ನಿವೃತ್ತ ಶಿಕ್ಷಣಾಧಿಕಾರಿ ಡಾ. ಜಿ.ಎಂ. ಮುಂದಿನಮನಿ ಅವರಿಗೆ ಆಗಸ್ಟ್‌ 2ರಂದು ಅಭಿನಂದನಾ ಸಮಾರಂಭ

ನಿವೃತ್ತ ಶಿಕ್ಷಣಾಧಿಕಾರಿ ಡಾ. ಜಿ.ಎಂ. ಮುಂದಿನಮನಿ ಅವರಿಗೆ ಆಗಸ್ಟ್‌ 2ರಂದು ಅಭಿನಂದನಾ ಸಮಾರಂಭ  Felicitation ceremony for retired Education Officer Dr. G.M. Mundinamani on August 2

ಲಕ್ಷ್ಮೇಶ್ವರ, ಜು.31: ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಜುಲೈ 31ರಂದು ನಿವೃತ್ತಿಯಾಗಿರುವ ಡಾ. ಜಿ.ಎಂ. ಮುಂದಿನಮನಿ ಅವರ ಗೌರವಾರ್ಥ ಆಗಸ್ಟ್‌ 2ರಂದು ಲಕ್ಷ್ಮೇಶ್ವರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.  

ಗದಗ ಡಯಟ್ನ ಉಪಪ್ರಾಂಶುಪಾಲರಾಗಿ, ಗದಗ ನಗರ ಕ್ಷೇತ್ರ ಹಾಗೂ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಡಾ. ಮುಂದಿನಮನಿ ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಅಭಿಮಾನಿಗಳ ಬಳಗ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.  

ಆಗಸ್ಟ್‌ 2ರಂದು ಬೆಳಗ್ಗೆ ಪಟ್ಟಣದ ಪಂಪಾ ಸರ್ಕಲ್ನಿಂದ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ವಿವಿಧ ಕಲಾತಂಡಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಬಳಿಕ ಬಾಲೇಹಳ್ಳಿ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.  

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸರ್ಕಾರದ ಸಚಿವರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಶಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುವ ನೀರೀಕ್ಷೆಯಿದೆ.  ಈ ಕುರಿತು ನಿವೃತ್ತ ಶಿಕ್ಷಕರಾದ ಎಸ್‌.ಎಫ್‌. ದೊಡ್ಡಮನಿ, ಮಾಜಿ ಸೈನಿಕ ಸಂಜೀವಣ್ಣ ಸೇರಿದಂತೆ ಅಭಿನಂದನಾ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.