ಏಲಕಲಮಟ್ಟಿ ಏತ ನೀರಾವರಿ ದಶಕಗಳಿಂದ ನೆನೆಗುದಿಗೆ ಪ್ರಾರಂಭಕ್ಕೆ ಆಗ್ರಹಿಸಿ ರೈತರಿಂದ ಹೆದ್ದಾರಿ ತಡೆ
Farmers stage highway blockade demanding the launch of the Elakalamatti Lift Irrigation Project, whi
ಲೋಕದರ್ಶನ ವರದಿ
ಜಮಖಂಡಿ 25: ತಾಲೂಕಿನ ತೊದಲಬಾಗಿ, ಚಿಕ್ಕಲಕಿ, ಜನವಾಡ ಏಕಲಮಟ್ಟಿ ಮುಂತಾದ ಗ್ರಾಮಗಳ ಜಮೀನುಗಳಿಗೆ ನೀರು ಒದಗಿಸುವ ಏಕಲಮಟ್ಟಿ ಏತನೀರಾವರಿ ಯೋಜನೆ ದಶಕಗಳೇ ಕಳೆದರೂ ಪ್ರಾರಂಭವಾಗಿಲ್ಲ ಎಂದು ಆಕ್ರೋಶಗೊಂಡ ರೈತರು ವಿಜಯಪುರ-ಧಾರವಾಡ ಮುಖ್ಯ ರಾಜ್ಯ ರಸ್ತೆ ಹೆದ್ದಾರಿ ತಡೆದು ಪ್ರತಿಭಟನೆ ಪ್ರಾರಂಭಿಸಿ, ರಸ್ತೆಯಲ್ಲಿ ಎತ್ತಿನಗಾಡಿಗಳನ್ನು ನಿಲ್ಲಿಸಿ, ಅಲ್ಲೇ ಅಡುಗೆ ಮಾಡಿ ಆಕ್ರೋಶ ಹೊರಹಾಕಿ ಪ್ರತಿಭಟನೆಯನ್ನು ನಡೆಸಿದರು.
ತೊದಲಬಾಗಿ ಗ್ರಾಮದಲ್ಲಿ ಜಮಾಯಿಸಿದ್ದ ರೈತರು ಚಿಕ್ಕಲಕಿ ಕ್ರಾಸ್‌ವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೃಷ್ಣಾ ನದಿಯಿಂದ ಬಬಲೇಶ್ವರ ಸೇರಿದಂತೆ 50-60 ಕಿಲೋಮಿಟರ್ ದೂರದ ಊರುಗಳಿಗೆ ನೀರು ಹರಿಸಲಾಗಿದೆ. ಪಕ್ಕದ 5 ರಿಂದ 10 ಕಿಮಿ ಅಂತರದಲ್ಲಿರುವ ಗ್ರಾಮಗಳಿಗೆ ನೀರು ಬಾರದೇ ಇರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಹದೇವ ನಾಯಕ, ಉಪಾಧ್ಯಕ್ಷ ರಾಮಪ್ಪ ಕರ್ಜಗಿ, ರೈತ ಸಂಘದ ಸಹದೇವ ಕದಂ, ಸಿದ್ದರಾಯ ಸಣ್ಣಸಿದ್ಧ, ಅಪ್ಪಾಜಿ ಸೂರ್ಯವಂಶಿ, ಮಹೇಶ ಮಾಡಿಕ, ಪಾಂಡು, ಸಿದ್ದು ಭೋಸ್ಲೆ, ಶ್ರೀಧರ ಕಾಸರ, ದರೆಪ್ಪ ನಾವಿ, ಸಿದ್ದು ಗುಡ್ಡದ, ರೇವಣಸಿದ್ದ ಮಾದರ, ಶ್ರೀಕಾಂತ ಬಡಿಗೇರ, ಮಲ್ಲಪ್ಪ ಸಣ್ಣಸಿದ್ದ, ಶ್ರೀಶೈಲ ಕುರಿಕಲ್, ಸಿದ್ದಪ್ಪ ಹೆಗ್ಗೊಂಡ, ಕಕಮರಿ, ಈಶ್ವರ ಸಾಯಗೊಂಡ, ಸಿದ್ದು, ಸಾಗರ ಭಜಂತ್ರಿ, ಶ್ರೀಪಾದ ಕಾಸರ, ಗೌಡೇಶ ಸೇರಿದಂತೆ ನೂರಾರು ಜನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ 