ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕ
ಲೋಕದರ್ಶನ ವರದಿ
ಗುತ್ತಲ16: ಬಾರತೀಯ ಭವ್ಯ ಪರಂಪರೆಯಲ್ಲಿ ಹಬ್ಬ ಹರಿದಿನಗಳಿಗೆ ನಮ್ಮ ಪೂರ್ವಜರು ಅತ್ಯಂತ ಮಹತ್ವ ನೀಡಿ ಸಂಸ್ಕಾರ ಸಂಸ್ಕೃತಿಯ ಬೆಳಸುವಲ್ಲಿ ಶ್ರಮಿಸಿವುದರ ಜೊತೆಗೆ ಸಂಸ್ಕೃತಿ ಪ್ರತೀಕವಾಗಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಮಣ್ಣೂರ ಗ್ರಾಮದ ಗದಿಗೇಶ್ವರ ವಿರೂಪಾಕ್ಷೇಶ್ವರ ಹಿರೇಮಠದಲ್ಲಿ ಮಕರಸಂಕ್ರಾಂತಿ ಪ್ರಯುಕ್ತ ಜರುಗಿದ ಇಷ್ಟಲಿಂಗ ಪೂಜೆ ಹಾಗೂ ಸಂಕ್ರಾಂತಿ ಸಂಭ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಭಕ್ತರಿಂದ ಹೆಡಿಗೆ ಪರ್ವ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹೊಸರಿತ್ತಿ ಕೆಸರಳ್ಳ ಮಣ್ಣೂರ ನೆರಳೂರ ಗ್ರಾಮಗಳಿಂದ ಆಗಮಿಸಿದ ಸಧ್ಬಕ್ತರು ವರದಾ ನದಿಯಲ್ಲಿ ಪುಣ್ಯಸ್ಥಾನ ಮಾಡಿ ಶ್ರೀಗಳ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.
ನಂತರ ವಿವಿಧ ತೇರಾವರಿ ಹಬ್ಬದ ಖಾದ್ಯಗಳನ್ನು ಹೆಡಿಗೆ ಪರ್ವ ರೂಪದಲ್ಲಿ ಪೂಜೆಸಲ್ಲಿಸಿ ವಿತರಿಸಿದರು.
ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಎಳ್ಳು ಬೆಲ್ಲ ತಿಂದು ಓಳ್ಳೇಯ ಮಾತನಾಡೋಣ ಎಂದರು. ಇದಕ್ಕೂ ಪೂರ್ವದಲ್ಲಿ ಮಹಿಳೆಯರಿಂದ ಗಂಗಾ ಪೂಜೆ ನೇರೆವೇರಿಸಲಾಯಿತು.
ಗ್ರಾಮದ ಮುಖಂಡರಾದ ಚಂದ್ರಯ್ಯ ಹಿರೇಮಠ ರಮೇಶ ಮಡ್ಲೂರ ವಿರುಪಾಕ್ಷಯ್ಯ ಹಿರೇಮಠ ವಿರಪ್ಪ ತೋರಗಲ್ ಇತರರು ಭಾಗವಹಿಸಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 