ವಿಶೇಷ ಪಟಾಕಿ ಮದ್ದುಗಳ ವೈಭವದ ನಡುವೆ ಗಣೇಶನಿಗೆ ವಿದಾಯ
Farewell to Ganesha amidst the splendor of special fireworks
ಲಕ್ಷ್ಮೇಶ್ವರ, ಸೆ.19: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆ ಸಂಭ್ರಮದಿಂದ ನಡೆಯಿತು. ವಿಶೇಷ ಪಟಾಕಿ ಮದ್ದುಗಳ ವೈಭವದ ನಡುವೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ವಿಸರ್ಜನಾ ಸ್ಥಳದವರೆಗೆ ಮೆರವಣಿಗೆ ನಡೆಸಿದರು. ವಿವಿಧ ಬಣ್ಣಗಳ ಪಟಾಕಿ ಸಿಡಿಸಿ ಸಂಭ್ರಮಿಸಿದ ಭಕ್ತರು, ವಿಸರ್ಜನಾ ಸ್ಥಳದಲ್ಲಿ ಗಣೇಶನಿಗೆ ಅಂತಿಮ ಪೂಜೆ ಸಲ್ಲಿಸಿ ಮೂರ್ತಿಯನ್ನು ವಿಸರ್ಜಿಸಿದರು.
ಈ ಸಂದರ್ಭದಲ್ಲಿ ಬಸವಣ್ಣಪ್ಪ ನಂದೇಣ್ಣವರ, ದೇವಪ್ಪ ನಂದೇಣ್ಣವರ, ಸುರೇಶ ನಂದೇಣ್ಣವರ, ಹನುಮಂತಪ್ಪ ನಂದೇಣ್ಣವರ, ದಳಪ್ಪ ನಂದೇಣ್ಣವರ, ಅಶೋಕ ನಂದೇಣ್ಣವರ, ಮೋಹನ ನಂದೇಣ್ಣವರ, ಸದಾನಂದ ನಂದೇಣ್ಣವರ, ಸಂತೋಷ ನಂದೇಣ್ಣವರ, ಕುಮಾರ ನಂದೇಣ್ಣವರ, ಚನ್ನಬಸಪ್ಪ, ಸಂಜೀವಣ್ಣ ಸೇರಿದಂತೆ ನಂದೇಣ್ಣವರ ಕುಟುಂಬಸ್ಥರು, ಹಿರಿಯರು, ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 