ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ Farewell ceremony for final year students of the Arts Department

ಲೋಕದರ್ಶನ ವರದಿ 

ಧಾರವಾಡ 25 : ಜೆ.ಎಸ್‌.ಎಸ್‌. ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಪ್ರಾಚಾರ್ಯರು ಆಗಿರುವ ಡಾ. ಅಜಿತ ಪ್ರಸಾದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ” ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ನಿರಂತರ ಅಧ್ಯಯನ, ಪ್ರಯತ್ನ, ಆತ್ಮವಿಶ್ವಾಸ, ಏಕಾಗ್ರತೆ, ಧೈರ್ಯ ಮತ್ತು ಒಳ್ಳೆಯ ವ್ಯಕ್ತಿತ್ವ ನಡತೆಗಳನ್ನು ಬೆಳಸಿಕೊಳ್ಳಬೇಕು.  ಪ್ರಸ್ತುತ ಜಗತ್ತಿನಲ್ಲಿ ಬಿ.ಎ ವಿದ್ಯಾರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್, ಐ.ಎಫ್‌.ಎಸ್, ಪಿ.ಎಸ್‌.ಐ, ಎಸ್‌.ಎಸ್‌.ಸಿ, ಎಫ್‌.ಡಿ.ಎ, ಎಸ್‌.ಡಿ.ಎ ಮುಂತಾದ ಪರೀಕ್ಷೆಗಳನ್ನು ಬರೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಹುದ್ದೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

ಹಾಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದು, ಸ್ನಾತಕೋತ್ತರ ಮತ್ತು ಬಿ.ಎಡ್‌. ಪದವಿಯನ್ನು ಪಡೆದುಕೊಂಡು ಬೋಧನಾ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ  ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ವರ್ಷದಿಂದ ಹೊಸದಾಗಿ ಬಿ.ಎ. ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನಿರಂತರ ಮೂರು ವರ್ಷಗಳ ಕಾಲ, ಪಠ್ಯಕ್ರಮದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುವುದು. ಈ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.  

2025-26ನೇ ಶೈಕ್ಷಣಿಕ ವರ್ಷದಲ್ಲಿ ಕ್ರೀಡೆ, ಕಲೆ, ಚಿತ್ರಕಲೆ, ಆಶುಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ, ಕಥೆ, ಕವಿತೆ, ರಸಪ್ರಶ್ನೆ, ಭಾವಗೀತೆ, ಭಕ್ತಿಗೀತೆ, ಪ್ರವಾಸ ಹೀಗೆ ಪಠ್ಯ ಮತ್ತು ಪಠ್ಯೆತರ ಚಟುವಟಿಕೆಗಳನ್ನು ವರ್ಷವಿಡಿ ಏರಿ​‍್ಡಸಿದ ಕೇರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತಿಯ ಬಹುಮಾನಗಳನ್ನು ನೀಡಿ ಪರಮಾಣಪತ್ರಗಳನ್ನು ಕೊಟ್ಟು ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ ಎಮ್‌.ಸಿ.ಎ. ಕಾಲೇಜಿನ ನಿರ್ದೆಶಕರಾದ ಡಾ.ಸೂರಜ್ ಜೈನ್, ಕಲಾ ವಿಭಾಗದ ಮುಖ್ಯಸ್ಥರಾದ ಡಾ. ಆರ್‌.ವಿ. ಚಿಟಗುಪ್ಪಿ, ವಾಣಿಶ್ರೀ ಕುಲಕರ್ಣಿ, ಕು. ಅರ್ಚನಾ ಪಾಟೀಲ, ಶ್ರೀರಕ್ಷಾ, ಚೇತನಾ, ಮಹಾಂತೇಶ,  ಅಶೋಕ.ಎಮ್ ರೇಣುಕಾ.ಜಿ. ಉಪಸ್ಥಿತರಿದ್ದರು. ಶಾರದಾ ಪ್ರಾರ್ಥಿಸಿದರು. ಮೇಘರಾಜ ಸ್ವಾಗತಿಸಿದರು. ಕು.ಸುಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ಅರ​‍್ಿತಾ ವಂದಿಸಿದರು ಹಾಗೂ ಕು. ಸ್ಪೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.