ಜಮಖಂಡಿ ಶುಗರ್ಸ್‌ಗೆ ಬೀಗ ಹಾಕಿ ರೈತರ ಪ್ರತಿಭಟನೆ
Farmers protest by locking down Jamkhandi Sugars
ಜಮಖಂಡಿ 19: ರೈತರ ಕಬ್ಬಿನ ಬಿಲ್ ನೀಡುವಂತೆ ವಿಜಯಪೂರ ಜಿಲ್ಲೆಯ ದೇವರಗೆಣ್ಣೂರ, ಕುಮಠೆ, ದೇವಾಪೂರ, ಲಿಂಗದಳ್ಳಿ, ತಾಜಪೂರ, ಮಂಗಳೂರ, ಕಗ್ಗೊಡ, ಮಮದಾಪೂರ ಸೇರಿದಂತೆ ವಿವಿಧ ಗ್ರಾಮದ ರೈತರು ಜಮಖಂಡಿ ಶುಗರ್ಸ್‌ಗೆ ಸಿಬ್ಬಂದಿಯನ್ನು ಹೊರಹಾಕಿ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ರೈತ ಮುಖಂಡ ಪುಟ್ಟು ಗಡದನ್ನವರ ಮಾತನಾಡಿ, ನಾವು ಐದು ತಿಂಗಳ ಹಿಂದೆ ಕಬ್ಬು ಕಳಿಸಿದ್ದೆವೆ, ಹಲವಾರು ಬಾರಿ ಅಲೆದಾಡಿದರು ರೈತರಿಗೆ ಕಬ್ಬಿನ ಬಿಲ್ ನೀಡುತ್ತಿಲ್ಲ, ಸಾಲ ಮಾಡಿಕೊಂಡು ರೈತರು ಪರದಾಡುತ್ತಿದ್ದಾರೆ ಕೂಡಲೇ ಬಿಲ್ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ರೈತರು ಕಬ್ಬು ಕಳಿಸಿದ 15 ದಿನಗಳಲ್ಲಿ ಬಿಲ್ ನೀಡಬೇಕು, ಆದರೆ ಐದು ತಿಂಗಳು ಕಳೆದರು ಇನ್ನೂ ಬಿಲ್ ನೀಡಿಲ್ಲ, ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು.
ಬಸವರಾಜ ಹರನಟ್ಟಿ ಮಾತನಾಡಿ, ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು ಯಾವುದೇ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಯ ಮಾಲಿಕರು ಬರಲಿಲ್ಲ, ಆದ್ದರಿಂದ ಎಲ್ಲ ರೈತರು ಮರಳಿ ಬಂದಿದ್ದೆವೆ, ಎರಡು ದಿನದಲ್ಲಿ ಬಿಲ್ ಪಾವತಿಸದಿದ್ದರೆ ಜಮಖಂಡಿ-ವಿಜಯಪೂರ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟಣೆ ಮಾಡಲಾಗುವದು ಎಂದರು.
ರಮೇಶ ಗಡದನ್ನವರ, ರಾಘು ಗುರಡ್ಡಿ, ಬಸವರಾಜ ಸುತಗುಂಡಿ, ಪಡೆಪ್ಪ ಕೊಡೆಕಲ್, ಅನಿಲ ಯಡಹಳ್ಳಿ, ಮಾಳು ಸಿದ್ದಾಪೂರ, ಸುರೇಶ ಬಾಡಗಿ ಸೇರಿದಂತೆ ಹಲವಾರು ರೈತರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 