ಶಿಗ್ಗಾವಿ 16 : ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ತಡಸ ಗ್ರಾಮದ ಸರಕಾರಿ ಪಿ ಯು ಕಾಲೇಜಿನಲ್ಲಿ ಪೆ. 18 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಶಾಸಕ ಯಾಶೀರಖಾನ ಪಠಾಣ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಅರ್ಜಿ ಸ್ವೀಕಾರ ಹಾಗೂ ವಿಲೇವಾರಿ ಮಾಡಲಿದ್ದು ಕಾರಣ ತಾಲೂಕಿನ ಸಾರ್ವಜನಿಕರು ರೈತ ಬಾಂಧವರು ಸದರಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಪ್ರಬಾರಿ ತಹಶಿಲ್ದಾರ ರವಿ ಕೊರವರ ಪ್ರಕಟಣೆಗೆ ಕೋರಿದ್ದಾರೆ.