ರಾಣೇಬೆನ್ನೂರು29: ಹಾವೇರಿ ಜಿಲ್ಲೆಯ ರೈತರು ತುಂಗಾಮೇಲ್ದಂಡೆ ನೀರಾವರಿ ಯೋಜನೆಗಾಗಿ ತಮ್ಮ ಭೂಮಿಯನ್ನು ನೀಡಿ ತ್ಯಾಗ ಮಾಡಿದ್ದಾರೆ. ಆದರೆ, ಇದುವರೆಗೂ ಜಮೀನು ಕಳೆದುಕೊಂಡ ಜಿಲ್ಲೆಯ ರೈತರಿಗೆ ಪರಿಪೂರ್ಣ ಪರಿಹಾರ ಹಣವನ್ನು ನೀಡದೇ, ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಈ ಕೂಡಲೇ ಸಂಪೂರ್ಣ ಪರಿಹಾರ ಹಣ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ತುಂಗಾ ಮೇಲ್ದಂಡೆ ಭೂ ಪರಿಹಾರ ಹೋರಾಟ ಸಮಿತಿಯ ಮುಖಂಡರು ಕಛೇರಿ ಬಳಿ ಧರಣಿ ನಡೆಸಿದ್ದಾರೆ.
ಕಳೆದ ರವಿವಾರ ರಾತ್ರಿಯಿಂದ ಇಲ್ಲಿನ ಮಾಗೋಡ ರಸ್ತೆ ಬಳಿಯ ತುಂಗಾಮೇಲ್ದಂಡೆ ಯೋಜನಾ ಕಛೇರಿ ಮುಂಭಾಗದಲ್ಲಿ ನಿರಂತರ ಧರಣಿ ಆರಂಭಿಸಿರುವ ರೈತರು ಹಣ ಪಾವತಿಯಾಗುವವರೆಗೂ ಯಾವುದೇ ಕಾರಣಕ್ಕೂ ತಮ್ಮ ಧರಣಿ ಹಿಂಪಡೆಯದೇ, ಹಗಲು ರಾತ್ರಿ ಧರಣಿ ಮುಂದುವರೆಸುವುದಾಗಿ ಧರಣಿ ನಿರತ ರೈತರು ಮಾಧ್ಯಮಕ್ಕೆ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ರೈತ ಸಂಘಟನೆಯ ಯುವ-ಮುಖಂಡ ರವೀಂದ್ರಗೌಡ ಪಾಟೀಲ ಮತ್ತು ನ್ಯಾಯವಾದಿ ಎಸ್.ಡಿ.ಹಿರೇಮಠ ಅವರು ಉತ್ತರ ಕನರ್ಾಟಕದ ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿನ ರೈತರಿಗೆ ಸಂಬಂಧಿಸಿದಂತೆ ಅಂದು 30ವರ್ಷಗಳ ಹಿಂದೆ ಈ ಯೋಜನೆ ಜಾರಿಯಾಗಿತ್ತು. ನಮ್ಮ ರೈತರು ತಮ್ಮ ಅಪಾರ ಬೆಲೆ-ಬಾಳುವ ಭೂಮಿ ನೀಡಿ ಜಿಲ್ಲೆ ಹಸಿರಾಗುವ ರೈತ ಬದುಕು ಕಟ್ಟಿಕೊಳ್ಳುವ ಕನಸನ್ನು ಕಂಡು ತ್ಯಾಗ ಮಾಡಿದ್ದರು. ಆದರೆ, ಅವರಿಗೆ ಬರಬೇಕಾದ ಹಣ ಇನ್ನು ಬಂದಿಲ್ಲ ಎಂದು ಕಿಡಿಕಾರಿದರು.
ಹಣ ಪಡೆಯುವ ಹಿನ್ನಲೆಯಲ್ಲಿ ಅನೇಕ ಬಾರಿ ಕಚೇರಿಗೆ ಮುತ್ತಿಗೆ, ಅಧಿಕಾರಿಗಳಿಗೆ ಛೀಮಾರಿ, ಪ್ರತಿಭಟನೆ, ಧರಣಿ ಸೇರಿದಂತೆ ಅನೇಕ ರೀತಿಯ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಸ್ಥಳಕ್ಕೆ ಧಾವಿಸುವ ದಪ್ಪ ಚರ್ಮದ ಅಧಿಕಾರಿಗಳು ರೈತರಿಗೆ ಏನಾದರೂ ಸಬೂಬು ಹೇಳಿ ಪುನ: ಪೋಲೀಸ್ ರಕ್ಷಣೆಯೊಂದಿಗೆ ತೆರಳುವುದು ಇವರ ಪರಂಪರೆಯಾಗಿದೆ. ಹೀಗೆಯೇ ಮುಂದುವರೆದರೆ, ರೈತ ತಮ್ಮ ಬದುಕನ್ನು ನಿಭಾಯಿಸುವುದ ಹೇಗೆ ಎಂದು ಬಲವಾಗಿ ಪ್ರಶ್ನಿಸಿದ ಮುಖಂಡರು ಸ್ಥಳಕ್ಕೆ ಅಭಿಯಂತರು, ಗೃಹಸಚಿವರು, ಅಧಿಕಾರಿಗಳು ಮತ್ತು ಭೂಸ್ವಾಧಿನಾಧಿಕಾರಿಗಳು ಬರಬೇಕು, ಪರಿಹಾರದ ಚೆಕ್ ವಿತರಿಸಬೇಕು ಅಲ್ಲಿಯವರೆಗೂ ಸ್ಥಳ ಬಿಟ್ಟು ತೆರಳುವುದಿಲ್ಲ ಹೇಳಿದರು.
