ಲೋಕದರ್ಶನ ವರದಿ
ಕೊಪ್ಪಳ 05: ನಗರದ ಬೆಂಕಿನಗರ ಬಡಾವಣೆಯಲ್ಲಿರುವ ಹಡಪದ ಸಮಾಜನ ಕ್ಷೇಮಾಭಿವೃದ್ಧಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಇತ್ತೀಚೆಗಷ್ಟೆ ನೇಪಾಳ ರಾಷ್ಟ್ರದಲ್ಲಿ ಆಯೋಜಿಸಿದ್ದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯ್ನಾಡಿಗೆ ಮರಳಿದ ಕಲಾವಿದೆ ಗಾಯಕಿ ಅನ್ನಪೂರ್ಣಮ್ಮ ಮಹೇಶ್ ಮನ್ನಾಪೂರ ಮತ್ತಿತರಿಗೆ ಮಂಗಳವಾರ ಸಂಜೆ ಏರ್ಪಡಿಸಿದ ಸನ್ಮಾನ ಸಮಾರಂಭ ಜರುಗಿತು.
ಇತ್ತೀಚೆಗೆ ನೇಪಾಳ ರಾಷ್ಟ್ರದಲ್ಲಿ ಆಯೋಜಿಸಿದ್ದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯ್ನಾಡಿಗೆ ಮರಳಿದ ಕಲಾವಿದೆ ಗಾಯಕಿ ಅನ್ನಪೂರ್ಣಮ್ಮ ಮಹೇಶ್ ಮನ್ನಾಪೂರ, ಶ್ರೀನಿವಾಸ್ ಚಿತ್ರಗಾರ ಮತ್ತು ಅವರ ಪತ್ನಿ ವಿದ್ಯಾವತಿ ಚಿತ್ರಗಾರ, ಕು.ವೀಣಾ ಚಿತ್ರಗಾರ ಮತ್ತು ಶಿಕ್ಷಕಿ ವಿಜಯಕುಮಾರಿ ರವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ಮಹಾಂತೇಶ್ ಮಲ್ಲನಗೌಡರ್ ಹಿರಿಯ ಪತ್ರಕರ್ತರಾದ ಜಿ.ಎಸ್.ಗೋನಾಳ, ಎಂ ಸಾದಿಕ್ ಅಲಿ ಆಗಮಿಸಿದ್ದರು ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ ಸಮಾಜದ ಹಿರಿಯರಾದ ಬಸಪ್ಪ ಹಳ್ಳಿಕೇರಿ, ಮಲ್ಲಪ್ಪ ಚಿಕೇನಕೊಪ್ಪ, ರಮೇಶ ಚಟ್ನಿಹಾಳ, ದ್ಯಾಮಣ್ಣ ಮಾದಿನೂರ, ಮಾಜಿ ಸೈನಿಕ ಶಿವಾಜಿ ಹಡಪದ, ನಿಂಗಪ್ಪ ಹಂದ್ರಾಳ ಸೇರಿದಂತೆ ಹಡಪದ ಸಮಾಜದ ಬಾಂಧವರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.