ಚರಂಡಿ ನೀರು ಜಮೀನಿಗೆ ಸೇರದಂತೆ ರೈತ ಮುಖಂಡರಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಚರಂಡಿ ನೀರು ಜಮೀನಿಗೆ ಸೇರದಂತೆ ರೈತ ಮುಖಂಡರಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ  Farmer leaders submit a memorandum to the Town Municipal Council Chief Officer, requesting that sewa

ಲಕ್ಷ್ಮೇಶ್ವರ  21: ಸಮೀಪದಲ್ಲಿ ಬರುವ ಅಡರಕಟ್ಟಿ ಗ್ರಾಮದ ನೂರಾರು ಎಕರೆ ರೈತರ  ಜಮೀನುಗಳಿಗೆ ಲಂಡಿ ಹಳ್ಳದ ಚರಂಡಿ ನೀರು ಸೇರುತ್ತಿರುವುದರಿಂದ ರೈತರ ಜಮೀನು ಜವಳ ಬೀಳುತ್ತಿರುವ ಕಾರಣ ರೈತರ ಬೆಳೆ ಬಾರದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು  ಇದರಿಂದ ಅಡರಕಟ್ಟಿ ಗ್ರಾಮದ ನೂರಾರು ರೈತರು ಮತ್ತು ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಭಟನೆಯ ಸಭೆಯನ್ನು ನಡೆಸಿದರು ಪ್ರತಿಭಟನೆ ಸಭೆಯ ಸ್ಥಳಕ್ಕೆ ಆಗಮಿಸಿದ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ್ ಗುಡದಾರಿ ಅವರಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ಸಭೆಯನ್ನು ಉದ್ದೇಶಿಸಿ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಅಧ್ಯಕ್ಷರಾದ  ಬಿ.ಟಿ ಚಂದ್ರಶೇಖರ ಅವರು ಮಾತನಾಡಿ ಅಡರಕಟ್ಟಿ ಗ್ರಾಮದ ರೈತರ ಜಮೀನಿಗೆ ಚರಂಡಿ ನೀರು ಸೇರಿ ಫಲವತ್ತಾದ ಬೆಳೆ ಬೆಳೆಯಬೇಕಾದ ಜಮೀನು ಹಾಳಾಗುತ್ತಿದೆ ಈ ವಿಷಯವಾಗಿ ಇಂದು ಅಡರಕಟ್ಟಿ ಗ್ರಾಮದಿಂದ ತಹಶೀಲ್ದಾರ್ ಕಚೇರಿ ಮತ್ತು ಪುರಸಭೆಯ ವರೆಗೂ ಎಲ್ಲ ಗ್ರಾಮದ ರೈತರೊಂದಿಗೆ ಪಾದಯಾತ್ರೆ ಮೂಲಕ ಉಗ್ರ ಹೋರಾಟ ಮಾಡಲು ನಿರ್ಧರಿಸಲಾಗಿತ್ತು ಆದರೆ ಗ್ರಾಮದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಶಾಂತಿ ರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಪ್ರತಿಭಟನೆ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು ಚರಂಡಿ ನೀರು ರೈತರ ಜಮೀನಿಗೆ ಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೆ ಉಗ್ರ  

ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು ಈ ಸಮಯದಲ್ಲಿ ಸಮಗ್ರ ರೈತ ಹೋರಾಟ ಸಂಘಟನೆಯ ಮುಖಂಡರಾದ ಮಂಜುನಾಥ್ ಮಾಗಡಿ ರವಿಕಾಂತ ಅಂಗಡಿ ಬಸವರಾಜ್ ಹಿರೇಮನಿ ಅವರು ಮಾತನಾಡಿ ಅಡರಕಟ್ಟಿ ಗ್ರಾಮದ ನೂರಾರು ರೈತರ ಬಹುದಿನಗಳ ಸಮಸ್ಯೆಯಾದ ಚರಂಡಿ ನೀರು ಜಮೀನಿಗೆ ಸೇರುತ್ತಿರುವು ದರಿಂದ ರೈತರ ಫಲವತ್ತಾದ ನೂರಾರು ಎಕರೆ ಜಮೀನು ಹಾಳಾಗುತ್ತಿದೆ ಇದರಿಂದ ಜಮೀನು ಇದ್ದ ಇಲ್ಲದಂತಾಗಿದೆ.

ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಇದೇ ವಿಷಯವಾಗಿ ಗ್ರಾಮದ ರೈತರ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಅಧಿಕಾರಿಗಳು ನಿರ್ಲಕ್ಷ ಬಯಸುತ್ತಿದ್ದಾರೆ ಇದು ಹೀಗೆ ಮುಂದುವರೆದರೆ ಗ್ರಾಮದ ಎಲ್ಲ ರೈತರೊಂದಿಗೆ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದರು ಪ್ರತಿಭಟನೆಯ ಸಭೆಯಲ್ಲಿ  ಅಡರಕಟ್ಟಿ ಗ್ರಾಮದ ಹಿರಿಯ ಮುಖಂಡರಾದ ಸಿ.ಟಿ ಹಳೆಮನೆ ಮುತ್ತಣ್ಣ ಗಡೆಪ್ಪನವರ ನಿಂಗಪ್ಪ ಪ್ಯಾಟಿ ಸೇರಿದಂತೆ ಗ್ರಾಮದ ನೂರಾರು ರೈತ ಮುಖಂಡರು ಇದ್ದರು