ಭೂಸ್ವಾಧೀನ ಪರಿಹಾರಕ್ಕೆ ರೈತರ ಉಪವಾಸ ಧರಣಿ

ಭೂಸ್ವಾಧೀನ ಪರಿಹಾರಕ್ಕೆ ರೈತರ ಉಪವಾಸ ಧರಣಿ Farmers hunger strike for land acquisition compensation

ಹೂವಿನ ಹಡಗಲಿ 08: ತಾಲೂಕಿನ ದಾಸನಹಳ್ಳಿ ಹಾಗೂ ಹ್ಯಾರಡಾ ಕೆರೆ ತುಂಬಿಸುವ ಯೋಜನೆಗೆ ದಶಕದ ಹಿಂದೆ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಭೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಇಲ್ಲಿನ ಸಿಂಹಾಸನಕಟ್ಟೆಯ ಮೇಲೆ ರೈತರು ಉಪವಾಸವನ್ನು ರತ್ನ ಭಾರತ ರೈತ ಸಂಘದ ಅಧ್ಯಕ್ಷ ಚಂದ್ರ​‍್ಪ ಕೊಡಬಾಳ ನೇತೃತ್ವದಲ್ಲಿ ಸಂತ್ರಸ್ತ ರೈತರು ಬೆಳಿಗ್ಗೆಯಿಂದ ಧರಣಿ ಆರಂಭಿಸಿದರು.  

ಹ್ಯಾರಡಾ ಮತ್ತು - ದಾಸನಹಳ್ಳಿ ತೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಅಳವಡಿಸಲು ಹೊಳಲು ಬೂದನೂರು ದಾಸನಹಳ್ಳಿ ಪೋತಲಕಟ್ಟಿ ಹಾಗೂ ಹ್ಯಾರಡಾ - ಗ್ರಾಮಗಳ ಸುಮಾರು 30ಎಕರೆ ಜಮೀನನ್ನು ದಶಕದ ಹಿಂದೆಸ್ವಾಧೀನಪಡಿಸಿಕೊಳ್ಳಲಾಗಿದ್ದು. ಆದರೆ ಸಂತ್ರಸ್ತರಿಗೆ ಸರಕಾರ ಇದುವರೆಗೂ ಭೂ ಪರಿಹಾರ ನೀಡಿಲ್ಲ. ಅಧಿಕಾರಿಗಳು ಬರೀ ಸಬೂಬು ಹೇಳುತ್ತಿದ್ದಾರೆ.ಜನಪ್ರತಿನಿಧಿಗಳಿಗೆ ಹಲವುಬಾರಿ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲಾ. ತಕ್ಷಣ ಭೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಧರಣಿ ಹಮ್ಮಿಕೊಂಡಿದ್ದೇವೆ ಎಂದು ಮುಖಂಡ ಕೋಡಬಾಳ ಚಂದ್ರ​‍್ಪ ಹೇಳಿದರು.ಸಂಜೆ ಧರಣಿ ಸ್ಥಳಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ರಾಘವೇಂದ್ರ ಭೇಟಿ ನೀಡಿ ಭೂ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.