ಹೆಸ್ಕಾಂ ಕಚೇರಿ ಅಧಿಕಾರಿಗಳ ಬೀಳ್ಕೋಡುಗೆ ಗೌರವ ಸನ್ಮಾನ
Farewell ceremony for HESCOM office officials
ಹೆಸ್ಕಾಂ ಕಚೇರಿ ಅಧಿಕಾರಿಗಳ ಬೀಳ್ಕೋಡುಗೆ ಗೌರವ ಸನ್ಮಾನ
ಶಿಗ್ಗಾವಿ 07 : ಹೆಸ್ಕಾಂ ಕಚೇರಿಯ ತಾಂತ್ರಿಕ ಸಹಾಯಕ ಅಧಿಕಾರಿ ವಿನುತಾ ಎಸ್ ಹಾಗೂ ವಿಭಾಗಿಯ ಕಚೇರಿ ಶಿಗ್ಗಾವಿ ಉಪ ವಿಭಾಗದ ತಾಂತ್ರಿಕ ಸಹಾಯಕ ಅಧಿಕಾರಿ ಶಫಿ ಮುಲ್ಲಾ ಅವರನ್ನು ಆತ್ಮೀಯವಾಗಿ ಬಿಳ್ಕೋಡಲಾಯಿತು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಪೂರ್ವ ನಿಯೋಜಿತ ರಾಜ್ಯ ಸಂಘದ ಸದಸ್ಯ ಮಂಜುನಾಥ್ ಮಣ್ಣಣ್ಣವರ ಮಾತನಾಡಿ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ಒಂದು ಪ್ರಕ್ರಿಯೆ ಅವರ ಸೇವೆ ಸ್ಮರಣೀಯವಾಗಿರಬೇಕು ವ್ಯವಹಾರಿಕವಾಗಿರುವ ಇಂದಿನ ವ್ಯವಸ್ಥೆಯಲ್ಲಿ ಕಾರ್ಯಗಳ ಸೇವೆ ಯಾವುದೇ ಫಲ ಅಪೇಕ್ಷೆ ಇಟ್ಟುಕೊಳ್ಳದೆ ತಮ್ಮ ಕರ್ತವ್ಯ ಹಾಗೂ ಕಾರ್ಯವನ್ನು ನಿರ್ವಹಿಸುವ ಅಧಿಕಾರಿ ವರ್ಗ ಬಹಳ ವಿರಳ ಆದರೆ ವಿನಿತಾ ಎಸ್ ಮತ್ತು ಸಫಿ ಮುಲ್ಲಾ ಅವರು ಇಲಾಖೆ ಹಾಗೂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಅನನ್ಯ ಸಂಬಂಧ ಇಟ್ಟುಕೊಂಡು ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಫಲಾಪೇಕ್ಷ ಬಯಸದೆ ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ವರ್ಗಾವಣೆ ಹೊಂದಿರುವುದು ನಿಜಕ್ಕೂ ಬೇಜಾರು ತಂದಿದೆ ಎಂದರು.
ಈ ಸಂದರ್ಭದಲ್ಲಿ ನಾಗಯ್ಯ ಹಿರೇಮಠ, ಮುದುಕಪ್ಪ ವನಹಳ್ಳಿ, ಸುರೇಶ್ ಬಿಸನಹಳ್ಳಿ, ಅಬ್ದುಲ್ ಹರಪನಹಳ್ಳಿ, ಕೆ.ಟಿ. ಪಾಟೀಲ, ನವೀನ ಇಂಗಳಗಿ, ಈರಣ್ಣ ಎಲಿಗಾರ, ನವೀನ ಸಾಸನೂರ, ಚಂದ್ರು ಕೋಪರ್ಡೇ, ಹೆಸ್ಕಾಂ ಅಧಿಕಾರಿ ಹಾಗೂ ನೌಕರ ವರ್ಗ ಜೊತೆಗೆ ಗುತ್ತಿಗೆದಾರರು ಉಪಸ್ಥಿತರಿದ್ದರು
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 