ಬೆಳಗಾವಿ,1 ಯುವ ಮನಸ್ಸುಗಳು ಸಮಾಜಕ್ಕೆ ಒಪ್ಪಿಗೆಯಾಗಿರುವ ಆಚರಣೆಗಳಿಗಿಂತ ಭಿನ್ನವಾದುದನ್ನು ಮಾಡಲು ಇಷ್ಟಪಡುತ್ತಾರೆ. ಅದೇ ಒಂದು ಟ್ರೆಂಡ್ ಆಗುತ್ತದೆ ಅದನ್ನೆ ಫ್ಯಾಶನ್ ಎನ್ನಲಾಗುತ್ತದೆ. ಫ್ಯಾಶನ್ ಅತ್ಯಂತ ಪ್ರಾಚೀನವಾದದ್ದು. ಆ ಕಾಲಘಟ್ಟದಲ್ಲಿಯ ಸಾಂಸ್ಕೃತಿಕ, ಸಾಮಾಜಿಕ ರೀತಿ ರಿವಾಜುಗಳಿಗಿಂತ ಭಿನ್ನವಾದ ಉಡುಗೆ ತೊಡುಗೆ ಹಾಕಿಕೊಳ್ಳುವುದು. ಕೆಲವು ದಶಕಗಳ ಮೊದಲು ಫ್ಯಾಶನ್ ಕೇವಲ ಶ್ರೀಮಂತ ಯುವ ಜನತೆಯ ಕೈಯಲ್ಲಿತ್ತು. ತಂತ್ರಜ್ಞಾನ ಬೆಳೆದಂತೆ ಜನಸಮೂದಾಯದತ್ತ ಮುನ್ನುಗ್ಗಿದೆ. ಫ್ಯಾಶನ್ ಹಾಗೂ ವಸ್ತ್ರ ವಿನ್ಯಾಸ ಒಂದು ಕಲೆಯಾಗಿದ್ದು ಇದಕ್ಕೆ ವಿಶಾಲವಾದ ಮಾರುಕಟ್ಟೆಯಿದೆ. ವಿನೂತನ ವಿನ್ಯಾಸದ ವಸ್ತ್ರಗಳನ್ನು, ಆಭರಣಗಳನ್ನು ಧರಿಸುವ ಮಾಡಲಿಂಗ್ ವೃತ್ತಿಯು ಕೂಡಾ ಇಂದು ಜನಪ್ರೀಯವಾಗುತ್ತಿದೆ. ಈ ವೃತ್ತಿ ಆಥರ್ಿಕ ದೃಷ್ಟಿಯಿಂದಲೂ ದೇಶದ ಯುವಜನತೆಗೆ ಅತ್ಯಂತ ಪ್ರೀಯ. ಎಂದು ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಪ್ರಹ್ಲಾದ್ ತಡಸದ್ ಹೇಳಿದರು. ಜೆಎನ್ಎಂಸಿ ಆವರಣದ ಕೆ ಎಲ್ ಇ ಶತಮಾನೋತ್ಸವ ಸ್ಮಾರಕ ಡಾ. ಜೀರಗೆ ಸಭಾ ಭವನದಲ್ಲಿ ಕೆಎಲ್ಇ ಸಂಸ್ಥೆಯ ಫ್ಯಾಶನ್ ಟೆಕ್ನಾಲಜಿ ಮತ್ತು ಅಪರಲ್ ಡಿಸೈನ್ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾಥರ್ಿಗಳು ನಡೆಸಿಕೊಟ್ಟ ವಸ್ತ್ರ ವಿನ್ಯಾಸ (ಫ್ಯಾಶನ್ ಶೋ) ಉಧ್ಘಾಟಿಸಿ ಮಾತನಾಡಿದ ಅವರು "ಭಾರತೀಯ ಮಾರುಕಟ್ಟೆ ಅತ್ಯಂತ ದೊಡ್ಡ ಮಾರುಕಟ್ಟೆ. ಸಾಮಾನ್ಯ ಜನರ ಕೈಗೆಟಕುವ ದರದಲ್ಲಿ ಫ್ಯಾಶನ್ ಎಲ್ಲರಿಗೂ ತಲುಪುವುದಾದರೆ ಫ್ಯಾಶನ್ ಡಿಸೈನಿಂಗ್ , ಫ್ಯಾಶನ್ ಟೆಕ್ನಾಲಜಿ, ಮಾಡಲಿಂಗ್ ಬೇರೊಂದು ಹಂತ ತಲುಪುತ್ತೇವೆ" ಎಂಬ ಆಶಯವಾಗಿರುತ್ತದೆ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನ ವಹಿಸಿದ್ದ ಕೆಎಲ್ಇ ಬಿ.