ಕಳೆದ ತಿಂಗಳು ಈ ಕುರಿತು ಅಂತಿಮ ಹೋರಾಟವೆಂದು ಭಾವಿಸಿ ಧರಣಿ ನಡೆಸಲಾಗಿತ್ತು. ಅಂದು ಧಾವಿಸಿದ್ದ, ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪರಿಹಾರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬರೇ ಸಬೂಬು ಹೇಳಿತ್ತಾ ರೈತರನ್ನು ವಂಚಿಸುವುದೇ ಇವರ ಕಾಯಕವಾಗಿದೆ ಎಂದು ಬಿಗಿಪಟ್ಟು ಸಡಿಲಿಸದ ರೈತರು ಹಗಲು-ರಾತ್ರಿ ಎನ್ನದೇ, ಕೊರೆಯುವ ಚಳಿಯಲ್ಲಿಯೇ ಠಿಕಾಣಿ ಹೂಡಿ, ಧರಣಿ ಆರಂಭಿಸಿರುವುದು ವಿಶೇಷವಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೆರೂರ, ರಟ್ಟಿಹಳ್ಳಿ, ಸವಣೂರ, ರಾಣೇಬೆನ್ನೂರು, ಶಿಗ್ಗಾವಿ ಸೇರಿದಂತೆ ವಿವಿಧ ತಾಲೂಕಿನ ಗ್ರಾಮಾಂತರ ಪ್ರದೇಶಗಳ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದು ಸಮಸ್ಯೆ ಪರಿಹಾರ ಕಾಣುವವರೆಗೂ ತಾವು ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಎಂದು ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಗೆ ನೂರಾರು ರೈತರು ತಮ್ಮ ಒಕ್ಕೂರಲ ಉತ್ತರವನ್ನು ನೀಡಿದರು.
ಧರಣಿ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದ, ಹಿರೇಕೆರೂರು ತಾಲೂಕಿನ ಶಿರಗಂಬಿಯ ರೈತರಾದ ಪ್ರಭುಗೌಡ ಸೊರಟೂರ ಮತ್ತು ನಿಂಗನಗೌಡ ಸೊರಟೂರ ಅವರು ಈ ಇಬ್ಬರೂ ರಕ್ತದೊತ್ತಡದಲ್ಲಿ ಏರುಪೇರುಂಟಾಗಿ ರಾತ್ರಿಯೇ ಸ್ಥಳೀಯ ಸಕರ್ಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದರೂ ಇವರು ಇಲ್ಲೇ ಇದ್ದು, ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದಿದ್ದಾರೆ.
ಧರಣಿಯಲ್ಲಿ ರೈತ ಮುಖಂಡರಾದ ಎಸ್.ಡಿ.ಹಿರೇಮಠ, ಈರಣ್ಣ ಬುಡಪನಹಳ್ಳಿ, ಜೆ.ಎಸ್.ಮರಕಲ್ಲಿ, ಸುರೇಶಪ್ಪ ಗರಡಿಮನಿ, ಪಿ.ಎಸ್.ಚಪ್ಪರದಹಳ್ಳಿಮಠ, ಎಸ್.ಬಿ.ಬೆಣ್ಣಿ,ಪಿ.ಎಸ್.ಗುಬ್ಬಿ, ಪ್ರಕಾಶ ಸೊರಟೂರ, ರಮೇಶ, ಗಿರಿಜಮ್ಮ ಪುಟ್ಟಕ್ಕನವರ, ಕೆ.ಬಿ.ಬನ್ನಿಕೋಡ, ಭೋಜರಾಜ ಆರೇರ, ರವಿ ಕತಗೇರ, ತುಕ್ಕಾರಾಮಾ ನವಲೆ, ಮರಿಯಪ್ಪ ಸುರಣಗಿ, ಮಲ್ಲಪ್ಪ ಕೊಡಿಹಳ್ಳಿ, ರಾಮಪ್ಪ ಪಾತ್ರೇರ, ದಿಳ್ಳೆಪ್ಪ ಸತ್ತೇಪ್ಪನವರ, ಹನುಮಂತಪ್ಪ ಕಾಗೇರ, ಮಂಜಪ್ಪ ಪಾತ್ರೇರ, ಹನುಮಂತ ಗೋಳೆಣ್ಣನವರ, ಪೀರಸಾಬ್ ದೊಡ್ಡಮನಿ, ರುದ್ರಪ್ಪ ಕಾಯ್ಕದ, ಬಸಪ್ಪ ಇಂಗಳಗೊಂದಿ, ಖಾಸಿಂಸಾಬ್ ಸಣ್ಣಮನಿ, ದಿವಾನ್ಸಾಬ್ ಬನ್ನಿಕೋಡ ಸೇರಿದಂತೆ ಜಿಲ್ಲೆಯ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.