ಸಣಾಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಫಸಲ್ಭೀಮಾ ಬೆಳೆ ವಿಮೆ ಬಗ್ಗೆ ರೈತರಿಗೆ ಜಾಗೃತಿ

ಸಣಾಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಫಸಲ್ಭೀಮಾ ಬೆಳೆ ವಿಮೆ ಬಗ್ಗೆ ರೈತರಿಗೆ ಜಾಗೃತಿ  Farmers in Sanapura made aware of the Fasal Bima crop insurance scheme by the Shri Kshetra Dharmasth

ಲೋಕದರ್ಶನ ವರದಿ 

ಕಂಪ್ಲಿ  19: ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ರೈತರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಕೇಂದ್ರ ಸರ್ಕಾರದ ಅತೀಮುಖ್ಯ ಕಾರ್ಯಕ್ರಮವಾದ ಫಸಲ್ಭೀಮಾ ಯೋಜನೆನೊಂದಾವಣೆ ಬಗ್ಗೆ ಸ್ಥಳೀಯ ಸ್ವ-ಸಹಾಯ, ಸಂಘದವರಿಗೆ ಹಾಗೂ ರೈತರಿಗೆ ಬೆಳೆ ವಿಮೆ ಮಾಡಲು ಗ್ರಾಮಾಭಿವೃದ್ಧಿ ಯೋಜನೆಯವರು ಮಾಹಿತಿ ನೀಡುವ ಜೊತೆಗೆ ರೈತರಲ್ಲಿ ಜಾಗೃತಿ ಮೂಡಿಸಿದರು. 

2026-27 ನೇ ಸಾಲಿನಲ್ಲಿ ಈಗಾಗಲೇ ಬೆಳೆ ವಿಮೆಯನ್ನು ನೋಂದಾವಣೆ ಮಾಡಲು ಆರಂಭವಾಗಿದ್ದು ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ರೈತರು ಬೆಳೆದಬೆಳೆಗಳಿಗೆ ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಇತರೆ ಸಮಸ್ಯೆಯಿಂದಾಗಿ ಬೆಳೆಗಳಿಗೆ ಹಾನಿ ಉಂಟಾದಲ್ಲಿ ಕೇಂದ್ರ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ದೊರೆಯುವುದರ ಬಗ್ಗೆ ಮಾಹಿತಿ ನೀಡಲಾಯಿತು. ಈಗಾಗಲೇ ತಾಲೂಕಿನಲ್ಲಿ ಸುಮಾರು 150 ಹೆಚ್ಚು ರೈತರು ಬೇರೆ ಬೇರೆ ರೀತಿಯ ಬೆಳೆಗಳಿಗೆ ನೊಂದಾವಣೆ ಮಾಡಿಸಿರುತ್ತಾರೆ.

ಇನ್ನು ಹೆಚ್ಚಿನ ರೈತರು ನೊಂದಾವಣೆ ಮಾಡಿಕೊಳ್ಳಬೇಕಾದರೆ ನಿಮ್ಮ ಗ್ರಾಮದಲ್ಲಿ ಇರುವ ಧರ್ಮಸ್ಥಳ ಸಂಸ್ಥೆ ಸೇವಾ ಕೇಂದ್ರಕಾಮನ್ಸರ್ವಿಸ್ಸೆಂಟರ್(ಸಿಎಸ್‌ಇ) ಗಳಲ್ಲಿ ನೋಂದಾವಣೆ ಮಾಡಲಾಗುತ್ತಿದೆ. ಆಸಕ್ತಿ ಹೊಂದಿರುವ ರೈತರು ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಸರಿಯಾದ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಸಬಹುದು ಎಂದು ಮಾಹಿತಿ ನೀಡಿದರಲ್ಲದೆ, ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು, 

ಜಾಗೃತಿ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯ ಕೃಷಿ ಅಧಿಕಾರಿಗಳಾದ ಸಂಜುಕುಮಾರ್, ತಾಲೂಕು ಸಿಎಸ್‌ಸಿ ನೋಡಲ್ ಅಧಿಕಾರಿಗಳಾದ ಸೋಮಶೇಖರ್ ಸಿ, ಗ್ರಾಮದ ರೈತರಾದ ಶರಬನಗೌಡ, ಚನ್ನವೀರಗೌಡ, ಎ.ಕೆ.ವೀರೇಶಪ್ಪ, ಸೇವಾ ಪ್ರತಿನಿಧಿ ಶೃತಿ, ಸಿಎಸ್‌ಸಿ ಸೇವಾದಾರರಾದ ಉಮೇಶ್, ದರ್ಶನ್ಹಾಗೂ ಗ್ರಾಮದ ರೈತ ಬಾಂಧವರು, ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.