ವಿ ಬೆಲ್ಲದ ಕಾನೊನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಜಯಸಿಂಹ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದು ಯುವಪೀಳಿಗೆ ಮನಸ್ಸಿಗೆ ಮುದ ನೀಡುವ ಫ್ಯಾಷನಗಳಿಗೆ ಮಾರುಹೋಗಿದೆ. ಹೊಸ ಮಾದರೀಯ ರೋಪವಾಗಿ ವಿದ್ಯಾಥರ್ಿಗಳು ತಮ್ಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು ಕೆ.ಎಲ್.ಇ ಸಂಸ್ಥೆ ಯಾವತ್ತು ಗುಣಮಟದ ಶಿಕ್ಷಣಕ್ಕೆ ಪ್ರಾಸಶ್ತ್ಯಕೊಡುತ್ತಿದ್ದು ಉದ್ಯೋಗ ಆಧಾರಿತ ಶಿಕ್ಷಣದಕಡೆ ಗಮನ ನೀಡುತ್ತಿದೆ. ಸಂಸ್ಥೆಯ ಈ ವಿದ್ಯಾಲಯ ಹೊಸ ಅವಿಷ್ಕಾರದ ಫಾಷ್ಯನ್ನಗಳನ್ನ ಪರಿಚಯಿಸುವ ಹಾಗು ಸಂಶೋಧನೆಗೆ ಅವಶ್ಯವಿರುವ ಎಲ್ಲ ಸವಲತ್ತುಗಳನ್ನ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಹಾಗು ಅಧ್ಯಕ್ಷರು "ಮಂಥನ-09" ಸ್ಮರಣ ಸಂಚಿಕೆಯನ್ನ ಬಿಡುಗಡೆ ಮಾಡಿದರು. ಶೈಕ್ಷಣಿಕವಾಗಿ ಹಾಗೂ ವಿಶೇಷ ಸಾಧನೆ ಮಾಡಿ ಪದಕ ಪಡೆದ ಹಾಗು ಪ್ರಸ್ತುತ ಸಾಲಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 10 ರ್ಯಾಂಕಗಳನ್ನ ಪಡೆದ ಹಾಗೂ ಪ್ರತಿಭಾವಂತ ವಿದ್ಯಾಥರ್ಿನಿಯರನ್ನ ಸತ್ಕರಿಸಿದರು. ವಿದ್ಯಾಲಯದ ಪರವಾಗಿ ಮುಖ್ಯ ಅತಿಥಿ ಪ್ರೊ. ಪ್ರಹ್ಲಾದ್ ತಡಸದ್, ಸಮಾರಂಭದ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ ಮತ್ತು ಜೂರಿಗಳಾದ ಡಾ.ಎ.ಜಿ.ಶಂಕರ್ ಮತ್ತು ಶ್ರೀಮತಿ ಜಸ್ವಿಂದರ ಖುರಾನಾ ಇವರುಗಳನ್ನ ಸತ್ಕರಿಸಲಾಯಿತು.
ಪ್ರದರ್ಶನದ ನಂತರ ನಡೆದ ಮುಕ್ತಾಯ ಸಮಾರಂಭದಲ್ಲಿ ಜ್ಯೂರಿಗಳಾಗಿ ಆಗಮಿಸಿದ್ದ ಡಾ.ಎ.ಜಿ.ಶಂಕರ್ ಮತ್ತು ಶ್ರೀಮತಿ ಜಸ್ವಿಂದರ ಖುರಾನಾ ಇವರು ಮಾತನಾಡಿ ಥಿಮ್ಗಳ, ವೇಷಭೊಷಣಗಳ ಗುಣಮಟ್ಟ ಮತ್ತು ವಿದ್ಯಾಥರ್ಿನಿಯರ ಪ್ರಯತ್ನವನ್ನು ಶ್ಲಾಘಿಸಿದರು. ಮತು ಸಂಗ್ರಹಗಳನ್ನ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಿದರು.
ಅತ್ಯಂತ ಸುಂದರವಾಗಿ ಮೂಡಿಬಂದ ಈ ಕಾರ್ಯಕ್ರಮವನ್ನು ಅನೇಕ ವಸ್ತ್ರ ತಯಾರಿಕೆಗೆ ಸಂಭಂದಿಸಿದ ಉದ್ಯಮಿಗಳು, ವಿದ್ಯಾಥರ್ಿಗಳು, ಪೋಷಕರು ಮತ್ತು ಪ್ರೇಕ್ಷಕರು ವೀಕ್ಷಿಸಿದರು.
ಶ್ರೀಮತಿ ರೂಪಾ ಸಾಮಂತ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.