ವಿದ್ಯುತ ಕಣ್ಣಾಮುಚ್ಚಾಲೆ ವಿರುದ್ಧ ರೈತರು ಗುಡುಗು
Farmers up in arms against erratic power supply
ವಿದ್ಯುತ ಕಣ್ಣಾಮುಚ್ಚಾಲೆ ವಿರುದ್ಧ ರೈತರು ಗುಡುಗು
ವಿಜಯಪುರ 13: ಇತ್ತಿಚಿಗೆ ಇಲಾಖೆ ಮುಖ್ಯಸ್ಥರಿಂದ ಜಿಲ್ಲೆಯ ಹೆಸ್ಕಾಂ ಅಧಿಕಾರಿಗಳಿಗೆ ಒಂದು ಸಂದೇಶ ಬಂದಿರುವ ಹಿನ್ನಲ್ಲೆಯಲ್ಲಿ ವಿದ್ಯುತ್ ವಿತರಣೆಯನ್ನು ತಡೆಹಿಡಿದಿರುವುದರಿಂದ ತಳುಕಿನ ಜಂಬಗಿ ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗಿ ಕೆ.ಇ.ಬಿ ಮುತ್ತಿಗೆ ಹಾಕಿ ದಿನವಿಡಿ ರೈತರು ಪ್ರತಿಭಟನೆ ಮಾಡಿದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ ನೇತೃತ್ವದಲ್ಲಿ ನೂರಾರು ರೈತರು ಜಂಬಗಿ ಕೆ.ಇ.ಬಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು, ಈ ಮುಂಚೆ ಹಗಲು 7 ಗಂಟೆ ತ್ರೀ ಫೆಸ್, ರಾತ್ರಿ ಸಿಂಗಲ್ ಫೆಸ್ ವಿರುದ್ಧ ಕೊಡುತ್ತಿದ್ದರು, ಆದರೆ ಈಗ ಏಕಾ ಏಕಿ ವಿದ್ಯುತ್ ಕಟ್ ಮಾಡುತ್ತಿರುವುದರಿಂದ ಈ ಬಾಗದ ರೈತರಿಗೆ ತುಂಬಾ ಸಮಸ್ಯೆ ಆಗುತ್ತಿದ್ದು, ಅದಕ್ಕಾಗಿ ಈ ಪ್ರತಿಭಟನೆ ಮಾಡುತ್ತಿದ್ದೆವೆ ಎಂದರು ಇಲಾಖೆಯ ಅಧಿಕಾರಿಗಳು ರೈತರಿಗೆ ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನ ಪಟ್ಟರು ಕೂಡಾ ಯಶಸ್ಸು ಕಾಣಲಿಲ್ಲ, ರೈತರು ಸರಕಾರವನ್ನು ದೂರುತ್ತಾ ಮೊದಲೇ ಬರಗಾಲದಿಂದ ಕಂಗೆಟ್ಟು ಹೋಗಿದ್ದೇವೆ, ಅಲ್ಪ ಸೊಲ್ಪ ನೀರಿನಿಂದ ಇರುವ ಬೆಳೆಗಳನ್ನು ಉಳಿಸಿಕೊಳ್ಳಬೇಕೆಂದರೆ ವಿದ್ಯುತ್ ಕರೆಂಟ್‌ನ ನಾಟಕ ಪ್ರಾರಂಭ ಮಾಡಿದ್ದಾರೆ, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ಯಾವುದೇ ಕಾರಣಕ್ಕೂ ರೈತರನ್ನು ಕೆಣಕಿದರೆ ನಾವೂ ಸುಮ್ಮನೆ ಕೂಡುವುದಿಲ್ಲ, ಈಡಿ ಜಿಲ್ಲೆಯನ್ನು ಬಂದ್ ಮಾಡಿ ಹೋರಾಟ ಮಾಡುತ್ತೆವೆ ಎಂದರು. ಈ ವೇಳೆ ವಿಜಯಪುರ ಗ್ರಾಮೀಣ ಹೆಸ್ಕಾಂ ಎ.ಇ.ಇ ಅನೀಲ ಪೂಜಾರಿ ಅವರು ಹೋರಾಟದ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ವಿವಿಧ ರೀತಿಯಿಂದ ಮನ ಒಲಿಸಲು ಪ್ರಯತ್ನಿಸಿದರು ಕೊನೆಗೆ ಇದು ಸರ್ಕಾರ ನಿರ್ಣವಿದೆ, ಇನ್ನು ಕೇಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರೆಯಲಿದೆ ಎಮದು ಮನವಿ ಸ್ವೀಕರಿಸಿ ಹೋರಾಟ ಮುಗಿಸುವಲ್ಲಿ ಸಫಲರಾದರು . ಈ ವೆಳೆ ಬಸಗೊಂಡ ತೇಲಿ, ಆತ್ಮಾನಂದ ಭೈರೋಡಗಿ, ಲಗಮನ್ಣ ಸಾತಪುರ, ರಾಕೆಶಸಿಂಗ ಡೋಣೂರ, ಬಸವರಾಜ ಕಾಪ್ಸೆ, ಶಿವಪ್ಪ ಮಸೂತಿ, ರಾಜು ಜಾಧವ, ಚನ್ನು ಜಮಖಂಡಿ, ಗೋಪಾಲ ಜಾಧವ, ಶ್ರೀಮಂತ ಮಾಲಗಾರ, ಈರಯ್ಯ ಆಲಗೋಡ, ಸಂಗಮನಾಥ ಓರಸಂಗ, ಬಸವರಾಜ ದೇಶಮುಖ ಸೇರಿದಂತೆ ನೂರಾರು ರೈತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 