ಅಧಿಸೂಚನೆ ಹೊರಡಿಸುವಂತೆ ರೈತ ಮುಖಂಡ ಕುಲಕರ್ಣಿ ಆಗ್ರಹ

ಅಧಿಸೂಚನೆ ಹೊರಡಿಸುವಂತೆ ರೈತ ಮುಖಂಡ ಕುಲಕರ್ಣಿ ಆಗ್ರಹ  Farmer leader Kulkarni demands notification

ಅಧಿಸೂಚನೆ ಹೊರಡಿಸುವಂತೆ ರೈತ ಮುಖಂಡ ಕುಲಕರ್ಣಿ ಆಗ್ರಹ  

ತಾಳಿಕೋಟಿ 29: ನ್ಯಾ. ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧಿಕರಣದ ತೀರ​‍್ಿನಂತೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 519.60 ರಿಂದ 524.256 ಮೀ.ಗೆ ನೀರು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.  

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಂಡ ಕರ್ನಾಟಕ ರೈತ ಸಂಘದಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಳಂಬ ಧೋರಣೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನ್ಯಾ. ಬ್ರಿಜೇಶಕುಮಾರ ನೇತೃತ್ವದ ಎರಡನೇ ನ್ಯಾಯಾಧಿಕರಣ 2010 ರಲ್ಲಿಯೇ ತೀಪು ನೀಡಿ, 2013ರ ತನ್ನ ಸ್ಪಷ್ಟೀಕರಣ ತೀರ​‍್ಿನಲ್ಲಿ ಜಲಾಶಯದ ನೀರಿನ ಮಟ್ಟವನ್ನು 524.256 ಕ್ಕೆ ನಿಲ್ಲಿಸಲು ಅನುಮತಿ ನೀಡಿದೆ ತೀಪು ಬಂದು 15 ವರ್ಷಗಳಾದರೂ ಇಲ್ಲಿಯವರೆಗೆ ಜಲಾಶಯದ ನೀರನ್ನು ಹೆಚ್ಚಿಸಲು ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿಲ್ಲ ಹಾಗೂ ಕೇಂದ್ರ ಸರ್ಕಾರ ಇನ್ನು ಇದಕ್ಕೆ ಅಧಿಸೂಚನೆ ಕೂಡ ಹೊರಡಿಸಿಲ್ಲ ಮಹಾರಾಷ್ಟ್ರದ ತಕರಾರಿನ ನೆಪ ಮುಂದಿಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ. ಇದರಿಂದ ಉತ್ತರ ಕರ್ನಾಟಕದ ರೈತರು ಭ್ರಮ ನಿರಸನಗೊಂಡಿದ್ದಾರೆ. ಅವಳಿ ಜಿಲ್ಲೆಯ ರೈತರು ಲಕ್ಷಾಂತರ ಎಕರೆ ಜಮೀನು, ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಕೆಲವರು ಬೇರೆ ರಾಜ್ಯಗಳಿಗೆ ಗೂಳೆ ಹೋಗಿದ್ದಾರೆ. ಆದರೆ ತ್ಯಾಗ ಮಾಡಿದ ರೈತರಿಗೆ ನೀರು ಕೊಡದೆ ಹಂತಗಳನ್ನು ಹೇಳುತ್ತಾ ವಂಚಿಸಲಾಗುತ್ತಿದೆ ಯಾವ ರಾಜ್ಯಗಳಲ್ಲಿಯೂ ಹಂತದ ಯೋಜನೆಗಳಿಲ್ಲ ಅದು ಇಲ್ಲಿ ಮಾತ್ರ ಏಕೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸದ್ಯ ಆಣೆಕಟ್ಟು 519.60 ರಿಂದ 524.256 ಮೀ.