ಸಂಭ್ರಮದ ಹಿಂದೂ ಮಹಾಗಣಪತಿ ಶೋಭಾಯಾತ್ರೆ
Festive Hindu Maha Ganapati procession
ಹೂವಿನಹಡಗಲಿ 08: ಪಟ್ಟಣದ ಆಂಜನೇಯ ದೇವಸ್ಥಾನ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಗತಿ 11ದಿನದ ಶೋಭಾಯಾತ್ರೆಗೆ ಶಾಸಕ ಕೃಷ್ಣನಾಯಕ ಸೋಮವಾರ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆ ಸಾಗಿದ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಶೋಭಾಯಾತ್ರೆಯ ಸೊಬಗು ಕಣ್ತುಂಬಿ ಕೊಂಡರು. ಹಿಂದೂ ಮಹಾಗಣಪತಿಗೆ ಜಯಕರ ಕೂಗಿ ಭಕ್ತಿ ಸಮರ್ಿಸಿದರು.ಶೋಭಾಯಾತ್ರೆಯಲ್ಲಿ ಸಮಾವೇಶಗೊಂಡಿದ್ದ ನೂರಾರು ಸಂಖ್ಯೆಯ ಯುವಕರು ಡಿಜೆ ಲಯಕ್ಕೆ ಶಾಸಕ ಕೃಷ್ಣನಾಯಕ. ಬೆಂಬಲಿಗರು .ಹಿಂದೂ ಮಹಾಗಣಪತಿ ಪದಾಧಿಕಾರಿಗಳು. ಯುವಕರುಹೆಜ್ಜೆಹಾಕಿ ನೃತ್ಯ ಮಾಡುತ್ತಿರುವುದು ಗಮನಸೆಳೆಯಿತು.ಸಂಜೆ 5ಕ್ಕೆ ಪ್ರಾರಂಭಗೊಂಡ ಶೋಭಾಯಾತ್ರೆ ಮಧ್ಯರಾತ್ರಿ 12 ಗಂಟೆಗೆ ಮದಲಗಟ್ಟಿ ಗ್ರಾಮ ಬಳಿ ಇರುವ ತುಂಗಭದ್ರಾ ನದಿಗೆ ತಲುಪಿತು. ನಂತರ ವಿಘ್ನನಿವಾರಕನನ್ನು ವಿಸರ್ಜನೆ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಹಿಂದೂ ಮಹಾಗಣಪತಿ ಸಮಿತಿಯಿಂದ ಶಾಸಕ ಕೃಷ್ಣನಾಯಕ. ರಾಷ್ಷಪತಿ ಪದಕ ಪಡೆದ ಡಿವೈಎಸ್ಪಿ ಮತ್ತು ಸಿಪಿಐ ದೀಪಕ್ ಬೋಸರೆಡ್ಡಿ ಇತರರನ್ನು ಸನ್ಮಾನಿಸಲಾಯಿತು
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 