ಮೆಕ್ಕೆ ಜೋಳ ಖರೀದಿಯಲ್ಲಿ ವ್ಯಾಪಾರಸ್ಥರಿಂದ ಅನ್ಯಾಯ: ರೈತರು ಆರೋಪ
Farmers allege unfair treatment by traders in maize procurement
ಹೂವಿನಹಡಗಲಿ 25: ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಅನ್ನದಾತ ಕಂಗಾಲಾಗಿದ್ದಾನೆ. ಇದರ ಮಧ್ಯೆ ವ್ಯಾಪಾರಿಗಳು ತೂಕದಲ್ಲಿ ರೈತರಿಗೆ ಮೋಸ ಮಾಡಿ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಸಂಘದವರು ಆರೋಪಿಸಿ ಗುರುವಾರ ಇಟ್ಟಿಗಿ ಉಪ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ತಾಲೂಕಿನ ಹೊಳಗುಂದಿ ಸೇರಿದಂತೆ ನಾನಾ ಕಡೆಗಳಲ್ಲಿ ಗೋವಿನ ಜೋಳ . ಶೇಂಗಾ. ಜೋಳ. ಸಜ್ಜೆ ಖರೀದಿ ಮಾಡುವ ವ್ಯಾಪಾರಸ್ಥರು ಕ್ವಿಂಟಲ್ ಗೆ 3ರಿಂದ 5ಕೆಜಿ ಬಾಜು .ಪೈಸೆ ಶೇ.2 ರೂ. ಮತ್ತು ಚೀಲಕ್ಕೆ 10 ರೂ.ಎಂಬಂತೆ ರೈತರ ಕಡೆಗೆ ತೆಗೆದು ಕೊಂಡು ವರ್ತಕರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ತಾಲೂಕಿನ ಹೊಳಗುಂದಿಯಲ್ಲಿ ವರ್ತಕರು ಗೋವಿನಜೋಳ ಖರೀದಿ ಮಾಡಿ ತೂಕದಲ್ಲಿ ಪ್ರತಿ ಕ್ವಿಂಟಲ್ ತೂಕಕ್ಕೆ ಐದು ಕೆಜಿಯಷ್ಟು ತೆಗೆದುಕೊಳ್ಳುತ್ತಿದ್ದಾನೆ ಎಂದು ದೂರಿದರು. ವರ್ತಕರು ರೈತರಿಂದ ಖರೀದಿಸುವ ಸಂದರ್ಭದಲ್ಲಿ ಕ್ವೀಟಲ್ ಗೆ 3 kg ಇಂದ 5 k.G ವರೆಗೆ ಧಾನ್ಯಗಳನ್ನು ಕಟಾವು ಮಾಡಿಕೊಳ್ಳುತ್ತಿರುವುದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದ್ದೂ ಮತ್ತು ಪ್ರತಿಯೊಂದು ವ್ಯಾಪಾರಿಯ ಹತ್ತಿರ ಅಳತೆ ಮಾಪನ ಸೂಕ್ತವಾಗಿರಬೇಕು.
ಮತ್ತು ರಿವಾಜು. ಬಾಜು ದಲ್ಲಾಳಿಗಳ ಕಡಿವಾಣ ಹಾಕಬೇಕು. ತೂಕದಲ್ಲಿ ವ್ಯತ್ಯಾಸ ಕಂಡುಬದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅವರ ಪರವಾನಿಗೆಯನ್ನು ರದ್ದು ಪಡಿಸಲು ಕ್ರಮಕೈಗೊಳ್ಳಬೇಕು ರೈತ ಸಂಘದ ಅದ್ಯಕ್ಷ ಸಿದ್ದಪ್ಪ.ಪ್ರಧಾನ ಕಾರ್ಯ ದರ್ಶಿ ಶಿವರಾಜ.ಮಂಜುನಾಥ. ಚನ್ನಬಸಪ್ಪ ಇತರರುಆಗ್ರಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 