ಬೆಂಗಳೂರು, ಡಿ.28,ತೊಗರಿ
ಪ್ರತಿ ಕ್ವಿಂಟಾಲ್ 1 ಸಾವಿರ ಪ್ರೋತ್ಸಾಹ ಧನ ಹಾಗೂ ಪಿಎಸ್ ಎಸ್ ಯೋಜನೆಯಡಿ ರಾಜ್ಯದ 5.5 ಲಕ್ಷ ತೊಗರಿ
ಖರೀದಿಗೆ ಹಾಗೂ ವಿದೇಶದಿಂದ ಆಮದಾಗುತ್ತಿರುವ ಬೇಳೆಕಾಳುಗಳ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಲು
ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿಸರ್ಕಾರವನ್ನು
ಒತ್ತಾಯಿಸಿದೆ.ಇಂದು ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ,
ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ನಲ್ಲಿ 11 ಲಕ್ಷ ತೊಗರಿ ಉತ್ಪಾದನೆ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರ
10.70 ದಶ ಲಕ್ಷ ಟನ್ ತೊಗರಿ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಈಗಾಗಲೇ ಸಲ್ಲಿಸಲಾಗಿದೆ.
ಆದರೆ ಕೇಂದ್ರ ಸರ್ಕಾರ ಪಿಎಸ್ಎಸ್ ಯೋಜನೆಯಡಿ ಶೇ.25 ರಷ್ಟು ಅಂದರೆ 1.85 ಲಕ್ಷ ಟನ್ ಮಾತ್ರ ತೊಗರಿ
ಖರೀದಿಗೆ ಅನುಮತಿ ನೀಡಿದೆ. ಇದರಿಂದಾಗಿ ರೈತರಿಗೆ
ಅನ್ಯಾಯವಾಗುತ್ತಿದ್ದು, 5.5 ಲಕ್ಷ ಟನ್ಖರೀದಿಗೆ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ
ನೀಡಬೇಕೆಂದು ಆಗ್ರಹಿಸಿದರು.ಕಳೆದ ವರ್ಷ ಪ್ರತಿ ಕ್ವಿಂಟಾಲ್
ಗೆ ರೂ.425 ರಷ್ಟು ಪ್ರೋತ್ಸಾಹ ಧನ ನೀಡಲಾಗಿತ್ತು. ಆದರೆ ಈ ವರ್ಷ ರೂ.300 ಮಾತ್ರ ಪ್ರೋತ್ಸಾಹ ಧನ
ಘೋಷಣೆ ಮಾಡಿದೆ. ಇದರಲ್ಲಿ 125 ರೂ.ಕಡಿತವಾಗಿದ್ದು, ರೈತರಿಗೆ ಅನ್ಯಾಯವಾಗಿದೆ. ಆದ್ದರಿಂದ ಪ್ರೋತ್ಸಾಹ
ಧನದ ನಿರ್ಧಾರವನ್ನು ಪುನಃ ಪರಿಶೀಲಿಸಿ ರೈತರ ಕೋರಿಕೆಯಂತೆ ಪ್ರತಿ ಕ್ವಿಂಟಾಲ್ ಗೆ ಒಂದುಸಾವಿರ ಪ್ರೋತ್ಸಾಹ
ಧನ ನೀಡಬೇಕು ಎಂದು ತಿಳಿಸಿದರು.ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದೊಂದು ತೊಗರಿ ಖರೀದಿ
ಕೇಂದ್ರ ತೆಗೆಯಬೇಕು ಹಾಗೂ ಪಿಎಸ್ ಎಸ್ ಯೋಜನೆಯನ್ನು ಮುಂದುವರಿಸಬೇಕೆಂದು ಮನವಿ ಮಾಡಿದರು.