ಲೋಕದರ್ಶನ ವರದಿ
ಎಸ್ಸೆಸ್ಸೆಲ್ಸಿಯಲ್ಲಿ ರೈತನ ಮಗಳ ಸಾಧನೆ
ಕಂಪ್ಲಿ 05: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 615(ಶೇ.98.4) ಅಂಕಗಳಿಸಿ ಶಾಲೆಗೆ ಪ್ರಥಮ ತೃತೀಯ ಸ್ಥಾನಗಳಿಸಿದ್ದಾಳೆ.
ಕನ್ನಡ 124, ಇಂಗ್ಲೀಷ್ 99, ಹಿಂದಿ 100, ಗಣಿತ 96, ವಿಜ್ಞಾನ 98, ಸಮಾಜ ವಿಜ್ಞಾನ 98 ಸೇರಿದಂತೆಒಟ್ಟಾರೆ 615 ಅಂಕಗಳ ಸಾಧನೆ ತನ್ನಾದಾಗಿಸಿಕೊಂಡಿದ್ದಾಳೆ. ಈ ಸಾಧನೆಗೆ ಪಾಲಕ ಪೋಷಕರು, ಶಾಲೆಯ ಪ್ರಾಚಾರ್ಯ ಹಾಗೂ ಸಹ ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ಕೆ.ತನುಶ್ರೀ ಮಾತನಾಡಿ ನಿರಂತರವಾಗಿ ವಿದ್ಯಾಭ್ಯಾಸ ಮಾಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪಿಯುಸಿಯಲ್ಲಿ ಪಿಸಿಎಂಬಿ(ಸೈನ್ಸ್) ಮಾಡುತ್ತೇನೆ. ಮತ್ತು ಮುಂದಿನ ದಿನದಲ್ಲಿಕೆಎಎಸ್ ಮತ್ತುಐಎಎಸ್ ಮಾಡುವ ಗುರಿಯಿದೆ ಎಂದರು.