ಮಥುರಾ, ಫೆ 12 : ನಿವೃತ್ತ ಸೇನಾ ಅಧಿಕಾರಿಯೊಬ್ಬರು ತನ್ನ ಮಗಳಿಂದಲೇ ಹತರಾಗಿದ್ದಾರೆ ಸೇನಾ ಅಧಿಕಾರಿ ತನ್ನ ಮಗಳಿಗೆ ಮತ್ತು ಅವನ ಹೆಂಡತಿಗೆ ಗುಂಡು ಹಾರಿಸಿ, ಮಗನ ಹತ್ಯೆಗೂ ಯತ್ನಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಿತ್ತೌಲಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಪತ್ನಿಯೊಂದಿಗೆ ವಾಗ್ವಾದ ನಡೆದ ನಂತರ 45 ವರ್ಷದ ಚೆತ್ರಮ್ ತನ್ನ ಮಗಳು ಹಾಗೂ ಪತ್ನಿ ರಾಜಕುಮಾರಿಯ ಮೇಲೆ ಗುಂಡು ಹಾರಿಸಿದ್ದಾರೆ ನಂತರ ತನ್ನ 13 ವರ್ಷದ ಮಗ ಆದರ್ಶ್ ಮೇಲೂ ಗುಂಡು ಹಾರಿಸಲು ಯತ್ನಿಸಿದಾದ ಪುತ್ರಿ ಅಲ್ಕಾ ಪಿಸ್ತೂಲು ಕಿತ್ತುಕೊಂಡು ತಿರುಗಿ ತಂದೆಯ ಮೇಲೆ ಗುಂಡು ಹಾರಿಸಿದ್ದರಿಂದ ಆತ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
"ಸೇನೆಯ ನಿವೃತ್ತ ಸೈನಿಕನಾದ ಚೆತ್ರಮ್ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತ್ನಿ ರಾಜ್‌ಕುಮಾರಿ (38) ಮತ್ತು ಮಗಳು ಅಲ್ಕಾ (19) ಆಸ್ಪತ್ರೆಯಲ್ಲಿ ಸಾವು, ಬದುಕಿನೊಂದಿಗೆ ಹೋರಾಡುತ್ತಿದ್ದಾರೆ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶಲಾಭ್ ಮಾಥೂರ್ ಹೇಳಿದ್ದಾರೆ.
ಅಲ್ಕಾ ಮತ್ತು ರಾಜ್‌ಕುಮಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತ್ರಾಮ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಥುರ್ ತಿಳಿಸಿದ್ದಾರೆ.
ಅಲ್ಕಾ ಅಲಹಾಬಾದ್‌ನಲ್ಲಿ ಓದುತ್ತಿದ್ದು, ಎರಡು ದಿನದ ಹಿಂದೆ ಮನೆಗೆ ಬಂದಿದ್ದರು. ಆದರ್ಶ್ ಮನೆಗೆ ಹತ್ತಿರದ ಶಾಲೆಯಲ್ಲಿ ಓದುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.