ಆಮರಣ ಉಪವಾಸ ಸತ್ಯಾಗ್ರಹ ಆ. 1 ರಿಂದ : ಸತೀಶ ಪಾಟೀಲ
Fast unto death from August 1st: Satish Patil
ವಿಜಯಪುರ 28 : ವಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಕನ್ನೂರ ಹಾಗೂ ಮಡಸನಾಳ ಗ್ರಾಮದ ಕುಡಿಯುವ ನೀರಿನ ಸಲುವಾಗಿ ಕೆರೆಗಳನ್ನು ನೀರು ತುಂಬಿಸುವದು ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿಯ ಪೈಪಲೈನಿಗೆ ಜಾಕವಲ್ ಬಿಡುವ ಸಲುವಾಗಿ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಮುಂಬರುವ ದಿನಗಳಲ್ಲಿ ಆಮರಣಾಂತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಆನಂದ ಅವರಿಗೆ ವಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ಕನ್ನೂರ, ಕನ್ನೂರದರ್ಗಾ, ಭಾವಿಕೋಡದಡ್ಡಿ ಹಾಗೂ ಮಡಸನಾಳ ಗ್ರಾಮಸ್ತರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸತೀಶ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಕನ್ನೂರ ಹಾಗೂ ಮಡಸನಾಳ ಗ್ರಾಮದ ಕೆರೆಗಳನ್ನು ಕನ್ನೂರ ಗ್ರಾಮ ಪಂಚಾಯತಿಯಿಂದ ನರೇಗಾ ಅಮೃತಸರೋವರ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಕನ್ನೂರ ಕೆರೆಯ ಸುಮಾರು 15 ಎಕರೆಗಳಷ್ಟು ಇದ್ದು, ಹಾಗೂ ಮಡಸನಾಳ ಕೆರೆ 17 ಎಕರೆಗಳಷ್ಟು ಇದ್ದು, ಅಚ್ಚುಕಟ್ಟಾಗಿ ನಿರ್ಮಾಣಗೊಂಡಿರುತ್ತವೆ. ಆದರೆ ಕೆರೆಗಳಿಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ನೀರು ತುಂಬಿಸಿಲ್ಲ. ಜೊತೆಗೆ ಈ ಭಾಗದಲ್ಲಿ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಪೈಪಲೈನ್ ಹಾಯ್ದು ಹೋಗುತ್ತಿದ್ದು, ಈ ಭಾಗದಲ್ಲಿ ಅದರ 3 ಜಾಕವೆಲ್‌ಗಳನ್ನು ಅವಶ್ಯ ಇದ್ದಲ್ಲಿ ಬಿಡಬೇಕು, ಜೊತೆಗೆ ತಿಡಗುಂಡಿ ಕಾಲುವೆ ಕನ್ನೂರದಿಂದ 1 ಕಿ.ಮೀ. ಹಾಗೂ ಮಡಸನಾಳದಿಂದ 4 ಕಿ.ಮೀ. ಅಂತರದಲ್ಲಿರುತ್ತದೆ. ಕಾರಣ ಇವುಗಳನ್ನು ಕೆರೆ ತುಂಬುವ ಯೋಜನೆಗೆ ಪರಿಗಣಿಸಿದರೆ 8000 ಎಕರೆ ನೀರಾವರಿ ಸೌಲಭ್ಯ ಮತ್ತು ಸೌಲಭ್ಯ ಜೊತೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ 20000 ಜನರಿಗೆ ಮತ್ತು ದನಕರುಗಳಿಗೆ ನೀರಾವರಿ ಸಿಗಲಿದೆ. ಕಾರಣ ಯಾವುದಾದರೊಂದು ಕೆರೆ ತುಂಬುವ ಯೋಜನೆಯಡಿ ಪರಿಗಣಿಸಿ ಶೀಘ್ರ ಪರಿಹಾರ ಒದಗಿಸಬೇಕಾಗಿ ಎಂದು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಕನ್ನೂರ ಹಾಗೂ ಮಡಸನಾಳ ಗ್ರಾಮದ ಕುಡಿಯುವ ನೀರಿನ ಸಲುವಾಗಿ ಕೆರೆಗಳನ್ನು ನೀರು ತುಂಬಿಸುವದು ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿಯ ಪೈಪಲೈನಿಗೆ ಜಾಕವೆಲ್ ಬಿಡುವ ಸಲುವಾಗಿ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, 2025 ರಂದು ಜಿಲ್ಲಾಧಿಕಾರಿಗಳ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಕ್ಕಿರುವದಿಲ್ಲ ದಿನಾಂಕ: 01-08-2025 ರಿಂದ ಆವರಣದಲ್ಲಿ ಆಮರಣಾಂತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮರಾವ ಶಿಂಧೆ, ರಫಿಕ ಮುಲ್ಲಾ, ಅಶೋಕಗೌಡ ಪಾಟೀಲ, ಮಾಸಿದ್ದ ಪೂಜಾರಿ, ಪ್ರಕಾಶ ಪವಾರ, ಹಣಮಂತಗೌಡ ಪಾಟೀಲ ಸೇರಿದಂತೆ ಮುಂತಾದವರು ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 