ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ರೈತ ಸಂಘ ಮನವಿ
Farmers' Martyrs' Day celebration
ರೈತರ ಹುತ್ಮಾತ್ಮ ದಿನಾಚರಣೆ
ವಿಜಯನಗರ 21: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದಿ. 21ರಂದು ರೈತರ ಹುತ್ಮಾತ್ಮ ದಿನಾಚರಣೆಯನ್ನು ನಗರದ ಗಾಂಧಿಚೌಕ್ ವೃತ್ತದ ಹತ್ತಿರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಣ್ಣಕ್ಕಿ ರುದ್ರ್ಪ ರವರು 45ನೇ ವರ್ಷದ ರೈತರ ಹುತಾತ್ಮ ದಿನಾಚರಣೆಯ ಅಂಗವಾಗಿ ಮಾತನಾಡಿ ಈಗಾಗಲೇ ನಮ್ಮ ರೈತರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಮುಖ್ಯವಾಗಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ಅನೇಕ ಬಾರಿ ಮುಖ್ಯಮಂತ್ರಿಯವರಿಗೆ, ಸಚಿವರಿಗೆ, ಶಾಸಕರಿಗೆ, ಹಾಗೂ ಇತರೆ ಸ್ಥಳೀಯ ಎಲ್ಲಾ ಗೌರವಾನ್ವಿತ ಅಧಿಕಾರಿ ವರ್ಗಗಕ್ಕೂ ಮನವಿ ಮಾಡಿಕೊಂಡರು ಇಲ್ಲಿಯವರೆಗೂ ಯಾವುದೇ ಕ್ರಮವನ್ನು ಜರುಗಿಸದೇ ಇರುವುದು ತುಂಬಾ ಸೋಚನಿಯ ಹಾಗೂ ವಿಪರ್ಯಾಸದ ಸಂಗತಿಯಾಗಿದೆ. ಮೇ 20, 2025 ರಂದು ಸಾಧನಾ ಸಮಾವೇಶದಲ್ಲಿ 02 ತಿಂಗಳು ಗಡುವನ್ನು ಬಿ.ಜೆಡ್.ಜಮೀರ್ ಅಹ್ಮದ್ ಖಾನ್‌ರವರು ಆಶ್ವಾಸನೆ ನೀಡಿದರು. ಆದರೆ ಇದುವರೆಗೂ ಯಾವುದೇ ರೀತಿಯಾಗಿ ಪ್ರತಿಕ್ರಿಯೇ ನೀಡದೆ ಇರುವುದು ತುಂಬಾ ಕಠಿಣವಾಗಿರುತ್ತದೆ. ಮತ್ತು ಸದ್ರಿ ಸಕ್ಕರೆ ಕಾರ್ಖಾನೆಯನ್ನು ನಂಬಿಕೊಂಡ ಕೂಲಿ ಕಾರ್ಮಿಕರು ಮತ್ತು ರೈತರು ಹೊಲಸೆ ಹೋಗುತ್ತಿದ್ದಾರೆ. ಆದಕಾರಣ ಸುಮಾರು ಹೊಸಪೇಟೆ ಭಾಗದಲ್ಲಿಯೇ 4 ರಿಂದ 5 ಲಕ್ಷ ಟನ್ ನಷ್ಟು ಕಬ್ಬು ಬೆಳೆಯುವ ರೈತಗಾರರಿದ್ದು, ಸುಮಾರು 09ವರ್ಷದಿಂದ ಒಂದು ಟನ್ ಕಬ್ಬಿಗೆ ಬೇರೆ ಕಡೆಗಳಲ್ಲಿ ಸಾಗಾಣಿಕೆ ಮಾಡಲಿಕ್ಕೆ ರೂ.1000/-ಗಳಿಂದ 1200/-ಗಳಷ್ಟು ಹಣ ರೈತರಿಗೆ ಹೊಣೆಯಾಗಿರುತ್ತದೆ. ಇದೇ ಉಳಿಯುವಂತಹ ರೂ.1000/- ಟ್ರಾನ್ಸ್‌ಪೋರ್ಟ್ ಮತ್ತು ಕಟಿಂಗ್ ಚಾರ್ಜ್‌ಗೆ ಖರ್ಚು ಆಗುತ್ತಾ ಹೋಗುತ್ತದೆ. ಚನುನಾವಣೆಯ ಪೂರ್ವದಲ್ಲಿ ಭರವಸೆ ನೀಡಿ ಇಲ್ಲಿಯವರೆಗೂ ಯಾವುದೇ ಕಾರ್ಖಾನೆಯ ಬಗ್ಗೆ ಮಾತನಾಡುತ್ತಿಲ್ಲ. ಈಕೂಡಲೇ ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದು ತ್ವರಿತಗತಿಯಲ್ಲಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಲ್ಲರಿಗೂ ತಿಳಿಯಪಡಿಸಿದರು.
