4ನೇ ದಿನದತ್ತ ಮೆಕ್ಕೆಜೋಳ ಬೆಂಬಲ ಬೆಲೆ ರೈತ ಹೋರಾಟ
Farmers' struggle over maize support price enters 4th day
ಲಕ್ಷ್ಮೇಶ್ವರ 17: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಅನೇಕ ರೈತಪರ ಸಂಘಟನೆಗಳು ಕನ್ನಡ ಪರ ಹಾಗೂ ವ್ಯಾಪಾರಸ್ಥರು ಸಂಘ ಕೃಷಿ ಪರಿಕರಗಳ ಮಾರಾಟಾಗಾರರು, ಶ್ರೀ ರಾಮ ಸೇನಾ, ಎಬಿವಿಪಿ, ದಸರಾ ಉತ್ಸವ ಸಮಿತಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ವಿವಿಧ ಮಠಾಧೀಶರು ವಿವಿಧ ರಾಜಕೀಯ ಪಕ್ಷಗಳ ಮಾಜಿ ಶಾಸಕರು ಮುಖಂಡರಗಳು ಪ್ರತಿಭಟನಾ ವೇದಿಕೆಗೆ ಬಂದು ಬೆಂಬಲ ಸೂಚಿಸಿದ್ದಾರೆ. ತಾಲೂಕಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಕ್ಕಿಂತ ಹೆಚ್ಚು ರೈತರು ಮೆಕ್ಕೆಜೋಳ ಬೆಳೆದಿದ್ದು ಶೇ 90 ರಷ್ಟು ಬೆಳೆ ಬಂದಿದರು ರೈತರು ಬೆಳೆದ ಮೆಕ್ಕೆಜೋಳ ಕೇವಲ 1500 ರಿಂದ 1800 ನೂರವರೆಗೆ ಮಾರಾಟವಾಗುತ್ತಿದೆ. 2400 ಬೆಂಬಲ ಬೆಲೆ ಇದ್ದರು ಖರೀದಿ ಕೇಂದ್ರ ತೆಗೆಯಲು, ಸರಕಾರ ಮೀನಾ ಮೇಷ ಎಣಿಸುತ್ತಿದೆ.
ರೈತಪರ ಸಂಘಟನೆಗಳು ಹಾಗೂ ವಿವಿದ ಸಂಘಟನೆಗಳನ್ನು ಒಗ್ಗೂಡಿಸಿ ಅಹೋರಾತ್ರಿ ಧರಣಿ ಕೈಗೊಂಡಿರುವ, ರಾತ್ರಿ ಭಜನೆ ಹೀಗೆ ರೈತ ಗೀತೆಗಳ ಮೂಲಕ ಹೋರಾಟಕ್ಕೆ ಬಾರಿ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ ಕಳೆದ ಮೂರು ದಿನಗಳಿಂದ ಆರಂಭವಾಗಿರುವ ರೈತರ ಹೋರಾಟಕ್ಕೆ ಮುಕ್ತಿ ಮಂದಿರ ಶ್ರೀಗಳು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ.ವಚನಾನಂದ ಶ್ರೀಗಳು, ಕುಂದಗೋಳದ ಕಲ್ಯಾಣಪುರದ ಶ್ರೀ ಗಳು ಆದರಹಳ್ಳಿಯ ಗವಿಮಠದ ಡಾ.ಕುಮಾರ ಮಹಾರಾಜರು ಹಾಗೂ ಜಮಖಂಡಿಯ ಶ್ರೀಗಳು, ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸದಸ್ಯ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಅರುಣ ಕುಮಾರ ಪೂಜಾರ ಮತ್ತು ಟಿ.ಈಶ್ವರ ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಉದ್ಯಮಿ ಲೋಹಿತ ನೆಲವಿಗಿ, ಸಣ್ಣಿರ್ಪ ಹಳ್ಳೇಪ್ಪನವರ ಸೇರಿದಂತೆ ಪಕ್ಷಾತೀತವಾಗಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 