ರೈತರು ಸಬ್ಸಿಡಿ ಬೀಜ, ಗೊಬ್ಬರದ ಸದುಪಯೋಗ ಪಡೆದುಕೊಳ್ಳಿ: ಬಾಬಾಸಾಹೇಬ ಪಾಟೀಲ

ರೈತರು ಸಬ್ಸಿಡಿ  ಬೀಜ, ಗೊಬ್ಬರದ ಸದುಪಯೋಗ ಪಡೆದುಕೊಳ್ಳಿ: ಬಾಬಾಸಾಹೇಬ ಪಾಟೀಲ Farmers should take advantage of subsidized seeds and fertilizers: Babasaheb Patil

ನೇಸರಗಿ 26: ನೇಸರಗಿ ಭಾಗದಲ್ಲಿ ಚನ್ನಾಗಿ ಮಳೆ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಮಳೆಯಾಗುವ ಸಾಧ್ಯತೆ ಇದ್ದು, ಮುಂಗಾರು ಬಿತ್ತನೆ ಇನ್ನೇನು ಪ್ರಾರಂಭ ಆಗಿದ್ದು, ರೈತರು ಬಿತ್ತನೆಗೆ ಬೇಕಾಗುವ ಬೀಜ ಮತ್ತು ಗೊಬ್ಬರಗಳನ್ನು ಕೃಷಿ ಇಲಾಖೆಯ ಸಹಯೋಗದಲ್ಲಿ  ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ  ಬೀಜ ಗೊಬ್ಬರಗಳನ್ನು ಪಡೆದು ಬಿತ್ತನೆ ಕಾರ್ಯದಲ್ಲಿ ರೈತರು ಪಾಲ್ಗೊಳ್ಳಿ ಎಂದು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಮಂಗಳವಾರದಂದು ನೇಸರಗಿ ಗ್ರಾಮದ ಪ್ರಾಥಮಿಕ ಕೃಷಿ ಸಂಘದ ಬೀಜ ವಿತರಣೆ ಕೇಂದ್ರದಲ್ಲಿ  ಜಿಲ್ಲಾ ಪಂಚಾಯತ ಬೆಳಗಾವಿ, ಕೃಷಿ ಇಲಾಖೆ ಬೈಲಹೊಂಗಲ, ರೈತ ಸಂಪರ್ಕ ಕೇಂದ್ರ ನೇಸರಗಿ ಇವರ ಸಹಯೋಗದಲ್ಲಿ ಮುಂಗಾರು ಬೆಳೆಗೆ ರೈತರಿಗೆ  ಸೋಯಾಬೀನ್ ಬೀಜ ವಿತರಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.     

ಕಾರ್ಯಕ್ರಮದಲ್ಲಿ ಮುಖಂಡರಾದ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ,ಜಿಲ್ಲಾ ಕೃಷಿ ಉಪ ನಿರ್ದೇಶಕರಾದ ಸಲೀಮ್ ಸಂಗ್ರಾವತ, ಬೈಲಹೊಂಗಲ ತಾಲೂಕ ಕೃಷಿ ಅಧಿಕಾರಿ ಬಿ ಎಲ್ ದಳವಾಯಿ, ಬಾಳಪ್ಪ ಮಾಳಗಿ ವೀರ​‍್ಪಣ್ಣ ಚೋಭಾರಿ, ಎಸ್ ಎಂ ಪಾಟೀಲ, ಮಲ್ಲೇಶಪ್ಪ ಮಾಳಣ್ಣವರ, ನಿಂಗಪ್ಪ ತಳವಾರ, ಮಲ್ಲಿಕಾರ್ಜುನ ಕಲ್ಲೋಳಿ, ಗಂಗಪ್ಪ ಕಾಡಣ್ಣವರ, ಸಿದ್ದಪ್ಪ ತುಳಜ್ಜಣ್ಣವರ, ಬಸವರಾಜ ಚಿಕ್ಕನಗೌಡ್ರ, ಅಡಿವಪ್ಪ ಚಿಗರಿ,ನೇಸರಗಿ ರೈತ ಸಂಪರ್ಕ ಕೇಂದ್ರದ  ಅಧಿಕಾರಿ ಆರ್ ಐ ಕುಂಬಾರ,ಸುರೇಶ ಅಗಸಿಮನಿ, ವಿನಾಯಕ ಮಾಸ್ತಮರಡಿ, ಪಿ ಕೆ ಪಿ ಎಸ್ ವ್ಯವಸ್ಥಾಪಕ ವಿಶ್ವನಾಥ  ಕೂಲಿನವರ, ಕೃಷಿ ಇಲಾಖೆ, ಪ್ರಾಥಮಿಕ ಕೃಷಿ ಸಂಘದ ಸಿಬ್ಬಂದಿ, ನೇಸರಗಿ, ಸೋಮನಟ್ಟಿ ಗ್ರಾಮಗಳ ಎಲ್ಲ  ಸಮಾಜದ ಮುಖಂಡರು, ರೈತರು, ಗ್ರಾಮಸ್ಥರು ಇದ್ದರು.