ತಾಳಿಕೋಟೆ, ಕೊರೊನಾ ವೈರಸ್ ಭೀತಿಯ ನಡುವೆಯೂ ನಡೆದ ಎಸ್.ಎಸ್.ಎಲ್.ಸಿ ಪರಿಕ್ಷೆಯ ಸಂದರ್ಬದಲ್ಲಿ ಮನೆಯಲ್ಲಿ ತಂದೆಗೆ ಹಾವು ಕಚ್ಚಿ ಮನೆಯಲ್ಲಿ ಸಾವನಪ್ಪಿದ ಸಂದರ್ಬದಲ್ಲಿ ಮನೆಯಲ್ಲಿ ಪಾಥರ್ಿವ ಶರೀರದ ಮುಂದೆ ದುಃಖದ ಮಡುವಿನಲ್ಲಿದ್ದ ಕುಟುಂಭಸ್ಥರ, ಸಂಬಂದಿಗಳ ರೋಧನದ ನಡುವೆಯೂ ಬಾಲಕನಿಗೆ ಧೈರ್ಯ ತುಂಬಿದ್ದು ಗ್ರಾಮಸ್ಥರು.. ಎಸ್ಎಸ್ಎಲ್ಸಿ ಪರೀಕ್ಷೆಯ ವಿಷಯವಾದ ಕನ್ನಡ ಭಾಷಾ ಪರೀಕ್ಷೆಯನ್ನು ಗುರುವಾರರಂದು ವಿದ್ಯಾಥರ್ಿ ಹಾಜರಾಗಿ ಯಶಸ್ವಿಯಾಗಿ ಪೂರೈಸಿದ ಘಟನೆ ಬೆಳಕಿಗೆ ಬಂದಿದೆ.
ತಾಳಿಕೋಟೆ ತಾಲೂಕಿನ ಫೀರಾಪೂರ ಗ್ರಾಮದ ಸಿದ್ದಪ್ಪ ಬಸ್ಸಪ್ಪ ಸಾಗರ(45) ರೈತನು ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ ಇದನ್ನು ಅರೀಯದ ಸಿದ್ದಪ್ಪ ಸಾಗರ ಏನೋ ಚರಚಿರಬಹುದು ಎಂದು ತಿಳಿದು ಮನೆಗೆ ಬಂದಾಗ ಸುಸ್ತಾಗುತ್ತಾ ಮಲಗಿಕೊಂಡಿದ್ದಾನೆ ಹಾವಿನ ವಿಷ ಮೈಯಲ್ಲಾ ಏರಿ ಕೊನೆಗೆ ಯಾವುದೇ ಚಿಕೀತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ, ತನ್ನ ತನ್ನ ತಂದೆಯ ಸಾವಿನ ನೋವಿನಲ್ಲಿದ್ದ ಬಾಲಕ ಪರಶುರಾಮ ಕನ್ನಡ ಪರಿಕ್ಷೆ ಬರೆಯಲು ಹಿಂದೇಟು ಹಾಕಿದಾಗ ಆತನ ಭವಿಷ್ಯದ ದೃಷ್ಠಿಯಿಂದ ವಿದ್ಯಾಥರ್ಿಗೆ ಧೈರ್ಯ ತುಂಬಿದ ಕುಟುಂಬಸ್ಥರು, ಮತ್ತು ಗ್ರಾಮದ ಮುಖಂಡರಾದ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ) ಅವರು ಬಾಲಕನಿಗೆ ಮಾನಸಿಕ ಸ್ಥೈರ್ಯ ತುಂಬಿ ತಾಳಿಕೋಟೆ ಪಟ್ಟಣದಲ್ಲಿರುವ ಶ್ರೀಸಂಗಮೇಶ್ವರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬೈಕ್ ಸಹಾಯದ ಮೂಲಕ ಕಳುಹಿಸಿಕೊಡುವಂತ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪರೀಕ್ಷೆ ಬರೆದ ಬಳಿಕ ಬಾಲಕ ಪರಶುರಾಮ ಬೈಕ್ ಸಹಾಯದ ಮೂಲಕ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದಾನೆ.
ರಾಜ್ಯದೆಲ್ಲಡೆ ತನ್ನ ಬಾವುವನ್ನು ಚಾಚುತ್ತಾ ಅಟ್ಟಹಾಸವನ್ನು ಮೇರೆಯುತ್ತಿರುವ ಕೊರೊನಾ ವೈರಸ್ ಭೀತಿ ನಡುವೆ, ಪರೀಕ್ಷೆ ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲದ ನಡುವೆ ನಡೆದ ಪರಿಕ್ಷೆಯಲ್ಲಿ ತನ್ನ ತಂದೆ ಸಾವಿನ ನೋವಿನಲ್ಲಿಯೂ ವಿದ್ಯಾಥರ್ಿಯೊಬ್ಬ ಎಸ್ಎಸ್ಎಎಲ್ಸಿ ಪರೀಕ್ಷೆಗೆ ಹಾಜರಾಗುವ ಮೂಲಕ, ಕೊರೊನಾ ವೈರಸ್ ನೆಪದ ಮೇಲೆ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ವಿದ್ಯಾಥರ್ಿಗಳಿಗೆ ಮಾದರಿಯಾಗಿದ್ದಾನೆ. ಶುಕ್ರವಾರರಂದು ನಡೆದ ಕೊನೆಯ ಹಿಂದಿ ಭಾಷಾ ಪರಿಕ್ಷೆಗೂ ಹಾಜರಾಗಿ ಪರಿಕ್ಷೆಯನ್ನು ಬರೆದಿದ್ದಾನೆ.
ಮನೆಗೆ ಆಧಾರ ಸ್ಥಂಭವಾಗಿದ್ದ ಸಿದ್ದಪ್ಪ ಸಾಗರ ಹಾವು ಕಚ್ಚಿ ಮೃತಪಟ್ಟಿದ್ದರಿಂದ ಕುಟುಂಭವು ಚಿಂತಾಕ್ರಾಂತವಾಗಿದೆ ಸಿದ್ದಪ್ಪ ಸಾಗರಗೆ ಪತ್ನಿ ಓರ್ವ ಪುತ್ರಿ, ಪುತ್ರನಿದ್ದಾನೆ.
ಪರಿಕ್ಷೆ ಎಂಬುದು ವಿದ್ಯಾಥರ್ಿಗಳ ಭವಿಷ್ಯ ರೂಪಿಸುವ ಹಿತದೃಷ್ಠಿಯಿಂದ ನಡೆಯುವ ಸತ್ವಪರಿಕ್ಷೆಯಾಗಿದೆ ತಂದೆ ಸಾವನಪ್ಪಿದ್ದ ಸಂದರ್ಬದಲ್ಲಿ ಮನೆಯಲ್ಲಿ ಪಾಥರ್ಿವ ಶರೀರವಿದ್ದರೂ ಕುಟುಂಬಸ್ಥರ ಬಯಕೆಗನುಸಾರ ಬಾಲಕ ಪರಶುರಾಮನಿಗೆ ಮಾನಸಿಕ ಸ್ಥೈರ್ಯ ತುಂಬಿ ಪರಿಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ.
ಸುರೇಶಬಾಬುಗೌಡ ಬಿರಾದಾರ
ಫೀರಾಪೂರ ಗ್ರಾಮದ ಮುಖಂಡರು