ರೈತರ ಸುಗ್ಗಿಹಬ್ಬ ಸಂಕ್ರಾಂತಿ ಭಾರತೀಯ ಸಂಸ್ಕೃತಿಯ ಪರಂಪರೆ: ಡಾ.ಪ್ರವೀಣ

ಲೋಕದರ್ಶನವರದಿ

ರಾಣೇಬೆನ್ನೂರು14: ರೈತರ ಸುಗ್ಗಿ ಹಬ್ಬವೆಂದೇ ಬಿಂಬಿತವಾಗಿರುವ ಸಂಕ್ರಾಂತಿ ಆಚರಣೆಯ ಪ್ರಯುಕ್ತ ಸ್ಥಳೀಯ ಖನ್ನೂರ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಶಾಲಾ ಆಡಳಿತ ಮಂಡಳಿಯವರು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಸಂಕ್ರಾಂತಿಯ ಮಾಹಿತಿಯನ್ನು ಅನಾವರಣಗೊಳಿಸಿದರು. 

    ಸಂಸ್ಥೆಯ ಕಾರ್ಯದರ್ಶಿ ಡಾ. ಪ್ರವೀಣ ಎಂ ಖನ್ನೂರ ಹಾಗೂ ಖಜಾಂಚಿ ಡಾ. ಶೈಲಶ್ರೀ ಪಿ ಖನ್ನೂರ ಇವರುಗಳು ಧಾನ್ಯದ ರಾಶಿಗಳಿಗೆ ಪೂಜೆ ಹಾಗೂ ಗೋವುಗಳಿಗೆ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಭಕ್ತಿ ಪೂರ್ವಕವಾಗಿ ಚಾಲನೆ ನೀಡಿ ಇಂತಹ ಸುಗ್ಗಿ ಹಬ್ಬವು ರೈತರಿಗೆ ಚೈತನ್ಯ ನೀಡಲಿ, ರೈತರ ಬಾಳು ಹಸನಾಗಲಿ ಎಂದು ಆಶಿಸಿದರು.

      ಪ್ರಾಂಶುಪಾಲ ಡಾ.ಮಹಾಂತೇಶ ಆರ್ ಕಮ್ಮಾರ, ಮುಖ್ಯೋಪಾದ್ಯಾಯಿನಿ ಲೀಲಾವತಿ, ತುಷಾರ ಕೊಟ್ಟುರು, ಕು.ಶ್ವೇತಾ ಮೇಲಿನಮನಿ ಕು. ಮಾನ್ಯಾ ಅಡಿವೆಪ್ಪನವರ, ಕು. ಚಂದನಾ ತಹಶೀಲ್ದಾರ, ಕು. ರಚನಾ ಬಿ ಪಾಟೀಲ,  ಸಚಿತ್ ಜಿ ಕುಂದಾಪುರ ಮತ್ತಿತರರು ಭಾಗವಹಿಸಿದ್ದರು. ಅನೇಕ ವಿದ್ಯಾರ್ಥಿಗಳು  ಸಂಕ್ರಾಂತಿ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳು ನಡೆಸಿದ ಸುಗ್ಗಿ ನೃತ್ಯ ಜನಮನ ಸೆಳೆಯಿತು.