ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ ಸನ್ಮಾನ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ ಸನ್ಮಾನ  Felicitation of BLOs who successfully completed the voter list revision process

ಕೊಲಾರ 28: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಜುಲೈ 27ರಂದು ಬಸವನಬಾಗೇವಾಡಿ ಮತಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ನಿಗದಿತ ಅವಧಿಗೂ ಮುನ್ನ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ಎಚ್‌.ಬಿ. ಹಾದಿಮನಿ, ಎನ್‌.ಬಿ. ಬಡಿಗೇರ್, ಗಂಗೂಬಾಯಿ ಕಲ್ಲೊಳ್ಳಿ, ರಾಜಕುಮಾರ ಕಾಖಂಡಕಿ ಹಾಗೂ ಸುರೇಶ್ ಕರಾಬಿ ಅವರನ್ನು ಸನ್ಮಾನಿಸಲಾಯಿತು.  

ತಹಶೀಲ್ದಾರ್ ಎಸ್‌.ಎಂ. ಮ್ಯಾಗೇರಿ ಮಾತನಾಡಿ, ಅಧಿಕಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಶ್ಲಾಘನೀಯ. ಅವರ ಪರಿಶ್ರಮದಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ​‍್ಕವಾಗಿ ನಡೆದಿದ್ದು, ತಾಲೂಕು ಆಡಳಿತದ ಪರವಾಗಿ ಅಭಿನಂದನೆ ಸಲ್ಲಿಸಿದರು.  

ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಎನ್‌.ಕೆ. ನದಾಫ್, ಕಂದಾಯ ನೀರೀಕ್ಷಕ ಪರಶುರಾಮ ಹುಡೇದ, ಮೇಲ್ವಿಚಾರಕ ಅಧಿಕಾರಿ ಅಶೋಕ್ ಎಂ. ಬನ್ನೂರ, ಗ್ರಾಮ ಆಡಳಿತಾಧಿಕಾರಿಗಳಾದ ಬಿ.ಎನ್‌. ಜಿದ್ದಿಮನಿ, ಅಶೋಕ್ ಗಿಡ್ಡಪ್ಪಗೋಳ, ಎಸ್‌.ಎನ್‌. ತಡಲಗಿ, ಸಂಗಮೇಶ್ ಜಂಗಮಶೆಟ್ಟಿ, ನಾಗರಾಜ ಬನಸೋಡೆ, ಕೃಷ್ಣಾ ರಜಪೂತ, ಗಂಗಾಧರ ಆಸಂಗಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.