ರಾಣಿ ಚನ್ನಮ್ಮ ವಿವಿ ಖೋಖೋ ತಂಡಕ್ಕೆ ಬೀಳ್ಕೊಡುಗೆ

ರಾಣಿ ಚನ್ನಮ್ಮ ವಿವಿ ಖೋಖೋ ತಂಡಕ್ಕೆ ಬೀಳ್ಕೊಡುಗೆ Farewell to Rani Channamma University Khokho team

ಲೋಕದರ್ಶನ ವರದಿ 

ಮೂಡಲಗಿ 27: ದಾವಣಗೆರೆಯ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಖೋಖೋ ಟೂರ್ನಿಯಲ್ಲಿ ಭಾಗವಹಿಸಲಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಖೋಖೋ ತಂಡಕ್ಕೆ ನಾಗನೂರದ ಖೋಖೋ ತರಬೇತಿ ಕೇಂದ್ರದಿಂದ ಬೀಳ್ಕೊಟ್ಟರು.  

ನಾಗನೂರದ ಮಹಾಲಿಂಗೇಶ್ವರ ಕ್ರೀಡಾ ಅಕಾಡೆಮಿಯಲ್ಲಿ 8 ದಿನಗಳ ವರೆಗೆ ವಿಶ್ವವಿದ್ಯಾಲಯದ ಆಟಗಾರರಿಗೆ ತರಬೇತಿ ಜರುಗಿತು. 

ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ ‘ಗ್ರಾಮೀಣ ಕ್ರೀಡೆಯಾಗಿರುವ ಖೋಖೋ ಆಟವು ಯುವಕರನ್ನು ಸದೃಢಗೊಳಿಸುವ ಆಟವಾಗಿದೆ. ಅಂತರ್ ವಿಶ್ವವಿದ್ಯಾಲಯ ಟೂರ್ನಿಯಲ್ಲಿ ಚಾಂಪಿಯಿಜಷಿಪ್ ಪಡೆದು ವಿಶ್ವವಿದ್ಯಾಲಯಯಕ್ಕೆ ಮತ್ತು ನಾಗನೂರ ಗ್ರಾಮಕ್ಕೆ ಹೆಸರು ತರಬೇಕು ಎಂದರು.  

ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಆಟದ ಮೇಲೆ ಶ್ರದ್ಧೆ ಮತ್ತು ಪರಿಶ್ರಮಿಸಿದ್ದರೆ ಆಟದಲ್ಲಿ ಯಶಸ್ಸು ದೊರೆಯುತ್ತದೆ. ಮೊಬೈಲ್‌ದಿಂದ ದೂರುವಿದ್ದು ಆಟದಲ್ಲಿ ಪೂರ್ಣ ಮಗ್ನರಾಗಬೇಕು ಎಂದರು. 

ಅತಿಥಿಗಳಾದ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಕೆ. ಕಂಕಣವಾಡಿ, ಬಸವರಾಜ ಮುತ್ನಾಳ ಹಾಗೂ ಮಹಾಲಿಂಗೇಶ್ವರ ಕ್ರೀಡಾ ಅಕಾಡೆಮಿ ಈರಣ್ಣ ಹಳಿಗೌಡರ ಮಾತನಾಡಿ ಪಂದ್ಯವನ್ನು ಒಗ್ಗಟ್ಟು ಮತ್ತು ಪರಸ್ಪರ ಸಂವಹನವನ್ನುಇಟ್ಟುಕೊಂಡು ಆಡಬೇಕು. ಪಂದ್ಯದಲ್ಲಿ ತಪ್ಪುಗಳನ್ನು ಎಸಗದೆ ಮತ್ತು ಅನೂಚಿತ ವರ್ತನೆಯನ್ನು ತೋರದೆ ಖೋಖೋ ಆಟವನ್ನು ಗೆಲ್ಲಿಸಬೇಕು ಎಂದು ಸಲಹೆ ನೀಡಿದರು. 

ರಾಯಪ್ಪಕೆಮಶೆಟ್ಟಿ, ಅಜಿತಕಂಕಣವಾಡಿ ವೇದಿಕೆಯಲ್ಲಿದ್ದರು. ಸೌಮ್ಯಾ ನಿಡಸೋಸಿ, ಕೀರ್ತನಾ ಗೊಂದಳಿ ನಿರೂಪಿಸಿದರು. 

ವಿಶ್ವವಿದ್ಯಾಲಯ ತಂಡ: ವಿರೇಶ ಲೋಟಗೇರಿ (ನಾಯಕ), ಮೌಲಾಲಿ ಅತ್ತಾರ (ಉಪನಾಯಕ), ದರ್ಮಣ್ಣ ಉಂಡಿ, ನಾಗರಾಜ ಗುದಗಾರ, ಬಸವರಾಜ ವಡ್ಡರ, ಶುಭಂ ಕವಡಕರ, ಶ್ರೀಶೈಲ್ ಹುಣಶ್ಯಾಳ, ಉಮೇಶ ಹಳ್ಳೂರ, ಸಿದ್ಧಾರರ್ಥ ಕರೆನ್ನವರ, ಆನಂದ ತಡಸನೂರ, ವೆಂಕಟೇಶ ಬಂಟನೂರ, ವಿಜಯಕುಮಾರ ಗಲಗಿನ, ಉಮಾಕಾಂತ ಚವ್ಹಾನ, ಸುಮಿತ ತರಿಹಾಲಕರ, ಶೇಖರ ನಾಟಿಕರ. ವಿಶ್ವವಿದ್ಯಾಲಯ ಪ್ರತಿನಿಧಿಯಾಗಿ ಈರಣ್ಣ ಹಳಿಗೌಡರ, ಬಸವರಾಜ ಮುತ್ನಾಳ, ತರಬೇತುದಾರ ಬಾಳು ಕಂಬಾರ, ವ್ಯವಸ್ಥಾಪ ಬಿ.ಕೆ. ಬಡಗಣ್ಣವರ ಇರುವರು.