ಬೆಳೆವಿಮಾ ಪರಿಹಾರಕ್ಕಾಗಿ ರೈತರ ಪ್ರತಿಭಟನೆ.

ರಾಣೇಬೆನ್ನೂರು18:  ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಮತ್ತು ರೈತರು ಪ್ರತಿಭಟನೆ ನಡೆಸಿ ಯುನಿಯನ್ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ರಿಜನಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಬೆಳೆವಿಮಾ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳದೇ ಅವರ  ಉಳಿತಾಯ ಖಾತೆಗೆ ಕೂಡಲೇ ಜಮೆಮಾಡಬೇಕೆಂದು ಒತ್ತಾಯಿಸಿ ಸೋಮವಾರ ಪ್ರತಿಭಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ  ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಅವರು ರೈತರಿಗೆ ಬಂದಿರುವ ಬೆಳೆ ವಿಮೆ ಹಣವನ್ನು ಸಕರ್ಾರದ ಆದೇಶವನ್ನು ದಿಕ್ಕರಿಸಿ ರೈತರ ಸಾಲದ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಇದರಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಅಲ್ಲದೇ, ಬದುಕಿನ ದಾರಿ ಕಾಣದೇ, ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯಗೆ ಶರಣಾಗುತ್ತಿದ್ದಾರೆ.  ಕೂಡಲೇ ರೈತರ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ರೈತ ಮುಖಂಡ, ನ್ಯಾಯವಾದಿ ಎಸ್.ಡಿ.ಹಿರೇಮಠ, ದಿಳ್ಳೆಪ್ಪ ಸತ್ಯಪ್ಪನವರ, ಈಶ್ವರಗೌಡ ದೊಳೆಹೊಳೆ, ಫಕ್ಕೀರಪ್ಪ ಅಜ್ಜಮನಿ, ಬಸವರಾಜ ಬಳಿಗಾರ, ರಾಮನಗೌಡ ಪಾಟೀಲ ಮೊದಲಾದವರು ಮಾತನಾಡಿದರು. ಸ್ಥಳಕ್ಕೆ ಧಾವಿಸಿದ ಪ್ರಾದೇಶಿಕ ವ್ಯವಸ್ಥಾಪಕರು, ಸ್ಥಳೀಯ ವ್ಯವಸ್ಥಾಪಕರು,  ಶಿರಸ್ಥೆದಾರ ಎಂ.ಎನ್.ಹಾದಿಮನಿ ಅವರು ಮನವಿ ಸ್ವೀಕರಿಸಿ ರೈತ ಸಂಘಟನೆಯ ಬೇಡಿಕೆಯಂತೆ ತಾವು ಮೇಲಾಧಿಕಾರಿಗಳಿಗೆ ರವಾನಿಸಿ ಬೇಗನೇ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಶಂಕರ ನಿಂಗಪ್ಪ ಎಳೆಹೊಳೆ, ಹನುಮಂತಗೌಡ ಪಾಟೀಲ, ಸುರೇಶಪ್ಪ ಗರಡಿಮನಿ, ಹರಿಹರಗೌಡ ಪಾಟೀಲ, ಶಿವಾನಂದ ಬುಳ್ಳಮ್ಮನವರ, ಹಮ್ಮೀದ್ ನೂರಾರು ರೈತರು ಪಾಲ್ಗೊಂಡಿದ್ದರು.