ನಂತರ ಜಿಲ್ಲಾ ಕಾರ್ಯಾಧ್ಯಕ್ಷರಾದ ಎಂ.ಜಡೆಪ್ಪ ರವರು ಮಾತನಾಡಿ ಈ ಹಿಂದೆ ಬಿಜೆಪಿ ಸರ್ಕಾರ ತಂದಿರುವಂತಹ ಕೃಷಿ ಕಾಯ್ದೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರವು ಕೂಡ ಮುಂದುವರೆಸಿಕೊಂಡು ಹೋಗುತ್ತಿರುವುದು ತುಂಬಾ ವಿಪರ್ಯಾಸ ಸಂಗತಿಯಾಗಿದೆ. ಇದನ್ನು ಚುನಾವಣೆ ಸಂದರ್ಭದಲ್ಲಿ ರೈತರ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುತ್ತೇವೆಂದು ಹೇಳಿ ಘೋಷಣೆ ಮಾಡಿರುವದನ್ನು ಇಂದು ಪುನಃ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋಗಿರುವುದು ತುಂಬಾ ಖಂಡಿನಿಯವಾಗಿರುತ್ತದೆ. ಇದನ್ನು ನಾವುಗಳು ಖಂಡಿಸುತ್ತಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದು ಈ ಕಾಯ್ದೆಗಳನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷರಾದ ಟಿ.ನಾಗರಾಜ್ ರವರು ಮಾತನಾಡಿ ಈವರ್ಷದ ಮುಂಗಾರು ಬೇಗನೆ ಆರಂಭವಾಗಿರುವುದರಿಂದ ಯೂರಿಯಾ, ಗೊಬ್ಬರ, ರೈತರಿಗೆ ತುಂಬಾ ಅಭಾವವಾಗಿರುತ್ತದೆ. ಈಕೂಡಲೇ ರೈತರಿಗೆ ಸಮರ್ಕವಾಗಿ ಯೂರಿಯಾ, ಗೊಬ್ಬರವನ್ನು ಪೂರೈಸಬೇಕು ಮತ್ತು ಕಳೆದ ವರ್ಷ ತುಂಗಭದ್ರ ಜಲಾಶಯದ 19ನೇ ಕ್ರಷ್‌ಗೇಟ್ ಮುರಿದು ಹೋಗಿದ್ದು, ಇಲ್ಲಿಯವರೆಗೂ ಅದನ್ನು ಸರಿಪಡಿಸದೆ ಬೇಜವಾಬ್ದಾರಿತನ ಹೊಂದಿರುತ್ತಾರೆ. ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. 133 ಟಿ.ಎಂ.ಸಿ. ಇರುವ ನೀರಿನಲ್ಲಿ 23 ಟಿ.ಎಂ.ಸಿ. ನೀರು ಹೂಳು ತುಂಬಿರುತ್ತದೆ. ಇದರಲ್ಲಿ 105 ಟಿ.ಎಂ.ಸಿ. ನೀರು ಶೇಖರಣೆಯಾಗಿರುತ್ತದೆ. ಕಳೆದ ವರ್ಷದ 19ನೇ ಕ್ರಷ್‌ಗೇಟ್ ಮುರಿದು ಹೋಗಿರುವುದರಿಂದ ಎಲ್ಲಾ ಗೇಟ್‌ಗಳು ಹಳೇಯದಾಗಿದ್ದು, ಅದನ್ನು ಪುನರ್ ಹೊಸದಾಗಿ ಸರಿಪಡಿಸಲಿಕ್ಕೆ ಈಗ ಕೇವಲ 80 ಟಿ.ಎಂ.ಸಿ.ಗೆ ನೀರನ್ನು ತಂದು ನಿಲ್ಲಿಸಿರುತ್ತಾರೆ. ಇದರಿಂದ ರೈತರಿಗೆ ಎರಡು ಬೆಳೆ ನೀರು ಸಾಕಾಗುವುದಿಲ್ಲ. ಆದಷ್ಟು ಬೇಗ ಎಲ್ಲಾ ಗೇಟ್‌ಗಳನ್ನು ಕೂಡಲೇ ಸರಿಪಡಿಸಿ ರೈತರಿಗೆ 02 ಬೆಳೆಯನ್ನು ಬೆಳೆಯಲ್ಲಿಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟಿ.ನಾಗರಾಜ್, ಎಂ.ಜಡೆಪ್ಪ, ಸಣ್ಣಕ್ಕಿ ರುದ್ರ್ಪ, ಆರ್.ಆರ್.ತಾಯಪ್ಪ, ವಿ.ಗಾಳೇಪ್ಪ, ಮೂರ್ತಿ, ರೇವಣಸಿದ್ದಪ್ಪ, ಕೆ.ಜಹಿರುದ್ದೀನ್, ಕೆ.ಸುರೇಶ್, ಕೆ.ಮಲ್ಲಿಕಾರ್ಜುನ, ಎಲ್.ನಾಗೇಶಿ, ಜಿ.ಹನುಮಂತರೆಡ್ಡಿ, ಎಂ.ಎರಿ್ರಸ್ವಾಮಿ, ನಲ್ಲಾಪುರ ಬಸವರಾಜ್, ಜೆ.ಕೊಟ್ರ್ಪ, ಅಯ್ಯಣ್ಣ, ಸತೀಶ, ಹೆಚ್.ಹನುಮಂತ ರೆಡ್ಡಿ, ಅಂಕ್ಲೇಶ್, ಜಾಕೀರ್, ಹಾಗೂ ಇತರೆ ರೈತ ಮಿತ್ರರು ಬಾಗಿಯಾಗಿ ರೈತರ ಹುತ್ಮಾತ್ಮ ದಿನಾಚರಣೆಯನ್ನು ಸಮಪರ್ಕವಾಗಿ ಮುಗಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 