ಹಾವೇರಿ:ಫೆ.18 : ಕೀಳರಿಮೆ ತೊರೆದು ಮಹಿಳೆಯರು ಮುಂದೆಬರಬೇಕು. ಛಲದಿಂದ ಮುನ್ನುಗ್ಗುವ ಮನೋಭಾವ ಬೆಳೆಸಿಕೊಂಡರೆ ಪುರುಷ ಪ್ರಧಾನ ಸಮಾಜ ಅಳಿದು ಮಹಿಳಾ ಪ್ರಧಾನ ಸಮಾಜ ನಿಮರ್ಾಣವಾಗುವ ಕಾಲ ದೂರವಿಲ್ಲ ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ನಮ್ಮಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ಮನೋಭಾವವನ್ನು ತೊರೆದು ತಮ್ಮಲ್ಲಿನ ಹಿಂಜರಿಕೆಯನ್ನು ಮೆಟ್ಟಿನಿಂತು ಮುನ್ನುಗ್ಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಬೆಳವಣಿಗೆ ಆಶಾದಾಯಕವಾಗಿದೆ. ಎಸ್.ಎಲಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳಿಂದ ಐ.ಎಸ್.ಎಸ್., ಕೆ.ಎ.ಎಸ್.ನಂತಹ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲೂ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ. ಶಾಲೆಯ ಅಕ್ಷರ ಕಲಿಕೆಯಿಂದ ಹಿಡಿದು ಪಠ್ಯೇತರ ಚಟುವಟಿಕೆಗಳಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇಂತಹ ವೇದಿಕೆಗಳನ್ನು ಬಳಸಿಕೊಂಡು ಉನ್ನತ ಮಟ್ಟದಲ್ಲಿ ಬೆಳೆಯಿರಿ. ಉನ್ನತ ಉದ್ಯೋಗವನ್ನು ಹಿಡಿದು ಕುಟುಂಬ ಮತ್ತು ಸಮಾಜದ ಜವಾಬ್ದಾರಿ ಕೆಲಗಳನ್ನು ಸಮರ್ಥವಾಗಿ ನಿಭಾಯಿಸಿ ಎಂದು ಹಾರೈಸಿದರು.
ಮಹಿಳೆಯರಿಗಾಗಿ ಸಕರ್ಾರ ಹಲವು ಅವಕಾಶಗಳನ್ನು ಕಲ್ಪಿಸಿದೆ. ಮಹಿಳೆಯರಿಗಾಗಿಯೇ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಾಂಸ್ಕೃತಿಕ ಉತ್ಸವಗಳು ಕೇವಲ ನಗರ ಕೇಂದ್ರಿತವಾಗದೆ ಗ್ರಾಮೀಣ ಮಹಿಳೆಯರಿಗೂ ಈ ಉತ್ಸವದಲ್ಲಿ ಭಾಗವಹಿಸುವ ಅವಕಾಶಗಳು ಹೆಚ್ಚಾಗಿ ದೊರಕಬೇಕು. ಇಂತಹ ಕಾರ್ಯಕ್ರಮಗಳನ್ನು ಎಲ್ಲ ಕಡೆ ಆಯೋಜಿಸಿದರೆ ಪುರುಷರಿಗಿಂತ ಸಾಂಸ್ಕೃತಿಕವಾಗಿ ಹೆಚ್ಚು ಪ್ರತಿಭಾನ್ವಿತರಾಗಿರುವ ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಉಪನ್ಯಾಸಕಿ ರೇಖಾ ಬೈರಕ್ಕನವರ ಮಾತನಾಡಿ, ಉನ್ನತ ಸಮಾಜವನ್ನು ಕಟ್ಟಬೇಕಾದರೆ ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಸಮಾಜದ ಎಲ್ಲ ಕಟ್ಟಲೆಗಳನ್ನು ನಿರ್ಭಂಧಗಳನ್ನು ದಾಟಿ ಮಹಿಳೆ ಬೆಳೆಯಬೇಕಾದರೆ ಅವಕಾಶಗಳು ಹಾಗೂ ಶಿಕ್ಷಣ ಅತ್ಯವಶ್ಯ ಎಂದು ಹೇಳಿದರು.
ಸಮಾರಂಭದಲ್ಲಿ ನಗರಸಭೆ ಸದಸ್ಯರಾದ ಮಲ್ಲಣ್ಣ ಸಾತೇನಹಳ್ಳಿ, ಯಲವಗಿಮಠ, ಕವಿತಾ ಬ್ಯಾಡಗಿ, ಚನ್ನಮ್ಮ ಮಲ್ಲಿಕಾಜರ್ುನ, ರಜೀಯಾಬೇಗಂ, ಹುಕ್ಕೇರಿಮಠದ ಆಡಳಿತಾಧಿಕಾರಿ ಬಿ.ಬಸವರಾಜ, ಪ್ರಾಂಶುಪಾಲರಾದ ಶ್ರೀಮತಿ ಡಾ.ಸವಿತಾ ಹಿರೇಮಠ, ಜಿ.ಎಚ್.ಕಾಲೇಜ್ ಪ್ರಾಧ್ಯಾಪಕಿ ಡಾ.ಮಹಾದೇವಿ ಕಣವಿ, ಡಯಟ್ ಉಪನ್ಯಾಸಕಿ ವಿಜಯಮ್ಮ ಆರ್.ಪಾಟೀಲ, ಮೂಡಣ ದಿನಪತ್ರಿಕೆ ಪ್ರಧಾನ ಸಂಪಾದಕಿ ತೇಜಶ್ವಿನಿ ಕಾಶೆಟ್ಟಿ, ಸಾಹಿತಿ ಸತೀಶ ಕುಲಕಣರ್ಿ, ವಾತರ್ಾಧಿಕಾರಿ ಬಿ.ಆರ್.ರಂಗನಾಥ್ ಉಪಸ್ಥಿತರಿದ್ದರು.