ವಿದ್ಯುತ್ ಖಾಸಗಿಕರಣ ಖಂಡಿಸಿ ರೈತ ಸಂಘ ಬೃಹತ್ ಪ್ರತಿಭಟನೆ
Farmers' association holds massive protest against electricity privatization
ಘಟಪ್ರಭಾ 23 : ರಾಜ್ಯ ವಿದ್ಯುತ್ ಇಲಾಖೆಯಯನ್ನು ಖಾಸಗೀಕರಣಗೊಳಿಸುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಹಸಿರು ಸೇನೆ ರೈತ ಸಂಘಟನೆಯ ಗಣೇಶ ಇಳಿಗೇರ, ಮಹಾದೇವ ಗೋಡೆರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಘಟಪ್ರಭಾದ ಶ್ರೀ ಮೃತ್ಯುಂಜಯ ವೃತ್ತದಲ್ಲಿ ಸಂಕೇಶ್ವರ ನರಗುಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಂಗಳವಾರದಂದು ನಡೆಯಿತು. ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ಡಾ. ಕೆಂಪಣ್ಣಾ ಚೌಕಶಿ, ದಲಿತ ಸಂಘಟನೆಗಳ ಅರ್ಜುನ ಗಂಡವ್ವಗೋಳ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಅಪ್ಪಾಸಾಬ ಮುಲ್ಲಾ , ಕೃಷ್ಣಾ ಗಂಡವ್ವಗೋಳ, ರಾಜಶೇಖರ ರಜಪೂತ ಸೇರಿದಂತೆ ರೈತ ಸಂಘಟನೆಗಳ, ಕನ್ನಡ ಪರ, ದಲಿತ ಪರ ಸಂಘಟನೆಗಳ ಸದಸ್ಯರು ನಾಗರೀಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಸಿ ಪಿ ಆಯ ಶ್ರೀಶೈಲ, ಎಚ್ ಡಿ ಮುಲ್ಲಾ ನೇತೃತ್ವದಲ್ಲಿ ಪೋಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 