ಗೆ ಹೆಚ್ಚಿಸಲು ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ಅಂದಾಜು 22 ಹಳ್ಳಿಗಳ ಸ್ಥಳಾಂತರ ಮಾಡಿ, ಪುನರ್ವಸತಿ ಕೇಂದ್ರ ನಿರ್ಮಿಸುವುದರ ಜೊತೆಗೆ 1 ಲಕ್ಷಕ್ಕೂ ಹೆಚ್ಚು ಭೂಸ್ವಾಧೀನ ಮಾಡಿಕೊಳ್ಳಬೇಕು ಇದಕ್ಕೆ 1ಕೋಟಿ ರೂ.ಗಳ ಪರಿಹಾರ ನೀಡಬೇಕು ಈ ಯೋಜನೆ ಸಾಕಾರಗೊಳ್ಳಲು ಈಗ ಒಂದು ಲಕ್ಷ ಕೋಟಿಗೂ ಅಧಿಕ ಹಣ ಬೇಕಾಗುತ್ತದೆ ಇಷ್ಟು ಹಣ ಕೊಡಲು ಸರ್ಕಾರಕ್ಕೆ ಅಸಾಧ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ ಅವರು ಸದನಕ್ಕೆ ತಿಳಿಸಿದ್ದಾರೆ. ಆದರೆ ಸರ್ಕಾರ ಇಚ್ಛಾಶಕ್ತಿ ತೋರಿದರೆ ಎಲ್ಲವನ್ನು ಮಾಡಬಹುದಾಗಿದೆ ಎಂದ ಅವರು ಒಂದುವೇಳೆ ಇಷ್ಟೊಂದು ಹಣ ರಾಜ್ಯ ಸರ್ಕಾರಕ್ಕೆ ಒದಗಿಸಲು ಸಾಧ್ಯವಿಲ್ಲ ವೆಂದಾದರೆ ಈ ಯೋಜನೆಯನ್ನು ಪೂರ್ಣಗೊಳಿಸಲು ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಂದು ಘೋಷಿಸಿ ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಇದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ ಅವರು ಪ್ರಸ್ತುತ ಇರುವ ಆಲಮಟ್ಟಿ ಆಣೆಕಟ್ಟು 519.60 ಮೀ ಎತ್ತರದಿಂದ 123.081 ಟಿಎಂಸಿ ನೀರು ರಾಜ್ಯದ ಪಾಲಾಗಿದ್ದು ಇದರಲ್ಲಿ ವಿಜಯಪುರ ಬಾಗಲಕೋಟ, ಕೊಪ್ಪಳ ಕಲಬುರ್ಗಿ, ಯಾದಗಿರಿ ರಾಯಚೂರು ಜಿಲ್ಲೆಗಳು ನೀರು ಉಪಯೋಗಿಸುತ್ತಿವೆ ಇನ್ನೂ ಆಣೆಕಟ್ಟು 519.60 ರಿಂದ 524.256 ಮೀ.ಗೆ ಹೆಚ್ಚಳವಾದರೆ 130 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭಿಸಲಿದ್ದು ಇದರಲ್ಲಿ 80 ಟಿಎಂಸಿ ನೀರು ವಿಜಯಪುರ ಬಾಗಲಕೋಟೆ ನೀರಾವರಿ ಯೋಜನೆಗಳಿಗೆ ಸಿಗಲಿದೆ ಆದ್ದರಿಂದ ಸಂತ್ರಸ್ತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರಗಳು ಯೋಜನೆಯನ್ನು ಸಂಪೂರ್ಣ ಅನುಷ್ಠಾನಕ್ಕೆ ಮುಂದಾಗಬೇಕು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕೆಂದು ನಮ್ಮ ಆಗ್ರಹವಾಗಿದೆ. ಇದರಲ್ಲಿ ಇನ್ನಷ್ಟು ವಿಳಂಬವಾದರೆ ರಾಜ್ಯದ ಮಠಾಧೀಶರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟವನ್ನು ಮಾಡುವುದು ಅನಿವಾರ್ಯವಾಗುತ್ತದೆ ಎಂದರು.  

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಗುರುರಾಜ ಪಡಶಟ್ಟಿ, ಆನಂದ ಪಾಟೀಲ, ಬಸನಗೌಡ ಹಳ್ಳಿಪಾಟೀಲ, ಶ್ರೀನಿವಾಸ ಗೊಟಗುಣಕಿ, ಮಡಿವಾಳಪ್ಪ ಕಲಬುರ್ಗಿ ಅಶೋಕ ಪಾಟೀಲ, ಬಿ.ಎಸ್‌. ಸಜ್ಜನ, ಬಸನಗೌಡ ಪಾಟೀಲ, ರಾಮನಗೌಡ ಹಾದಿಮನಿ ಇದ್ದರು.