ನಿವೃತ್ತಿಗೊಂಡ ಪ್ರಚಾರ್ಯ ರಫೀಕ್ ಅಹಮದ್‌ಗೆ ಸನ್ಮಾನ

ನಿವೃತ್ತಿಗೊಂಡ ಪ್ರಚಾರ್ಯ ರಫೀಕ್ ಅಹಮದ್‌ಗೆ  ಸನ್ಮಾನ  Felicitation to retired Prof. Rafiq Ahmed

ಕೊಪ್ಪಳ  29:  ಕಲ್ಯಾಣ ಕರ್ನಾಟಕ ಉತ್ತರ ಕರ್ನಾಟಕ ಭಾಗದ ಹಿರಿಯ ನಿವಾಸಿ ಶಿಕ್ಷಣ ತಜ್ಞ ವಿಜಯಪುರದ ರಫೀಕ್ ಅಹಮದ್ ರವರು ಮೈಸೂರಿನಲ್ಲಿ ಎಂಇಎಸ್ ಐಟಿಐ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಕಾಲೇಜು ಆವರಣದಲ್ಲಿ ಏರಿ​‍್ಡಸಿದ ನಿವೃತ್ತಿ ಬೇಳ್ಕೊಡುಗೆ ಸಮಾರಂಭದಲ್ಲಿ ಉದ್ಯಮಿ ಸಮಾಜ ಸೇವಕ ತಾಹಿರ್ ಅಲಿ ನೇತೃತ್ವದ ತಂಡ ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಶುಭ ಕೋರಿದರು.

ರಫೀಕ್ ಅಹಮದ್ ರವರು ಮೂಲತಃ ವಿಜಯಪುರದ ನಿವಾಸಿಯಾಗಿದ್ದು 19 80 81ರ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೊಪ್ಪಳದಲ್ಲಿ ಪಡೆದುಕೊಂಡು ನಂತರದ ಸಂದರ್ಭದಲ್ಲಿ ಅವರು ಮೈಸೂರಿನ ಎಂಇಎಸ್ ಐಟಿಐ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಗೊಂಡ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನಿಸಿ ನಿವೃತ್ತಿ ಜೀವನ ಸುಖಕರವಾಗಲಿ ಸಮಾಜಕ್ಕೆ ಇನ್ನಷ್ಟು ಸೇವೆ ರಫೀಕ್ ಅಹಮದ್ ರವರಿಂದ ದೊರೆಯಲಿ ಎಂದು ತಾಹಿರ್ ಅಲಿ ಅವರು ಶುಭ ಹಾರೈಸಿದ್ದಾರೆ, ರಫೀಕ್ ಅಹಮದ್ ರವರು ನಿವೃತ್ತಿಗೊಂಡು ಸನ್ಮಾನ ಸ್ವೀಕರಿಸಿದ ಈ ಸಂದರ್ಭದಲ್ಲಿ ಕೊಪ್ಪಳದ ಅವರ ಸಹಪಾಠಿ ಸ್ನೇಹಿತರ ಬಳಗ ತೀವ್ರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಹಾಗೂ ರಫೀಕ್ ಅಹಮದ್ ರವರು ತಮ್ಮ ನಿವೃತ್ತಿ ಜೀವನ ಜೊತೆಗೆ ಸಮಾಜದ ಸೇವೆ ಕಾರ್ಯದಲ್ಲಿ ತೊಡಗಲಿ ಎಂದು ಆಶಿಸಿದ್ದಾರೆ.

ಈ ಸಂದರ್ಭದಲ್ಲಿ ರಫೀಕ್ ಅಹಮದ್ ರವರ ಪತ್ನಿ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕರ ಬಳಗ ಮತ್ತು ವಿದ್ಯಾರ್ಥಿಗಳ ಬಳಗ ಪಾಲ್ಗೊಂಡಿದ್ದರು.