ರೈತರಿಗೆ ತರಕಾರಿ ದರ ಯೋಗ್ಯವಾಗಿ ಸಿಗುತ್ತಿಲ್ಲ: ಆರೋಪ

ಸಂಬರಗಿ, 3:  ಗಡಿಭಾಗದ ಮಳೆ ಪ್ರಮಾಣ ಕಡಿಮೆ ಇದ್ದರು ಸಹ ರೈತರು ಕಡಿಮೆ ವೇಳೆಯಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಮಾಡಲು ತರಕಾರಿ ಬೆಳೆಯಲು ಹೆಚ್ಚು ಚವಳೆ, ಹಿರೆಕಾಯಿ, ಬೆಂಡೆ, ಮೆತ್ತೆ ಸೊಪ್ಪು, ಸಂಬಸಗಿ ಸೊಪ್ಪು ಇತ್ಯಾದಿ ತರಕಾರಗಳನ್ನು ಬೆಳೆದು ಸಾಂಗಲಿ, ಪುಣೆ, ಮುಂಬೈ ಶಹರಗಳ ಮಾರುಕಟ್ಟೆಗೆ ಹೋಗುತ್ತಿದ್ದಾವೆ. ಕೊಲ್ಲಾಪೂರ ಮತ್ತು ಸಾಂಗಲಿ ಜಿಲ್ಲೆಯ ವ್ಯಾಪಾರಸ್ಥರು ಬಂದು ಅರಳಿಹಟ್ಟಿ, ಸಂಬರಗಿ, ಮದಭಾವಿ ಗ್ರಾಮದ ಹೊರ ವಲಯದ ತರಕಾರಿಯನ್ನು ಖರೀದಿಸಿ ಸಂಗ್ರಹಿಸುತ್ತಾರೆ. ಅರಳಿಹಟ್ಟಿ ಗ್ರಾಮದ ಅಂತುಲ ಮೋರೆ ಇವರನ್ನು ಸಂಪರ್ಕಿಸಿದಾಗ ಈ ಮೂರು ಗ್ರಾಮದಲ್ಲಿ ಬೆಳಗಿನ ಜಾವ 5 ರಿಂದ 8 ಗಂಟೆಯ ವರೆಗೆ ಮೇಲಿನ ತರಕಾರಿ 25 ರೂ, 45 ರೂ ವ್ಯಾಪಾರಿಗಳು ಖರೀದಿಸುತ್ತಾರೆ. ಇಲ್ಲಿಯ ತರಕಾರಿಯನ್ನು ತೆಗೆದುಕಂಡು ಮುಂಬೈ, ಪುಣೆ, ಸಾಂಗಲಿಯಲ್ಲಿ ಕನಿಷ್ಟ 80 ರಿಂದ 100 ರೂ. ಮಾರುತ್ತಾರೆ. ಎಂದು ರೈತರು ಹೇಳಿದರು. 

ಇಲ್ಲಿಯ ಚವಳೆಕಾಯಿ, ಬೆಂಡೆಕಾಯಿ, ಹಿರೆಕಾಯಿ, ಇತರೆ ತರಕಾರಿ ಸೇರಿ ದಿನನಿತ್ಯ 2 ರಿಂದ 3 ಟನ್ ತರಕಾರಿ ಈ ಗ್ರಾಮಗಳಿಂದ ಮಹಾರಾಷ್ಟಕ್ಕೆ ಹೋಗುತ್ತದೆ ಆದರೆ ಇಲ್ಲಿಯ ತರಕಾರಿಗಳಿಗೆ ಶುಲ್ಕ (ಟ್ಯಾಕ್) ವಿಧಿಸುತ್ತಿಲ್ಲ. ಆ ಕಾರಣ ಇಲ್ಲಿ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿ ರೈತರಿಗೆ ತರಕಾರಿ ದರ  ಯೋಗ್ಯವಾಗಿ ಸಿಗುತ್ತಿಲ್ಲ  ಎಂದು ರೈತರು ಆರೋಪಿಸಿದ್ದಾರೆ.