ವಿದ್ಯುತ್ ಖಾಸಗಿಕರಣ ಖಂಡಿಸಿ ರೈತ ಸಂಘ ಬೃಹತ್ ಪ್ರತಿಭಟನೆ

ವಿದ್ಯುತ್ ಖಾಸಗಿಕರಣ ಖಂಡಿಸಿ ರೈತ ಸಂಘ ಬೃಹತ್ ಪ್ರತಿಭಟನೆ Farmers' association holds massive protest against electricity privatization


ಘಟಪ್ರಭಾ 23 :  ರಾಜ್ಯ ವಿದ್ಯುತ್ ಇಲಾಖೆಯಯನ್ನು ಖಾಸಗೀಕರಣಗೊಳಿಸುವ ರಾಜ್ಯ ಸರಕಾರದ ಕ್ರಮವನ್ನು  ವಿರೋಧಿಸಿ ಹಸಿರು ಸೇನೆ ರೈತ ಸಂಘಟನೆಯ  ಗಣೇಶ ಇಳಿಗೇರ, ಮಹಾದೇವ ಗೋಡೆರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು  ಘಟಪ್ರಭಾದ ಶ್ರೀ ಮೃತ್ಯುಂಜಯ ವೃತ್ತದಲ್ಲಿ ಸಂಕೇಶ್ವರ ನರಗುಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ  ಮಂಗಳವಾರದಂದು  ನಡೆಯಿತು. ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ಡಾ. ಕೆಂಪಣ್ಣಾ ಚೌಕಶಿ, ದಲಿತ ಸಂಘಟನೆಗಳ ಅರ್ಜುನ ಗಂಡವ್ವಗೋಳ ಮುಂತಾದವರು ಮಾತನಾಡಿದರು.      ಈ ಸಂದರ್ಭದಲ್ಲಿ  ಅಪ್ಪಾಸಾಬ ಮುಲ್ಲಾ , ಕೃಷ್ಣಾ ಗಂಡವ್ವಗೋಳ, ರಾಜಶೇಖರ ರಜಪೂತ ಸೇರಿದಂತೆ ರೈತ ಸಂಘಟನೆಗಳ, ಕನ್ನಡ ಪರ, ದಲಿತ ಪರ ಸಂಘಟನೆಗಳ ಸದಸ್ಯರು ನಾಗರೀಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಸಿ ಪಿ ಆಯ ಶ್ರೀಶೈಲ, ಎಚ್ ಡಿ ಮುಲ್ಲಾ ನೇತೃತ್ವದಲ್ಲಿ ಪೋಲೀಸರು ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.