿದಂತೆ ಸುತ್ತಲಿನ ನೂರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 