ಪಟ್ಟಣಶೆಟ್ಟಿ ಅವರ ನಿಸ್ವಾರ್ಥ ಸೇವೆಗೆ ಸಂದ ಗೌರವ: ಶಿವಾನಂದ ಕಲಬುರ್ಗಿ

ಪಟ್ಟಣಶೆಟ್ಟಿ ಅವರ ನಿಸ್ವಾರ್ಥ ಸೇವೆಗೆ ಸಂದ ಗೌರವ: ಶಿವಾನಂದ ಕಲಬುರ್ಗಿ Felicitation for Pattanashetty for his selfless service: Shivanand Kalaburgi

ದೇವರಹಿಪ್ಪರಗಿ : ತಾಲೂಕು ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ  ಇವರ ಪ್ರಾಮಾಣಿಕ ನಿಸ್ವಾರ್ಥವಾದ ಸೇವೆಗೆ 21ಸಂದ ಗೌರವ ಎಂದು ಸಿಂದಗಿ ತಾಲ್ಲೂಕಿನ ಬಸವದಳ ಘಟಕದ ಮಾಜಿ ಅಧ್ಯಕ್ಷರಾದ ಶಿವಾನಂದ ಕಲಬುರ್ಗಿ ಹೇಳಿದರು. 

ಸಿಂದಗಿ ಪಟ್ಟಣದಲ್ಲಿ ರವಿವಾರದಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಬೆಂಗಳೂರು ಹಾಗೂ ಜಿಲ್ಲಾ ಘಟಕ ವತಿಯಿಂದ ವಿಜಯಪುರ ನಗರದಲ್ಲಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದ ಕಾರಣ ತಾಲೂಕು ಬಸವದಳ ಹಾಗೂ ಕಲಬುರ್ಗಿ ಕುಟುಂಬದವರಿಂದ ಸನ್ಮಾನಿಸಿ ಗೌರವಿಸಿದ ನಂತರ ಮಾತನಾಡಿದ ಅವರು, ದೇವರ ಹಿಪ್ಪರಗಿ ತಾಲೂಕು ಕನ್ನಡಪ್ರಭ ಪತ್ರಿಕೆಯ ವರದಿಗಾರರಾಗಿ ಅತ್ಯುತ್ತಮ ಹೆಸರು ಮಾಡಿದ್ದಾರೆ.ಪತ್ರಕರ್ತರಾದವರು ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿದು, ತಿದ್ದುವ ಕಾರ್ಯ ಮಾಡುತ್ತಾರೆ. ಸಮಾಜ ಪತ್ರಕರ್ತರ ಕೆಲಸ ಗುರುತಿಸಿ, ಪ್ರೋತ್ಸಾಹಿಸಬೇಕು’ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ತಾಲೂಕು ಬಸವದಳದ ಪದಾಧಿಕಾರಿಗಳಾದ ಗುರಣ್ಣ ಬಸರಕೋಡ,ಡಾ.ಮಾಂತೇಶ ಅಂಗಡಿ, ಬಸವರಾಜ ಗುಗ್ಗರಿ, ವಿಶ್ವನಾಥ ಜೋಗೂರ, ದಾನಪ್ಪ ಜೋಗೂರ, ನಿವೃತ್ತ ಗ್ರ.ಪಾ ಎಸ್‌.ಎಂ.ಕುಂಬಾರ,ಶಿಕ್ಷಕ ಸಂಗಮೇಶ ಪಟ್ಟಣಶೆಟ್ಟಿ, ಬಸವರಾಜ ಕಲಬುರ್ಗಿ, ಸುನೀಲ ಕಲಬುರ್ಗಿ,ದಾನೇಶ ಕಲಬುರ್ಗಿ,ಮಮ್ಮಾದೇವಿ ಕಲಬುರ್ಗಿ, ಉಮಾದೇವಿ ಕಲಬುರ್ಗಿ ಸೇರಿದಂತೆ ಕಲಬುರ್ಗಿ ಕುಟುಂಬದವರು ಇದ್ದರು.