ಲೋಕದರ್ಶನ ವರದಿ
ಕುಕೂನುರು 09: ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಕಛೇರಿ ಇದ್ದು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಾವಳಿಗಳ ಪ್ರಕಾರ ಎಲ್ಲಾ ವರ್ತಕರಿಗೆ. ಖರೀದಿದಾರರಿಗೆ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ವ್ಯವಹಾರ ಮಾಡಬೇಕು ಎಂದು ಆಗರಹಿಸಿ ರೈತ ನಾಯಕ ಪ್ರೋ: ನಂಜುಂಡಸ್ವಾಮಿ. ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ಪದಾಧಿಕಾರಿಗಳು ಶುಕ್ರವಾರ ಒತ್ತಾಯಿಸಿ ಕುಕನೂರು ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಶಿರಸ್ತದಾಃರ್ ರವಿಕುಮಾರ್ ಅವರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ಮಾತನಾಡಿ. ಅವರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪಟ್ಟಣದ ತಹಸಿಲ್ ಕಚೇರಿ ಶಿರಸ್ತದಾಃರ್ ರವಿಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ. ರೈತರ ಬೇಡಿಕೆಗಳು ನ್ಯಾ ಯಯುತವಾಗಿದ್ದು. ಈ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ಮಾತನಾಡಿ. ಕುಕನೂರು ತಾಲೂಕಿನಲ್ಲಿ ಕಟ್ಟಡ ಮಳಿಗೆಗಳ ಸೌಲಭ್ಯಗಳನ್ನು ಸಕರ್ಾರ ಒದಗಿಸಿಕೊಡಲಾಗಿದೆ. ಆದರೂ ಕೆಲವು ವರ್ತಕರು ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ವ್ಯವಹಾರ ಮಾಡುವದು ಬಿಟ್ಟು ತಮ್ಮ ಸ್ವಂತ ಜಾಗದಲ್ಲಿ ಮತ್ತು ಹಳ್ಳಿಗಳಲ್ಲಿ ವ್ಯವಹಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಎಂದರು ಇದರಿಂದ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ರೈತರು ಬೆಳೆದ ಉತ್ಪನ್ನತಗಳಿಗೆ ಸ್ಪಧರ್ಾತ್ಮಕವಾದ ಬೆಲೆ ಸಿಗುತ್ತಿಲ್ಲ ಮತ್ತು ವರ್ತಕರು ರೈತರಿಗೆ ಬಿಳಿಹಾಳಿಯ ಮೇಲೆ ಚೀಟಿ ಮಾಡಿಕೊಡುತ್ತಾರೆ. ಎಂದರು ಇದರಿಂದ ರೈತರು ಮೋಸ ಹೋಗುವ ಸಂಭವವು ಇರುತ್ತದೆ. ಮತ್ತು ಈ ಬಾರೆ ಹಿಂಗಾರು ಹಂಗಾಮಿನಲ್ಲಿ ಸಾಕಷ್ಟು ಕಡಲೆ ಬೆಳೆ ಬೆಳೆದಿದ್ದಾರೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಕಡಲೆ ಬೆಳೆ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ರೈತರು ಸಾಕಷ್ಟು ಹಣ ಖಚರ್ು ಮಾಡಿ ಕಡಲೆ ಬೆಳೆ ಬೆಳೆದಿದ್ದಾರೆ. ಅವರಿಗೆ ಯೋಗ್ಯವಾದ ಮಾರುಕಟ್ಟೆ ಬೆಲೆ ಸಿಗಬೇಕಾದರೆ ಕೂಡಲೇ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರ ಉತ್ಪನ್ನತಗಳನ್ನು ಟೆಂಡರ್ ಮೂಲಕ ಈ ವ್ಯವಹಾರ ಗಳನ್ನು ಶೀಘ್ರದಲ್ಲೇ ಮಾಡುವಂತೆ ಸೂಕ್ತವಾಗಿ ಸಕರ್ಾರಕ್ಕೆ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಳಾದ, ಗವಿಸಿದ್ದಪ್ಪ ಅರಳಿ, ಶಿವಪುತ್ರಪ್ಪ ಕುಮಟಹಳ್ಳಿ, ಕಿರಣ ಸಿಳಿನ.ಮಯಶೆ ಮಸಬಹಂಚಿನಾಳ, ಸರಸ್ವತಿ ಹಂಚಿನಾಳ, ಬಸಮ್ಮ ರಾಜೂರ, ಚನ್ನಪ್ಪ ನಾಲವಾಡ, ಮಂಜುನಾಥ ಕಮತರ. ಮತ್ತಿತರರು ಇದ್ದರು.