ರಾಮಾಪೂರ ಸೈಟ್‌ನಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ
Festive Eid-ul-Fitr celebrations at Ramapura site
ಸವದತ್ತಿ : ತಾಲೂಕಿನ ರಾಮಾಪೂರ ಸೈಟ್‌ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಈದ್-ಉಲ್-ಫಿತರ್ ಅನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು. ಮಾರ್ಚ್ 21 ರಂದು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಪಾಲ್ಗೊಂಡು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.
ಪವಿತ್ರ ರಂಜಾನ್ ತಿಂಗಳ 30 ದಿನಗಳ ಕಾಲ ಕಠಿಣ ಉಪವಾಸ (ರೋಜಾ) ಆಚರಿಸಿದ ನಂತರ, ಇಸ್ಲಾಮಿಕ್ ಕ್ಯಾಲೆಂಡರ್‌ನ 10ನೇ ತಿಂಗಳಾದ 'ಶವ್ವಾಲ್' ಮೊದಲ ದಿನದಂದು ಈ ಸಂಭ್ರಮದ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಹನೆ, ದಾನ ಮತ್ತು ಭಕ್ತಿಯ ಸಂಕೇತವಾಗಿದೆ. ಮುಸ್ಲಿಂ ಧರ್ಮ ಗುರು ಮೌಲಾನಾ ನೂರ ಮಹಮ್ಮದ್ ಅವರ ನೇತೃತ್ವದಲ್ಲಿ ನಡೆದ ನಮಾಜ್‌ನ ಪ್ರಮುಖ ತೆರೆದ ಮೈದಾನದಲ್ಲಿ ಎರಡು ರಕಾತ್ ವಿಶೇಷ ನಮಾಜ್ ನೆರವೇರಿಸಲಾಯಿತು.ಅವರು ಮಾತನಾಡಿ ಹಬ್ಬದ ಸಂದೇಶ ಸಾರಿ, ದಾನದ ಮಹತ್ವ ಕುರಿತು ಭೋಧಿಸಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
"ಅಲ್ಲಾಹು ಅಕ್ಬರ್" ಎಂಬ ಘೋಷವಾಕ್ಯದೊಂದಿಗೆ ಆರು ಹೆಚ್ಚುವರಿ ತಕ್ಬೀರ್‌ಗಳನ್ನು ಪಠಿಸಿ, ದೇವರಿಗೆ ಶರಣಾಗುವ ಸಂಪ್ರದಾಯ ಪಾಲಿಸಲಾಯಿತು. ನಮಾಜ್ ನಂತರ ನಡೆದ ಧಾರ್ಮಿಕ ಪ್ರವಚನದಲ್ಲಿ (ಖುತ್ಬಾ), ಜಗತ್ತಿನ ಸಮಸ್ತ ಜೀವಿಗಳಿಗೆ ದೇವರ ಕರುಣೆ ಮತ್ತು ಶಾಂತಿ ಲಭಿಸಲಿ ಎಂದು ವಿಶೇಷ ದುವಾ ಮಾಡಲಾಯಿತು. "ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹಾ ಇಲ್ಲಲ್ಲಾಹು ಅಲ್ಲಾಹು ಅಕ್ಬರ್, ವಲಿಲ್ಲಾಹಿಲ್ ಹಮ್ದ್" ಎಂಬ ಮಂತ್ರಘೋಷಗಳು ಮೈದಾನದಾದ್ಯಂತ ಮೊಳಗಿದವು.
ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಳ್ಳುವ ಮೂಲಕ "ಈದ್ ಮುಬಾರಕ್" ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಮನೆ ಮನೆಗಳಿಗೆ ಭೇಟಿ ನೀಡಿ ಸಿಹಿ ಹಂಚುವ ಮೂಲಕ ಹಬ್ಬದ ಸಡಗರವನ್ನು ದ್ವಿಗುಣಗೊಳಿಸಿದರು.ಈ ವೇಳೆ ರಾಜೇಸಾಬ ದೊಡವಾಡ, ಅನ್ವರ ಬೆಟಗೇರಿ, ದಿಲಾವರ ಮುಲ್ಲಾ, ಶಾಹಾಜಾನ ಸಂಗೊಳ್ಳಿ, ಶೌಕತ ಅತ್ತಾರ, ಅಶ್ಪಾಕ ಧೂಪದಾಳ, ಅಬುಬಕರ ಪೆಂಡಾರಿ,ಅನ್ವರ ಬೆಟಗೇರಿ, ಹಾಜಿ ಮಹೆಬೂಬ ಬೆಟಗೇರಿ, ಶಮಶೊದಿನ ಮುಲ್ಲಾ,ಜಾಕೀರ ಬೆಟಗೇರಿ, ಹಾಗೂ ಯುವಕರಾದ ಮಕ್ತುಮಹುಸೇನ ಇಂಚಲ, ನಜೀರ ಧೂಪದಾಳ, ಸಲೀಂ ಅಕ್ಕಿ, ಮಕ್ತುಮಹುಸೇನ ತಹಶೀಲ್ದಾರ, ತಾಜುದಿನ ಬೆಟಗೇರಿ, ಸೇರಿದಂತೆ ನೂರಾರು ಮಕ್ಕಳು ಮತ್ತು ಹಿರಿಯರು ಪಾಲ್ಗೊಂಡಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 